For the best experience, open
https://m.suddione.com
on your mobile browser.
Advertisement

ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಕಡೇ ಕಾರ್ತಿಕ ಮಹೋತ್ಸವ

02:41 PM Dec 26, 2023 IST | suddionenews
ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಕಡೇ ಕಾರ್ತಿಕ ಮಹೋತ್ಸವ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 26 : ನಗರದ ಶ್ರೀ ನೀಲಕಂಠೇಶ್ವರಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವವೂ ನಿನ್ನೆ (ಸೋಮವಾರ) ಸಂಜೆ ಸಕಲ ಬಿರುಧಾವಳಿಗಳಿಂದ ಅಸಂಖ್ಯಾತ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ಶ್ರೀ ನೀಲಕಂಠೇಶ್ವರಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷವಾದ ಆಲಂಕಾರವನ್ನು ಮಾಡಲಾಗಿತ್ತು. ನಂತರ ಕಡೇ ಕಾರ್ತಿಕ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದೀಪಾರಾಧನೆಯನ್ನು ಸಮಾಜದ ಮುಖಂಡರು ನಡೆಸಿಕೊಟ್ಟರು.

ನಂತರ ಪಾರ್ವತಿ ಗಣೇಶ ಮತ್ತು ಸುಬ್ರಮಣ್ಯ ಸಮೇತರಾಗಿ ಆಸಿನರಾದ ಪರಶಿವನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಅದಕ್ಕೆ ಅಲಂಕಾರವನ್ನು ಮಾಡಿ ಪೂಜೆಯನ್ನು ಸಲ್ಲಿಸಿ, ತದ ನಂತರ ದೇವಾಲಯದಿಂದ ಸಂತೇಪೇಟೆ ವೃತ್ತದವರೆಗೂ ಮೆರವಣಿಗೆಯನ್ನು ವೀರಗಾಸೆಯೊಂದಿಗೆ ನಡೆಸಲಾಯಿತು. ನಂತರ ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತು.

ದೇವಾಲಯಕ್ಕೆ ಅಗಮಿಸಿದ ಭಕ್ತಾಧಿಗಳು ದೇವಾಲಯದ ಹೊರಗಡೆ ಇಟ್ಟಿದ್ದ ದೀಪಗಳನ್ನು ಹಚ್ಚುವುದರ ಮೂಲಕ ಕಾರ್ತಿಕ ಮಹೋತ್ಸವವನ್ನು ನಡೆಸಿಕೊಟ್ಟರು, ಧೇವಾಲಯದಲ್ಲಿ ಸಾಲಿನಲ್ಲಿ ಆಗಮಿಸಿದ ಭಕ್ತಾಧಿಗಳು ನೀಲಕಂಠೇಶ್ವರ ಸ್ವಾಮಿಯ ದರ್ಶನವನ್ನು ಪಡೆದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜನಯ್ಯ, ಡಾ.ರಂಗನಾಥ್, ನಾಗರಾಜ್ ಸಂಗಂ, ಪರಮೇಶ್, ಕೋಟ್ರೇಶ್, ತಿಪ್ಪೇಸ್ವಾಮಿ, ವೀರಶೈವ ಸಮಾಜದ ಕಾರ್ಯದರ್ಶಿ ಎನ್.ಬಿ.ವಿಶ್ವನಾಥ್, ಖಂಚಾಚಿ ಷಡಾಕ್ಷರಯ್ಯ, ಶಶಿಧರ್ ಬಾಬು, ವಿರೇಶ್, ಚನ್ನಯ್ಯ, ಮುರುಗೇಶ್, ವೀರಭದ್ರಸ್ವಾಮಿ, ಕವಿತಾ ಸುರೇಶ್, ಸೇರಿದಂತೆ ವೀರಶೈವ ಸಮಾಜದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

Advertisement
Tags :
Advertisement