ಕೆ.ಎಚ್.ರಂಗನಾಥ್ ಮೊಮ್ಮಗ ಹರ್ಷವರ್ಧನ ನಿಧನ
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ .02 : ಮಾಜಿ ಸಚಿವ ದಿವಂಗತ ಕೆ.ಎಚ್.ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ ( 33) ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಕಾಲಿಕವಾಗಿ ನಿಧನರಾದರು.
ತಂದೆ ಕೆಪಿಸಿಸಿ ಸದಸ್ಯ ವಿಜಯಕುಮಾರ್, ತಾಯಿ ಇದ್ದಾರೆ.
ಹಿರಿಯೂರು ತಾಲೂಕಿನ ಹೊಸಹೊಳನಾಡು ಗ್ರಾಮದಲ್ಲಿರುವ ಕೆ.ಎಚ್.ರಂಗನಾಥ್ ಅವರ ಸಮಾಧಿ ಬಳಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಸಂಸ್ಜಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ : ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ.ಎಚ್.ರಂಗನಾಥ್ ಅವರ ಕುಟುಂಬ ಕುಡಿ, ಕೆಪಿಸಿಸಿ ಸದಸ್ಯ ವಿಜಯಕುಮಾರ್ ಅವರ ಏಕೈಕ ಪುತ್ರ ಹರ್ಷವರ್ಧನ್ ನಿಧನ ಆಘಾತವನ್ನು ಉಂಟು ಮಾಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ದೇಶದಲ್ಲಿ ಸೇವೆ ಮಾಡುವ ಸಂಕಲ್ಪ ಕೊಟ್ಟಿದ್ದ ಹರ್ಷವರ್ಧನ್, ಚಿಕ್ಕ ವಯಸ್ಸಿನಲ್ಲಿಯೇ ಸೇವಾ ಕಾರ್ಯದ ಮೂಲಕ ಜನಾನುರಾಗಿಯಾಗಿದ್ದರು. ಇನ್ನೂ ಬಾಳಿ ಬದುಕಬೇಕಿದ್ದ ಹರ್ಷವರ್ಧನ್ ಅಕಾಲಿಕ ನಿಧನ ಅತ್ಯಂತ ನೋವು ತರಿಸಿದೆ
ಹರ್ಷವರ್ಧನ ಅವರ ನಿಧನದಿಂದ ನೊಂದಿರುವ ಕುಟುಂಬ ವರ್ಗಕ್ಕೆ ದುಖಃವನ್ನು ಭರಿಸುವ ಶಕ್ತಿ ಬುದ್ಧ, ಬಸವರು ನೀಡಲೆಂದು ಪ್ರಾರ್ಥಿಸಿದ್ದಾರೆ.