Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ ಬಂಕ್ ನಲ್ಲಿ ಸಿಎನ್‌ಜಿ ಗ್ಯಾಸ್ ಅಭಾವ ; ಆಟೋ ಚಾಲಕರ ಆಕ್ರೋಶ

01:07 PM Jan 03, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಜನವರಿ. 03 : ನಗರದ ಬಳ್ಳಾರಿ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಆಟೋ ಚಾಲಕರಿಗೆ ಸಿಎನ್ ಜಿ ಸಿಗದೆ ಚಾಲಕರು ಪರದಾಡುವಂತೆ ಆಗಿದೆ. ನಗರದಲ್ಲಿ ಸಿಎನ್‌ಸಿ ಪೆಟ್ರೋಲ್ ಬಂಕ್ ಒಂದೇ ಇರುವ ಕಾರಣ ಸಿ ಎನ್ ಜಿ ಸ್ಟಾಕ್ ಕಡಿಮೆ ಬರುತ್ತಿದೆ. ಇದರಿಂದ ಆಟೋ ಚಾಲಕರಿಗೆ ಸಿ ಎನ್ ಜಿ ಸಿಗದೆ ಆಟೋ ಚಾಲನೆ ಮಾಡುವುದು ಕಷ್ಟಕರವಾಗಿದೆ.

Advertisement

 

ಆಟೋ ಚಾಲಕರು ಫೈನಾನ್ಸ್, ಬ್ಯಾಂಕ್ ಇನ್ನಿತರ ಕಡೆ ಸಾಲ ಮಾಡಿ ಆಟೋಗಳನ್ನು ತೆಗೆದುಕೊಂಡಿದ್ದಾರೆ ನಗರದಲ್ಲಿ 15 ರಿಂದ 20 ದಿನಗಳಿಂದ ಸಿ ಎನ್ ಜಿ ಸಿಗದ ಕಾರಣ ಆಟೋ ಚಾಲನೆ ಮಾಡಲು ಆಗುತ್ತಿಲ್ಲ ಇದರಿಂದ ಆಟೋ ಚಾಲಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಸಿ ಎನ್ ಜಿ ಸಿಗದ ಕಾರಣ ವಿದ್ಯಾರ್ಥಿಗಳನ್ನು ಶಾಲೆಗೆ ಸರಿಯಾದ ಸಮಯಕ್ಕೆ ಬಿಡಲು ಆಗುತ್ತಿಲ್ಲ ಎಂದು ಆಟೋ ಚಾಲಕರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ ಪೆಟ್ರೋಲ್ ಬಂಕ್ ನಲ್ಲಿ cng ಹಾಕಿಸಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕು. ಆದರೂ ಸಹ ಸಿಎಂಜಿ ಸಿಗುತ್ತಿಲ್ಲ ಎಂದು ಆಟೋ ಚಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಚಳ್ಳಕೆರೆ ನಗರದಲ್ಲಿ ಒಂದೇ ಸಿ ಎನ್ ಜೆ ಪಾಯಿಂಟ್ ಇರುವ ಕಾರಣ ಈ ಸಮಸ್ಯೆ ಆಗುತ್ತಿದೆ ಇನ್ನು ಬೇರೆ ಪೆಟ್ರೋಲ್ ಬಂಕ್ ಸಿ ಎನ್ ಜಿ ಬಂಕ್ ಆಗಲು ಸರ್ಕಾರ ಅನುಮತಿ ನೀಡಬೇಕು ಎಂದು ಆಟೋ ಚಾಲಕರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಆಟೋ ಚಾಲಕರದ ಮಂಜುನಾಥ್,  ವೆಂಕಟೇಶ್, ತಿಪ್ಪೇಸ್ವಾಮಿ, ಕೊಟ್ರೇಶ್, ವೀರೇಶ್ ಹಾಗೂ ಸಾರ್ವಜನಿಕರಾದ ಪ್ರಶಾಂತ್ ನಾಯಕ್ ಮತ್ತು ಇತರರು ಸ್ಥಳದಲ್ಲಿದ್ದರು.

Advertisement
Tags :
Auto driversbunkchallakerechitradurgaCNG gasfeaturedsuddioneಅಭಾವಆಕ್ರೋಶಆಟೋ ಚಾಲಕರುಚಳ್ಳಕೆರೆಚಿತ್ರದುರ್ಗಬಂಕ್ಸಿಎನ್‌ಜಿ ಗ್ಯಾಸ್ಸುದ್ದಿಒನ್
Advertisement
Next Article