Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜೂನ್ 30 ರಂದು ಶಾಸಕ ಕೆ.ಸಿ.ವಿರೇಂದ್ರ ಅವರ 50ನೇ ಹುಟ್ಟು ಹಬ್ಬ, ಹಾಗೂ ಜಿ.ಎಸ್. ಮಂಜುನಾಥ್ ಅಭಿನಂದನಾ ಸಮಾರಂಭ : ಶಿವಕುಮಾರ್ ಮಾಹಿತಿ

05:57 PM Jun 28, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಚಿತ್ರದುರ್ಗ, ಜೂ. 28: ಶ್ರಮ ಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ರಾಜ್ಯ ಸಮಿತಿಯ ಸಂಘದ ನೂತನ ಕಚೇರಿಯ ಉದ್ಘಾಟನೆ, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿಯವರ 50ನೇ ಹುಟ್ಟು ಹಬ್ಬ ಹಾಗೂ ಆದಿ ಜಾಂಬವ ಅಭೀವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಎಸ್.ಮಂಜುನಾಥ್ ರವರಿಗೆ ಅಭಿನಂದನಾ ಸಮಾರಂಭವೂ ಜೂ. 30ರ ಭಾನುವಾರ ಮಧ್ಯಾಹ್ನ 12ಕ್ಕೆ ನಗರದ ಮಜೆಸ್ಟಿಕ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರಮ ಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಕೂಲಿ ಕೆಲಸವನ್ನು ಮಾಡುವವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ, ಸರ್ಕಾರವೂ ಸಹಾ ಅವರ ಪರವಾಗಿ ಇಲ್ಲವಾಗಿದೆ, ಈ ಹಿನ್ನಲೆಯಲ್ಲಿ ನೂತನ ಸೇವಾ ಪಡೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ ಇದರ ಮೂಲಕ ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ನ್ಯಾಯವನ್ನು ಕೂಡಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಸಮಾರಂಭದ ಸಾನಿಧ್ಯವನ್ನು ಮುರುಘಾಮಠದ ಬಸವಪ್ರಭು ಶ್ರೀಗಳು, ಮಾದಾರಚನ್ನಯ್ಯ ಶ್ರೀಗಳು, ಕೃಷ್ಣಯಾದವಾನಂದ ಶ್ರೀಗಳು, ಮಡಿವಾಳ ಮಾಚಿದೇವ ಶ್ರೀಗಳು, ಬಸವನಾಗ್ತಿದೇವ ಶ್ರೀಗಳು, ಇಮ್ಮಡಿ ಮೇದಾರ ಕೇತೇಶ್ವರ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಸಂಗಾಮನಂದ ಶ್ರೀಗಳು ವಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ನೇರವೇರಿಸಲಿದ್ದಾರೆ. ಶಾಸಕರುಗಳಾದ ಗೋವಿಂದಪ್ಪ, ರಘುಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಮಾಜಿ ಸಂಸದ ಚಂದ್ರಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ಶ್ರಮ ಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕೃಷ್ಣಮೂರ್ತಿ, ಶ್ರೀಮತಿ ಸವಿತಾ ರಘು, ತಾಜ್‍ಪೀರ್, ಶಿವುಯಾದವ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಟಿಯಲ್ಲಿ ಶ್ರಮ ಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ ನಾಗರಾಜ್, ನಿರ್ದೇಶಕರಾದ ಸೋಮಶೇಖರ್ ಭಾಗವಹಿಸಿದ್ದರು.

Advertisement
Tags :
bengaluruBirthdaychitradurgafelicitation ceremonyG.S. ManjunathinformationMLA K.C. VirendraSivakumarsuddionesuddione newsಅಭಿನಂದನಾ ಸಮಾರಂಭಚಿತ್ರದುರ್ಗಜಿ.ಎಸ್.ಮಂಜುನಾಥ್ಬೆಂಗಳೂರುಮಾಹಿತಿಶಾಸಕ ಕೆ.ಸಿ. ವಿರೇಂದ್ರಶಿವಕುಮಾರ್ಸುದ್ದಿಒನ್ಸುದ್ದಿಒನ್ ನ್ಯೂಸ್ಹುಟ್ಟು ಹಬ್ಬ
Advertisement
Next Article