Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕನ್ನಡ ನಾಡಿಗೆ ಕುವೆಂಪು ಅವರ ಕೊಡುಗೆ ಅಪಾರ : ಹೆಚ್. ಅನಂತಕುಮಾರ್

05:02 PM Nov 12, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ನ. 12 : ಕಣಿವೆ ಮಾರಮ್ಮ ಸಂಘ ಹಾಗೂ ನಗರ ಕೇಂದ್ರ ಗ್ರಂಥಾಲಯ ವತಿಯಿಂದ ಸೋಮವಾರ ನಗರದ ಮಕ್ಕಳ ಗ್ರಂಥಾಲಯ ಸಭಾಂಗಣದಲ್ಲಿ ಕುವೆಂಪು ನುಡಿ ನಮನ ಸಂಸ್ಕರಣ ಕಾರ್ಯಕ್ರಮ ಜರುಗಿತು.

 

Advertisement

ಅಂಕಣಕಾರ ಹಾಗೂ ಸಾಹಿತಿ ಹೆಚ್. ಅನಂತಕುಮಾರ್ ಮಾತನಾಡಿ, ಕುವೆಂಪು ಕನ್ನಡಕ್ಕೆ, ಕನ್ನಡ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ ಅವರ ಹಲವು ಮೊದಲುಗಳಿಗೆ ಸಾಕ್ಷಿ ಪ್ರಜ್ಞೆಯಾಗಿ ಕನ್ನಡದ ಅಸ್ತಿತ್ವದ ಅನನ್ಯತೆಯ ಹಿಮಾಲಯ ಸದೃಶ ವ್ಯಕ್ತಿ. ಅಷ್ಟೇ ಅಲ್ಲದೇ ಈ ನಾಡಿನ ಶಕ್ತಿ. ತಮ್ಮ ವೈಚಾರಿಕ ಬರಹ ಮತ್ತು ಚಿಂತನೆಗಳೊಂದಿಗೆ  ನೆಲಮೂಲ ಸಂಸ್ಕೃತಿಯ ಆಶಯಗಳನ್ನು ಮುನ್ನಲೆಯಾಗಿಸಿಕೊಂಡು ಶೋಷಿತರ, ದಮನಿತರ ಪರವಾದ ಬರವಣಿಗೆಯ ಮೂಲಕ ಗಟ್ಟಿಧ್ವನಿಯಾದವರು ಕುವೆಂಪು. ಅವರ ಗೊಬ್ಬರ ಕವಿತೆ ಇದಕ್ಕೆ ಸಾಕ್ಷಿ ಎಂದರು.

 

ಮುಖ್ಯ ಗ್ರಂಥಾಲಯಧಿಕಾರಿ ಬಸವರಾಜ್ ಕೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುಗದ ಕವಿ, ಜಗದ ಕವಿ, ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪು. ಸಮಾನ ಮನಸುಗಳು ಒಗ್ಗೂಡಿದಾಗ ವಿಷಯ ಮತ್ತಷ್ಟು. ಇಂದಿನ ಯುವ ಪೀಳಿಗೆ ಸುಖಾ ಸುಮ್ಮನೆ ಕಾಲಹರಣ ಮಾಡದೇ, ಇಂತಹ ಕಾಯ್ರ್ರಮಗಳಲ್ಲಿ ಭಾಗವಹಿಸುವ ಮೂಲಕ ಮಹಾನ್ ವ್ಯಕ್ತಿಗಳ ಜೀವನ, ಸಾಧನೆ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಯಾರ ಜೊತೆ, ಯಾವ ಪುಸ್ತಕಗಳ ಜೊತೆ ಸಾಂಗತ್ಯ ಬೆಳೆಸಿ ಒಡನಡಿಗಳಾಗುತ್ತೇವೆಯೋ ಅದೇ ರೀತಿ ನಮ್ಮ ಮನಸ್ಸು ಮತ್ತು ನಾವು ಬೆಳೆಯಲು ನಿದರ್ಶನವಾಗುತ್ತದೆ ಎಂದರು.

 

ಪರಿಸರ ಪ್ರೇಮಿ ಮಾಸ್ಟರ್ ಮಲ್ಲಿಕಾರ್ಜುನ್  ಮಾತನಾಡಿ, ಅತಿರಥ ಮಹಾಶಯ ಕವಿಗಳಲ್ಲಿ ಶ್ರೇಷ್ಠರು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ ಪುಣ್ಯರು ಕುವೆಂಪು. ಮಲೆನಾಡಿನ ಅಪಾರವಾದ  ಪ್ರಕೃತಿ ಸಾಂಗತ್ಯದಲ್ಲಿ ಬೆಳೆದು ಪ್ರೇರೇಪಿತರಾಗಿ ರಸ ಋಷಿಯಾದರು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಎಲ್ಲೇ ಇರು ಹೇಗೆ ಇರು ಕನ್ನಡಕ್ಕಾಗಿ ಹೋರಾಡು. ಹಲವಾರು ಕವನಗಳ ಮೂಲಕ ಹುರಿದುಂಬಿಸಿದರು. ಅವರು ರಚಿಸಿದ ಕಾವ್ಯ, ಕಥೆ, ಕವನ,ಕಾದಂಬರಿ, ಕೃತಿಗಳು ಇಂದಿಗೂ ಶ್ರೇಷ್ಠ ಎಂದರು.

 

ಜನಪದ ಸಾಹಿತಿ ಪ್ಯಾರೇಜಾನ್ ಕನ್ನಡ ಸ್ವ ರಚಿತ ಸ್ವರ ಗೀತೆಯನ್ನು ಹಾಡಿದರು. ಪ್ರಸಾರ ಭಾರತಿ ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಹ್ಲಾದ್, ಮಾಜಿ ಜಿ.ಪಂ.ಉಪಾಧ್ಯಕ್ಷ ಕೆ. ಪಾಪಯ್ಯ ಮತ್ತಿತರು ಉಪಸ್ಥಿತರಿದ್ದರು.

Advertisement
Tags :
bengaluruchitradurgakannadaKannadaNewssuddionesuddionenewsಕನ್ನಡಕನ್ನಡ ನಾಡುಕನ್ನಡವಾರ್ತೆಕನ್ನಡಸುದ್ದಿಕುವೆಂಪುಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹೆಚ್. ಅನಂತಕುಮಾರ್
Advertisement
Next Article