For the best experience, open
https://m.suddione.com
on your mobile browser.
Advertisement

ನವೆಂಬರ್ 18 ರಂದು ಕನಕ ಜಯಂತಿ : ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ : ಬಿ.ಟಿ.ಜಗದೀಶ್

06:38 PM Nov 16, 2024 IST | suddionenews
ನವೆಂಬರ್ 18 ರಂದು ಕನಕ ಜಯಂತಿ   ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ   ಬಿ ಟಿ ಜಗದೀಶ್
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ನ. 16 : ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ನ. 18 ರಂದು ನಗರದಲ್ಲಿ ಆಚರಣೆ ಕನಕಶ್ರೀ, ಸಮಾಜದ ಸುಧಾಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ತಿಳಿಸಿದ್ದಾರೆ.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನಕದಾಸರ ಜಯಂತಿಯನ್ನು ಮುಂದಿನ ದಿನಮಾನದಲ್ಲಿ ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಗ್ರಾಮ ಹೋಬಳಿ ಮಟ್ಟದಲ್ಲಿಯೂ ಸಹಾ ಮಾಡುವ ಬಗ್ಗೆ ಸಂಘ ಆಲೋಚನೆ ನಡೆಸುತ್ತಿದೆ ಇದಕ್ಕೆ ಬೇಕಾದ ತಯಾರಿಯನ್ನು ಮಾಡಲಾಗುತ್ತಿದೆ. ಇದ್ದಲ್ಲದೆ ನಮ್ಮ ಸಮಾಜದ ಜನಗಣತಿಯನ್ನು ಸಹಾ ಪ್ರಾರಂಭ ಮಾಡಲಾಗುತ್ತದೆ. ಇದರೊಂದಿಗೆ ಸಮಾಜದ ಅಭೀವೃದ್ದಿಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ನ. 18 ರಂದು ಜಿಲ್ಲಾಡಳಿತ, ಜಿಲ್ಲಾ ಕುರುಬರ, ತಾಲ್ಲೂಕು, ಮಹಿಳಾ ಕನಕ ನೌಕರರ ಹಾಗೂ ಸಮಾಜದ ಇತರೆ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಕನಕದಾಸ ಜಯಂತ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 9.30ಕ್ಕೆ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ಪ್ರತಿಮೆಯ ಬಳಿ ಶ್ರೀ ಈಶ್ವರಾನಂದ ಶ್ರೀಗಳು ಮಾಲಾರ್ಪಣೆಯನ್ನು ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಈ ಮೆರವಣಿಗೆಯಲ್ಲಿ ಡೊಳ್ಳು, ಭಜನಾ ತಂಡ, ಸೋಬಾನೆ ತಂಡ, ಗೊರವರ ತಂಡ ನಂಧಿಧ್ವಜ, ಕರಡಿ ಚಮ್ಮಾಳ, ಕೋಲಾಟದಂತಹ ಸಾಂಸ್ಕøತಿಕ ತಂಡದೊಂದಿಗೆ ಮರೆವಣಿಗೆಯೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಿ ಗಾಂಧಿವೃತ್ತ, ಮೈಸೂರು ಬ್ಯಾಂಕ್ ವೃತ್ತ, ಮಾರ್ಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತರಾಸು ರಂಗಮಂದಿರವನ್ನು ತಲುಪಲಿದೆ.

ತರಾಸು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ.ಬಿ.ಕೆ.ರವಿ ಕನಕದಾಸರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಂಘದಿಂದ ನೀಡುವ ಕನಕಶ್ರೀ ಪ್ರಶಸ್ತಿಗೆ ವೀರಶೈವ ಸಮಾಜದ ಮುಖಂಡರಾದ ಷಣ್ಮುಖಪ್ಪ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸತೀಶ್, ಸಮಾಜ ಸೇವೆಯಲ್ಲಿ ಲಿಂಗವ್ವ ನಾಗತಿಹಳ್ಳಿಯ ತಿಪ್ಪೇಸ್ವಾಮಿ, ಸರ್ಕಾರಿ ನೌಕರರಲ್ಲಿ ಚೋಳಗಟ್ಟದ ಪಿಡಿಓ ಶ್ರೀಮತಿ ರೂಪಕುಮಾರಿ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿಯವರಿಗೆ ಪ್ರಧಾನ ಮಾಡಲಾಗುವುದು ಎಂದು ಜಗದೀಶ್ ತಿಳಿಸಿದರು.

ನ. 18 ರ ಸಂಜೆ 6.30ಕ್ಕೆ ಕನಕ ವೃತ್ತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಪತ್ರಿಕಾರಂಗದಲ್ಲಿ ಮಾಲತೇಶ್ ಆರಸ್, ಶಿಕ್ಷಣ ಕ್ಷೇತ್ರದಲ್ಲಿ ಯೋಗೀಶ್ ಸಹಾದ್ರಿ, ಪರಿಸರ ಕ್ಷೇತ್ರದಲ್ಲಿ ಮಲ್ಲಿಕಾರ್ಜನಯ್ಯ, ಆರೋಗ್ಯವೇ ಬಾಗ್ಯ ಸಂಘದ ಅಧ್ಯಕ್ಷರಾದ ಪರಶುರಾಮ್, ಕೃಷಿ ಕ್ಷೇತ್ರದಲ್ಲಿ ಕ್ಯಾದಿಗೆರೆಯ ರೇಣುಕಾ ರಾಜ್ ರವರನ್ನು ಸನ್ಮಾನಿಸಲಾಗುವುದು. ಜೀ.ಕನ್ನಡ ಸರಿಗಮಪ ಮತ್ತು ಜೋಡಿ ನಂ1ರ ಕಂಬದ ರಂಗಯ್ಯ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಕನಕದಾಸರ ಜಯಂತಿಯನ್ನು ಮುಂದಿನ ದಿನಮಾನದಲ್ಲಿ ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಗ್ರಾಮ ಹೋಬಳಿ ಮಟ್ಟದಲ್ಲಿಯೂ ಸಹಾ ಮಾಡುವ ಬಗ್ಗೆ ಸಂಘ ಆಲೋಚನೆ ನಡೆಸುತ್ತಿದೆ ಇದಕ್ಕೆ ಬೇಕಾದ ತಯಾರಿಯನ್ನು ಮಾಡಲಾಗುತ್ತಿದೆ. ಇದ್ದಲ್ಲದೆ ನಮ್ಮ ಸಮಾಜದ ಜನಗಣತಿಯನ್ನು ಸಹಾ ಪ್ರಾರಂಭ ಮಾಡಲಾಗುತ್ತದೆ. ಇದರೊಂದಿಗೆ ಸಮಾಜದ ಅಭೀವೃದ್ದಿಯನ್ನು ಮಾಡಲಾಗುತ್ತದೆ ಎಂದು ಜಗದೀಶ್ ತಿಳಿಸಿದರು.

ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷರಾದ ಎಚ್,ಮಂಜಪ್ಪ ಮಾತನಾಡಿ, ಇದೇ ರೀತಿ ಸಮಾಜ ಸಾಧಕರಾದ ಜಿಲ್ಲಾ ಪ್ರಶಸ್ತಿ ಪುರಸ್ಕøತರಾದ ಭರಮಸಾಗರದ ಪಿಎಸ್.ಐ ಸುರೇಶ್, ಸಾಹಿತಿಗಳಾದ ಸುಭಾಷ ಚಂದ್ರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ರಶ್ಮಿ ಮಲ್ಲಪ್ಪ, ಸಮಾಜ ಸೇವೆಯಲ್ಲಿ ಎಂ.ವಿ.ಮಾಲತೇಶ್, ಕಾರ್ಮಿಕ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಆರ್ ಹಾಗೂ ಕೃಷಿ ಕ್ಷೇತ್ರದಲ್ಲಿ ಜಗನ್ನಾಥ್ ರವರಿಗೆ ಸನ್ಮಾನ ಮಾಡಲಾಗುವುದು ಎಂದರು.

ಗೋಷ್ಟಿಯಲ್ಲಿ ಓಂಕಾರ್, ಪ್ರೇಮ್, ಲೋಕೇಶ್, ರಾಜು, ಮಹಾಲಿಂಗಪ್ಪ, ನಾರಾಯಣಗೌಡ, ಉಮೇಶ್ ಮಾಲೇಶ್, ಉಪಸ್ಥಿತರಿದ್ದರು.

Advertisement
Tags :
Advertisement