Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ : ಶ್ರೀಮತಿ ಶಿವಲೀಲಾ ಎಸ್.ಬಾಗೋಡಿ

02:35 PM Jun 26, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್.26 : : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಕಸಬಾ ಎ.ವಲಯದ ಮುಸಂಡಿಹಾಳ್‍ನ ಬಸವೇಶ್ವರ
ಜ್ಞಾನ ವಿಕಾಸ ಕೇಂದ್ರದಲ್ಲಿ ನಾನು ಓದಿದ ಪುಸ್ತಕ ವಿಮರ್ಶೆ ಕಾಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

Advertisement

ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶಿವಲೀಲಾ ಎಸ್.ಬಾಗೋಡಿ ಮಾತನಾಡಿ ಧರ್ಮಸ್ಥಳದ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಪ್ರತಿ ತಿಂಗಳು ಮಹಿಳೆಯರಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡುವ ಸಭೆ ನಡೆಸಲಾಗುತ್ತಿದೆ. ಮೊಬೈಲ್, ಫೇಸ್‍ಬುಕ್, ವಾಟ್ಸ್ ಅಪ್ ಗಳಲ್ಲಿಯೇ ಎಲ್ಲರೂ ತಲ್ಲೀನರಾಗಿರುವ ಈ ಸಂದರ್ಭದಲ್ಲಿ ಪುಸ್ತಕಗಳನ್ನು ಓದಿ ವಿಮರ್ಶೆ ಮಾಡುವುದು ತುಂಬಾ ವಿರಳ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದರು.

ಗೀತ, ಭಾಗ್ಯಮ್ಮ, ಸವಿತ, ಸಾವಿತ್ರಿ, ವೀಣ, ಲತಾ, ಶಶಿಕಲಾ, ಗೌರಮ್ಮ, ಅನುಸೂಯ, ನೀಲಮ್ಮ ಹಾಗೂ ಸಂಘದ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement
Tags :
bengaluruchitradurgaknowledgeMrs. Shivaleela S. Bagodireading bookssuddionesuddione newsಚಿತ್ರದುರ್ಗಪುಸ್ತಕಬೆಂಗಳೂರುಶ್ರೀಮತಿ ಶಿವಲೀಲಾ ಎಸ್.ಬಾಗೋಡಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article