Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೌಡ್ಯ ಮುಕ್ತ ವೈಜ್ಞಾನಿಕ ಆಕಾಡಮಿ ಸ್ಥಾಪನೆಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ ಒತ್ತಾಯ

03:01 PM Feb 05, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 05 :  ಸಾರ್ವಜನಿಕರಲ್ಲಿನ ಮೌಡ್ಯತೆಯನ್ನು ನಿವಾರಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಕರ್ನಾಟಕ ಸರ್ಕಾರದ ವತಿಯಿಂದ ಮೌಡ್ಯ ಮುಕ್ತ ವೈಜ್ಞಾನಿಕ ಆಕಾಡಮಿ ಸ್ಥಾಪನೆ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಮೌಢ್ಯ ನಿವಾರಣೆಗೆ ವೈಜ್ಞಾನಿಕ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಚಿತ್ರದುರ್ಗ ಶಾಖೆಯವತಿಯಿಂದ ಮನವಿ ಸಲ್ಲಿಸಿತು.

Advertisement

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ.) ಜನ ಸಾಮಾನ್ಯರು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯ, ವೈಜ್ಞಾನಿಕ ಕೌಶಲ್ಯ, ಚಿಂತನಾ ಶೀಲತೆ, ಮನಸ್ಸಿನ ಸದೃಢತೆ ಬೆಳಸಲು ಶ್ರಮಿಸಿಸುತ್ತಿದೆ. ಶೈಕ್ಷಣಿಕ. ಶೈಕ್ಷಣಿಕ ವೈಜ್ಞಾನಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ಕಾರ್ಯಗಳನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳುತ್ತಾ ಜನಮನದಲ್ಲಿ ನೆಲೆಗೊಂಡಿದೆ.

ವಿಜ್ಞಾನ-ಸಾಹಿತ್ಯ-ಸಂಸ್ಕೃತಿಸಮಾಗಮಗೊಳಿಸಿ ಮಕ್ಕಳಲ್ಲಿ ಮಾನವೀಯತೆ, ಸೌಹಾರ್ದತೆ, ಪ್ರಯೋಗ ಶೀಲತೆ ಬೆಳೆಸುವುದು ಪರಿಷತ್ತಿನ ಧೈಯವಾಗಿದೆ. ವೈಚಾರಿಕ ಚಿಂತಕರ ಛಾವಡಿಯಿಂದ ಬಂದ ತಾವು ಮೌಡ್ಯತೆ ಕಾನೂನು ಜಾರಿಗೆ ತಂದಿದ್ದು ಅನೇಕ ಮುಗ್ಧ ಜನರಿಗೆ ಅನುಕೂಲವಾಗಿದೆ, ಆದರೆ ಜನರಲ್ಲಿ ಮುಖ್ಯವಾಗಿ ಕಾನೂನಿಗಿಂತ ಜಾಗೃತಿ ಮೂಡಿಸಬೇಕಾದುದು ನಮ್ಮ ಆಶಯವಾಗಿದೆ.

ಸದಾ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯುಕ್ತ ಮೌಡ್ಯ ಮುಕ್ತ ವೈಜ್ಞಾನಿಕ ಆಕಾಡಮಿಸರ್ಕಾರದ ವತಿಯಿಂದ ಸ್ಥಾಪನೆ ಮಾಡುವುದು. ನಮ್ಮ ಪರಿಷತ್ತು ವತಿಯಿಂದ ಪ್ರತಿ ವರ್ಷ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ 1 ಕೋಟಿ 50 ಲಕ್ಷ ಅನುದಾನ ನೀಡುವುದು. ಪರಿಷತ್ತು ವತಿಯಂದ ಪ್ರಕಟವಾಗುತ್ತಿರುವ ವಿಜ್ಞಾನ ಸಿರಿ ಮಾಸ ಪತ್ರಿಕೆಯನ್ನು ಗ್ರಾಮ ಪಂಚಾಯ್ತಿ ಮತ್ತು ಶಾಲಾ ಖಾಲೇಜು ಗ್ರಂಥಾಲಯಗಳಿಗೆ ಖರೀದಿಸಲು ಗ್ರಾಮ ಪಂಚಾಯ್ತಿಗೆ ಶಿಕ್ಷಣ ಇಲಾಖೆಗೆ ಆದೇಶ ಮಾಡುವುದು.

ಚಿಕ್ಕಬಳ್ಳಾಪುರದ ಹತ್ತಿರ ಶಿಡ್ಲಘಟ್ಟದ ಬಳಿ ನಿರ್ಮಾಣ ಮಾಡುತ್ತಿರುವ 55 ಕೋಟಿ ವಿಜ್ಞಾನ ಗ್ರಾಮಕ್ಕೆ ಪ್ರತಿವರ್ಷ 10 ಕೋಟಿ ಅನುದಾನ ನೀಡುವುದು. ಪ್ರತಿವರ್ಷ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ ಸರ್ಕಾರಿ ನೌಕರರಿಗೆ ಎರಡು ದಿನಗಳ ಕಾಲ ಅನ್ಯ ಕಾರ್ಯ ನಿಮಿತ್ತ ಪರಿಗಣಿಸಲು ಸಂಭಂದಿಸಿದ ಇಲಾಖೆಗಳಿಗೆ ಆದೇಶ ಮಾಡುವುದು.

ಕಲ್ಯಾಣ ಕರ್ನಾಟಕದಲ್ಲಿ ಮೌಡ್ಯ ಮುಕ್ತ ನಿವಾರಣೆಗೆ ವೈಜ್ಞಾನಿಕ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡುವುದು. ಶಾಲಾ ಕಾಲೇಜು ಹಂತದ ಮಕ್ಕಳಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಲು ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ವೈಜ್ಞಾನಿಕ ಜಾಗೃತಿ ಜಾಥಾ ಮಾಡಲು ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಗಂ, ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳಾದ ಜ್ಞಾನಮೂರ್ತಿ, ಎಂ.ರಂಗಪ್ಪ, ಕೆಂಚಪ್ಪ, ಲವಕುಮಾರ್, ಮಹಿಳಾ ಪದಾಧಿಕಾರಿಗಳಾದ ಶೈಲಾಜಬಾಬು, ದೇವಕಿ ರುದ್ರಪ್ಪ ಗೀತಾ ಸದಸ್ಯರಾದ ರಾಜಶೇಕರ, ಹನುಮಂತಪ್ಪ ಕಾಟಪ್ಪ, ಜನಾರ್ಧನ ಶೆಟ್ಟಿ ಗೀರೀಶ್ ಭಾಗವಹಿಸಿದ್ದರು.

Advertisement
Tags :
chitradurgaEstablishmentKarnataka State Council of Scientific ResearchMaudya Mukta Scientific Academysuddionesuddione newsurgesಒತ್ತಾಯಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ಚಿತ್ರದುರ್ಗಮೌಡ್ಯ ಮುಕ್ತ ವೈಜ್ಞಾನಿಕ ಆಕಾಡಮಿಸುದ್ದಿಒನ್ಸುದ್ದಿಒನ್ ನ್ಯೂಸ್ಸ್ಥಾಪನೆ
Advertisement
Next Article