For the best experience, open
https://m.suddione.com
on your mobile browser.
Advertisement

ನಂದನಹೊಸೂರಿನಲ್ಲಿ  ಕರಿಯಮ್ಮದೇವಿ ದೇವಸ್ಥಾನ ಲೋಕಾರ್ಪಣೆ | ದೇವಸ್ಥಾನದಂತೆ ಬದುಕನ್ನೂ ಸುಂದರವಾಗಿರಿಸಿಕೊಳ್ಳಿ : ಬಸವಪ್ರಭು ಸ್ವಾಮೀಜಿ

05:58 PM Feb 13, 2024 IST | suddionenews
ನಂದನಹೊಸೂರಿನಲ್ಲಿ  ಕರಿಯಮ್ಮದೇವಿ ದೇವಸ್ಥಾನ ಲೋಕಾರ್ಪಣೆ   ದೇವಸ್ಥಾನದಂತೆ ಬದುಕನ್ನೂ ಸುಂದರವಾಗಿರಿಸಿಕೊಳ್ಳಿ   ಬಸವಪ್ರಭು ಸ್ವಾಮೀಜಿ
Advertisement

Advertisement

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.13  : ಸುಂದರವಾದ ದೇವಸ್ಥಾನ ಕಟ್ಟಿರುವಂತೆ ಬದುಕನ್ನು ಸುಂದರವಾಗಿರಿಸಿಕೊಳ್ಳಿ ಎಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ತಿಳಿಸಿದರು.

Advertisement

ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದಲ್ಲಿ ಕರಿಯಮ್ಮದೇವಿ ದೇವಸ್ಥಾನ ಪ್ರಾರಂಭೋತ್ಸವ, ನೂತನ ವಿಗ್ರಹ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಪ್ರತಿಷ್ಠಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ಮುರುಘಾಮಠಕ್ಕೂ ನಂದನಹೊಸೂರಿಗೆ ಅವಿನಾಭಾವ ಸಂಬಂಧವಿದೆ. ಮಠದ ಭಕ್ತರು ಎಲ್ಲಿ ಸಿಗುತ್ತಾರೆಂದರೆ ಅದು ನಂದನಹೊಸೂರಿನಲ್ಲಿ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಮುರುಘಾಮಠದ ಕಾರ್ಯಕ್ರಮ ನಡೆಸಿಕೊಟ್ಟ ಕೀರ್ತಿ ನಂದನಹೊಸೂರಿಗೆ ಸಲ್ಲುತ್ತದೆ. ಮುರುಗೇಶನ ಭಕ್ತರು ಈ ಗ್ರಾಮದಲ್ಲಿದ್ದಾರೆ. ಭಕ್ತಿಯ ಸಾಮ್ರಾಜ್ಯವಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಎಲ್ಲಾ ಜನಾಂಗದವರು ಇಲ್ಲಿ ಪ್ರೀತಿ, ಸಹಭಾಳ್ವೆ, ಸಹೋದರತೆ, ಸಮಾನತೆಯಿಂದ ಬದುಕುತ್ತಿದ್ದಾರೆ. ಒಳ್ಳೆಯದು ಮಾಡುವಾಗ ನಿಂದನೆ ಇದ್ದೆ ಇರುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ನಂದನಹೊಸೂರು ಗ್ರಾಮ ಕೂಡ ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ ಎಂದು ಹೇಳಿದರು.

ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಸ್ವಾಮೀಜಿ ಮಾತನಾಡಿ ಊರಿಗೊಂದು ದೇವಸ್ಥಾನವಿರಬೇಕು. ಆದರೆ ಕೇರಿಗೊಂದು, ಓಣಿಗೊಂದು, ಜಾತಿಗೊಂದು ಬೇಕಿಲ್ಲ. ದೇವಸ್ಥಾನಕ್ಕೆ ಕೊಟ್ಟ ಸಂಭ್ರಮ ಆಸಕ್ತಿಯನ್ನು ಮಕ್ಕಳ ಶಿಕ್ಷಣಕ್ಕೆ ಕೊಡದಿರುವುದು ದೊಡ್ಡ ದುರಂತ. ನಮ್ಮ ದೇಶದ ಆಚಾರ, ವಿಚಾರ, ಸಂಸ್ಕøತಿಯನ್ನು ಬಿಟ್ಟುಕೊಡಬಾರದು. ನಾಗರೀಕ ಪ್ರಪಂಚದ ನಾಗಾಲೋಟದಲ್ಲಿ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಯಾವುದೇ ಮನೆಗೆ ಬಂದ ಹೆಣ್ಣನ್ನು ಮಗಳಂತೆ ಕಂಡಾಗ ಯಾವ ಮನೆಯಲ್ಲಿಯೂ ಜಗಳವಿರುವುದಿಲ್ಲ. ಅತ್ತೆ ಸೊಸೆ ಹೊಂದಿಕೊಂಡು ಹೋಗಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು. ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸ್ನಾನ ಮಾಡಿದಾಗ ಮನಸ್ಸಿಗೆ ಹೇಗೆ ಉಲ್ಲಾಸವಾಗುತ್ತದೋ ಅದೇ ರೀತಿ ದುಶ್ಚಟ, ದುರಾಲೋಚನೆಗಳನ್ನು ತ್ಯಜಿಸಿದಾಗ ಮನಸ್ಸು, ಆರೋಗ್ಯ ಚೆನ್ನಾಗಿರುತ್ತದೆ. ಡಚ್ಚರು, ಪೋರ್ಚುಗೀಸರು, ಮಹಮದ್ ಗಝನಿ ಇವರುಗಳೆಲ್ಲಾ ಭಾರತದ ಮೇಲೆ ದಂಡೆತ್ತಿ ಬಂದು ಸಂಪತ್ತನ್ನೆಲ್ಲಾ ದೋಚಿದ್ದಾರೆ. ನಮ್ಮ ದೇಶದ ಸಂಸ್ಕøತಿ, ಆಚಾರ, ವಿಚಾರಗಳನ್ನು ಲೂಟಿ ಹೊಡೆಯಲು ಅವರಿಂದ ಆಗಲಿಲ್ಲ. ಅದಕ್ಕಾಗಿ ಭಾರತದ ಸಂಸ್ಕøತಿ ಉಳಿಯಬೇಕಾದರೆ ಗುರು-ಹಿರಿಯರನ್ನು ಗೌರವಿಸುವುದನ್ನು ಮಕ್ಕಳಿಗೆ ಚಿಕ್ಕಂದಿನಿಂದಲೆ ಹೇಳಿಕೊಡಬೇಕು ಎಂದರು.

ಬಿಜೆಪಿ ಯುವ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚಿನ ಬಹುಮತ ನೀಡಿರುವುದು ನಂದನಹೊಸೂರು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಬಿಜೆಪಿ ಭಾವುಟವೇ ಹಾರದ ಕಾಲದಲ್ಲಿ ಇಲ್ಲಿ ಪಕ್ಷದ ಭಾವುಟವನ್ನು ಹಾರಿಸಿದ್ದೀರಿ. ನಮ್ಮ ತಂದೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರು ಕ್ಷೇತ್ರಾದ್ಯಂತ 174 ದೇವಸ್ಥಾನಗಳಿಗೆ ಹಣ ನೀಡಿದ್ದಾರೆ. ಅವರ ಬಳಿ ಮಾತನಾಡಿ ದೇವಸ್ಥಾನಕ್ಕೆ ಕಮಾನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಅಲೆಯಲ್ಲಿ ಬಿಜೆಪಿ.ಗೆದ್ದಿದೆ ಎಂದರೆ ಅದಕ್ಕೆ ದೈವಬಲ, ಮತದಾರರು, ಕಾರ್ಯಕರ್ತರ ಪರಿಶ್ರಮವಿದೆ. ಗ್ಯಾರೆಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಒಂದೆ ಒಂದು ಕಾಮಗಾರಿಗೆ ಗುದ್ದಲಿ ಹಾಕಿರುವುದನ್ನು ನೋಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವೈಫಲ್ಯತೆಯನ್ನು ಟೀಕಿಸಿದರು.

ವಕೀಲ ಜಿ.ಹೆಚ್.ಶಿವಕುಮಾರ್, ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೂಡಲಿಗಿರಿಯಪ್ಪ, ಎನ್.ಎಸ್.ರಮೇಶ್, ಎಂ.ಪ್ರವೀಣ್ ಇವರುಗಳು ಮಾತನಾಡಿದರು.

Tags :
Advertisement