Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೋಟಿ ವೃಕ್ಷ ಅಭಿಯಾನ : ಪ್ರಸಕ್ತ ವರ್ಷದಲ್ಲಿ ಐವತ್ತು ಸಾವಿರ ಗಿಡಗಳನ್ನು ನೆಡಲಾಗುವುದು : ದೇನಾ ಭಗತ್ ಸ್ವಾಮೀಜಿ

07:58 PM Jul 03, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

 

Advertisement

ಸುದ್ದಿಒನ್, ಚಳ್ಳಕೆರೆ:  ಕೋಟಿ ವೃಕ್ಷ ಅಭಿಯಾನದಡಿ ಔಷಧಿ ಹಾಗೂ ಪ್ರಾಣಿ ಪಕ್ಷಿಗಳಿಗೆ ಜಾನುವಾರುಗಳಿಗೆ ಉಪಯೋಗವಾಗುವಂತಹ ಗಿಡಗಳನ್ನು ಬೆಳೆಸಲಾಗುತ್ತದೆ. ಅಮೃತ ಮಹಲ್ ಕಾವಲಿನಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೇಖಲಗೆರೆ ಗ್ರಾಮದ ರಾಜಯೋಗ ವಿದ್ಯಾ ಶ್ರಮದ ದೇನಾ ಭಗತ್ ಸ್ವಾಮೀಜಿ ಹೇಳಿದರು.

ಚಳ್ಳಕೆರೆ ತಾಲೂಕಿನ  ರೇಕಲಗೆರೆ ಅಮೃತ್ ಮಹಲ್ ಕಾವಲಿನಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,  ಸರ್ಕಾರದ ಒಪ್ಪಿಗೆಯಂತೆ ರಾಜ್ಯಪಾಲರ ಅಂಕಿತವಾಗಿ ನಮ್ಮ ಟ್ರಸ್ಟ್ ಸುಪರ್ದಿಗೆ 1500 ಎಕರೆ ಕಾವಲು ಭೂಮಿಯನ್ನು ಮೂವತ್ತು ವರ್ಷದ ಅವಧಿಗೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಪರಿಸರ ಸಂರಕ್ಷಣೆ, ಔಷಧೀಯ ಗಿಡಗಳ ಬೆಳವಣಿಗೆ, ಜಾನುವಾರುಗಳಿ ಹುಲ್ಲುಗಾವಲು ಮತ್ತು ಭೂಮಿಯ ಫಲವತ್ತತೆ ಕಾಪಾಡುವ ಜವಾಬ್ದಾರಿ ನೋಡಿಕೊಳ್ಳಬೇಕಿದೆ.

ಇದರಂತೆ ಈಗಾಗಲೇ ಬೇವು, ಅರಳಿ, ಅತ್ತಿ, ಹೊಂಗೆ, ಹುಣಸೆ, ಗೋಣಿನಲ್ಲಿ ಸೇರಿದಂತೆ ವಿವಿಧ ತಳಿಯ ಐವತ್ತು ಸಾವಿರ ಗಿಡ ನೆಡಲಾಗಿದೆ. ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತದೆ. ಜಾನುವಾರುಗಳಿಗಾಗಿ ಗೋಕಟ್ಟೆ ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಐವತ್ತು ಸಾವಿರ ಗಿಡ ನಡೆಸಲು ಕ್ರಮವಹಿಸಲಾಗಿದೆ.

ಜಾನುವಾರುಗಳ ಹುಲ್ಲುಗಾವಲಿಗಾಗಿ ಮತ್ತು ಸಮೃದ್ಧ ಗಿಡಗಳ ಬೆಳವಣಿಗಾಗಿ ಜಾಲಿ, ತುಗ್ಲಿ ಗಿಡಗಳನ್ನು ತೆರವುಗೊಳಿಸಿ ಹೊಸ ಗಿಡ ಹಾಕಲಾಗಿದೆ. ಇದನ್ನೇ ಕೆಲವರು ತಪ್ಪಾಗಿ ತಿಳಿದು ಅರಣ್ಯ ನಾಶ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಸಾಮಾಜಿಕವಾಗಿ ಒಳ್ಳೆಯ ಕೆಲಸ ಮಾಡುವಾಗ ನಿಂಧನೆ ಮತ್ತು ಅಪಮಾನ ಬರುವುದು ಸಹಜ. ಒಮ್ಮೆ ಪರಾಮರ್ಶೆ ಮಾಡಿ ಮಾತನಾಡಬೇಕೆಂದು ಮನವಿ ಮಾಡಿದರು.

ಸರ್ಕಾರದ ಹಂತದಲ್ಲಿ ಒಬ್ಬ ವ್ಯಕ್ತಿಗೆ 1500 ಎಕರೆ ಭೂಮಿ ಕೊಡಲು ಸಾಧ್ಯವಿಲ್ಲ. ಅಧಿಕಾರಿಗಳ ಮತ್ತು ಇಲಾಖೆಯ ಸುಪರ್ದಿನಲ್ಲೆ ಭೂಮಿ ಇದೆ. ಸರ್ಕಾರದ ಸೂಚನೆಯಂತೆ ಅರಣ್ಯೀಕರಣ ಮಾಡಲಾಗುತ್ತಿದೆ ಎಂದು ಈಗಾಲೆ ಹಾಕಿರುವ ಗಿಡಗಳನ್ನು ಸಂರಕ್ಷಣೆ ಮಾಡಲಾಗುತ್ತಿದ್ದು ಅವುಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವಂಥ ಕಾರ್ಯ ನಡೆಯುತ್ತಿದೆ. ಹಾಕಿದ ಗಿಡಗಳ ರಸಂ ರಕ್ಷಣೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಮಯದಲ್ಲಿ ಗಿಡ ಬೆಳೆಸುವ ಕಾರ್ಮಿಕರಾದ ದೇವೆಂದ್ರ, ಮಾದೇಶ್, ಎ. ಪಾಲಯ್ಯ, ತಿಮ್ಮಣ್ಣ, ಸುರೇಶ್ ಮತ್ತಿತರರು ಇದ್ದರು.

Advertisement
Tags :
bengaluruchallakerechitradurgaDena Bhagat SwamijiKoti Vriksha Abhiyansaplingssuddionesuddione newsಕೋಟಿ ವೃಕ್ಷ ಅಭಿಯಾನಗಿಡಗಳುಚಳ್ಳಕೆರೆಚಿತ್ರದುರ್ಗದೇನಾ ಭಗತ್ ಸ್ವಾಮೀಜಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article