For the best experience, open
https://m.suddione.com
on your mobile browser.
Advertisement

ಮಕ್ಕಳನ್ನು ಮೊಬೈಲ್‍ನಿಂದ ದೂರವಿಡಿ, ಅದರ ಬದಲು ಪುಸ್ತಕ ನೀಡಿ : ಕೆ.ಪಿ.ಎಂ.ಗಣೇಶಯ್ಯ

09:52 PM Mar 04, 2024 IST | suddionenews
ಮಕ್ಕಳನ್ನು ಮೊಬೈಲ್‍ನಿಂದ ದೂರವಿಡಿ  ಅದರ ಬದಲು ಪುಸ್ತಕ ನೀಡಿ   ಕೆ ಪಿ ಎಂ ಗಣೇಶಯ್ಯ
Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.04 : ಶಾಲಾ ಕಾಲೇಜುಗಳಲ್ಲಿ ಸಾಂಸ್ಕøತಿಕ ನೀತಿ ರೂಪುಗೊಳ್ಳಬೇಕು. ನಲಿಕಲಿ, ಚಿಗುರು, ಆಟಪಾಠಗಳ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಬೇಕು. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳು ಸಾಂಸ್ಕøತಿಕವಾಗಿ ಬೋಧಿಸಿದಾಗ ಪರಿಣಾಮಕಾರಿಯಾಗಿರುತ್ತದೆ ಎಂದು ಹಿರಿಯ ರಂಗ ನಿರ್ದೇಶಕ ಹಾಗೂ ಕಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಅಭಿಪ್ರಾಯಪಟ್ಟರು.

Advertisement
Advertisement

ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ  ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.

Advertisement

Advertisement
Advertisement

ಮಕ್ಕಳಿಗೆ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಬೇಕು. ಸಣ್ಣಕತೆಗಳ ಮೂಲಕ ಮಕ್ಕಳಲ್ಲಿ ಜೀವನಮೌಲ್ಯಗಳನ್ನು ಬೆಳಸಬಹುದು. ಮೊಬೈಲ್‍ನಿಂದ ಮಕ್ಕಳನ್ನು ದೂರವಿಡಿ ಅದರ ಬದಲು ಪುಸ್ತಕ ನೀಡಿ. ಓದುವ ಹವ್ಯಾಸ ಬೆಳಸಿದರೆ ಅವರಲ್ಲಿ ಭಾಷಾಜ್ಞಾನ ಬೆಳಸಿದಂತಾಗುತ್ತದೆ. ಕನ್ನಡನಾಡಿನ ಕವಿ, ಕೃತಿ, ಕಾದಂಬರಿಗಳನ್ನು ಹೆಚ್ಚಾಗಿ ಓದುವಂತೆ ಮಕ್ಕಳಿಗೆ ಪ್ರೇರೇಪಿಸಬಹುದು ಎಂದು ತಿಳಿಸಿದರು.
ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಮಾತನಾಡಿ, ಪಾಠೋಪಕರಣಗಳ ಪರಿಚಯ ಮಾಡಿಸಬೇಕು. ಪಠ್ಯಪುಸ್ತಕಗಳಲ್ಲಿನ ವಿಷಯಗಳನ್ನು ಆಟೋಟಗಳಿಂದ ಪರಿಚಯಿಸಬೇಕು. ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಓದುವ ಬರೆಯುವ ಹವ್ಯಾಸ ಮೂಡುವಂತೆ ಮನೆಯಲ್ಲಿ ಪೋಷಕರು ಉತ್ತಮ ವಾತಾವರಣ ನಿರ್ಮಾಣ ಮಾಡಿ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆ ಟ್ರಸ್ಟಿ ಶಿಲ್ಪಾ ಅವರಾದಿ, ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಅಧ್ಯಕ್ಷೆ ಅನಸೂಯ ಬಾದರದಿನ್ನಿ, ಕಲಾವಿದೆ ಶೋಭಾ ಮಲ್ಲಿಕಾರ್ಜುನ್, ಮುಖ್ಯಶಿಕ್ಷಕಿ ನಾಗಶ್ರೀ, ಶಿಕ್ಷಕಿಯರಾದ ಸೀಮಾ, ಆಯಿಷಾ ಸಿದ್ದಿಕಿ, ನೀಸಾ ಅವರಾದಿ, ನೈತಿ,್ರ ರಂಗಭೂಮಿ ಕಲಾವಿದರಾದ  ಗುರುಕಿರಣ, ರಾಘವೇಂದ್ರ ಇದ್ದರು.

Advertisement
Tags :
Advertisement