For the best experience, open
https://m.suddione.com
on your mobile browser.
Advertisement

ಟೈಲರಿಂಗ್ ತರಬೇತಿ ಪಡೆದು ಸ್ವಾವಲಂಬಿಯಾಗಿ ಬದುಕಿ : ಶ್ರೀಮತಿ ಗೀತ ಬಿ

04:16 PM Mar 05, 2024 IST | suddionenews
ಟೈಲರಿಂಗ್ ತರಬೇತಿ ಪಡೆದು ಸ್ವಾವಲಂಬಿಯಾಗಿ ಬದುಕಿ   ಶ್ರೀಮತಿ ಗೀತ ಬಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್,ಚಿತ್ರದುರ್ಗ, ಮಾರ್ಚ್.05 : ಟೈಲರಿಂಗ್ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿಯಾಗಿ ಬದುಕುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತ ಬಿ. ಹೇಳಿದರು.

Advertisement
Advertisement

ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಹಿರೇಗುಂಟನೂರು ವಲಯದ ಕುರುಬರಹಳ್ಳಿಯ ಜ್ಞಾನವಿಕಾಸ ಕೇಂದ್ರದಲ್ಲಿ ಮೂರು ತಿಂಗಳುಗಳ ಕಾಲ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳಿಗೆ ಏರ್ಪಡಿಸಲಾಗಿದ್ದ ಹೊಲಿಗೆ ತರಬೇತಿ ಕೇಂದ್ರದ ಸಮಾರೋಪ ಸಮಾರಂಭದಲ್ಲಿ 25 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಕೇವಲ ಅಡುಗೆ ಮನೆಗಷ್ಟೆ ಮಹಿಳೆಯರು ಮೀಸಲಾಗದೆ ಇಂತಹ ಯೋಜನೆಗಳ ಸದಯಪಯೋಗಪಡಿಸಿಕೊಂಡು ಜೀವನದಲ್ಲಿ ಮುಂದೆ ಬರುವಂತೆ ತಿಳಿಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಪ್ರವೀಣ್ ಎ.ಜೆ. ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಶ್ರೀಮತಿ ಸಾಹೇರಭಾನು, ವಲಯ ಮೇಲ್ವಿಚಾರಕಿ ನಿಂಗಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶಿವಲೀಲಾ ಎಸ್.ಬಾಗೋಡಿ, ಸೇವಾಪ್ರತಿನಿಧಿ ವಸಂತ, ಈ ಸಂದರ್ಭದಲ್ಲಿದ್ದರು.

Advertisement
Tags :
Advertisement