ಕಾಂಗ್ರೆಸ್ ಸರ್ಕಾರಕ್ಕೆ ವರ್ಷದ ಹರ್ಷ : ಮೊಳಕಾಲ್ಮೂರು ಆಸ್ಪತ್ರೆ ಪ್ರಕರಣಕ್ಕೆ ಬಿಜೆಪಿ ವ್ಯಂಗ್ಯ...!
ಸುದ್ದಿಒನ್, ಚಿತ್ರದುರ್ಗ, ಮೇ. 21 : ಕಾಂಗ್ರೆಸ್ ಸರ್ಕಾರ ನಿನ್ನೆಗೆ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದೆ. ಭಾಗ್ಯಗಳನ್ನು ನೀಡಿರುವ ಕಾಂಗ್ರೆಸ್ ಗೆ ಬಿಜೆಪಿ ವ್ಯಂಗ್ಯ ಮಾಡಿದೆ. ಮೊಳಕಾಲ್ಮೂರಿನ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ರೋಗಿಗಳು ಪರದಾಡಿದ ವಿಡಿಯೋ ಹಂಚಿಕೊಂಡು ಟಾಂಗ್ ಕೊಟ್ಟಿದೆ.
ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ @INCKarnataka ದ ಉಡುಗೊರೆ!@siddaramaiah ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ.
ಖಜಾನೆ ಖಾಲಿ, ವಿದ್ಯುತ್ ಖಾಲಿ !
ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು!#CongressFailsKarnataka pic.twitter.com/GFzLXa3c8y— BJP Karnataka (@BJP4Karnataka) May 21, 2024
'ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ ಕಾಂಗ್ರೆಸ್ ನ ಉಡುಗೊರೆ! ಸಿದ್ದರಾಮಯ್ಯ ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಖಜಾನೆ ಖಾಲಿ, ವಿದ್ಯುತ್ ಖಾಲಿ ! ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು! ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈ ಮೊದಲು ಬಿಜೆಪಿ ಸರ್ಕಾರವಿದ್ದಾಗ ಮೊಳಕಾಲ್ಮೂರು ಶಾಸಕರಾಗಿದ್ದ ಶ್ರೀರಾಮುಲು ಕೂಡ ಟ್ವಿಟ್ಟರ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಮಾನ್ಯ ಮುಖ್ಯಮಂತ್ರಿ @Sidramaiah ರವರೆ ಇದ್ಯಾವುದೋ ಕಗ್ಗತ್ತಲ ರಾತ್ರಿ ಚಿತ್ರಣವಲ್ಲ. ಮೊಳಕಾಲ್ಮುರು ತಾಲೂಕು ಸರ್ಕಾರಿ 100 ಹಾಸಿಗೆ ಗಳ ಆಸ್ಪತ್ರೆಯಲ್ಲಿನ ಬೆಳಗಿನ 9:00 ಗಂಟೆ ಚಿತ್ರಣ. ತಾಲೂಕಿನಲ್ಲೆಲ್ಲಾ ಸಣ್ಣದಾಗಿ ಮಳೆಯಾಗುತ್ತಿದ್ದು ಕರೆಂಟ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಮೊಳಕಾಲ್ಮುರು ತಾ. ಆಸ್ಪತ್ರೆಯಲ್ಲಿ ಜನರೇಟರ್ ಕೆಟ್ಟು 7 ದಿನಗಳಾಗಿವೆ,ದುರಸ್ಥಿ ಮಾಡಿಸುವ ಗೋಜಿಲ್ಲವೋ ಅಥವಾ ನಿಮ್ಮ ಸರ್ಕಾರದಲ್ಲಿ ಇದಕ್ಕೂ ದುಡ್ಡಿಲ್ಲವೋ ? ನಾನು ಮೊಳಕಾಲ್ಮುರು ಶಾಸಕನಾದ ಅವಧಿಯಲ್ಲಿ ಇದೇ ಆಸ್ಪತ್ರೆಯಲ್ಲಿ 23 ಬೆಡ್ ಗಳ ಐಸಿಯು,ಆಕ್ಸಿಜನ್ ಪ್ಲಾಂಟ್,ಏರ್ಪ್ಲೋ ಆಪರೇಶನ್ ಥೇಟರ್,ಎಲ್ಲಾ ಬೆಡ್ ಗಳಿಗೂ ಆಕ್ಸಿಜನ್ ಕನೆಕ್ಟಿವಿಟಿ,12 ಕ್ಕೂ ಹೆಚ್ಚು ತಜ್ಞ ವೈದ್ಯರು,ಜನೌಷಧಿ ಕೇಂದ್ರ ಸ್ಥಾಪನೆ, ಹೆಚ್ಚುವರಿ ಆಂಬ್ಯುಲೆನ್ಸ್ ನಂತಹ ಕಾರ್ಯಗಳನ್ನು ಮಾಡಿದ್ದೆ ಆದರೆ ಇಂದು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎನ್ನುವ ಸುದ್ದಿ ಪತ್ರಿಕೆಯಲ್ಲಿ,ಅಲ್ಲಿನ ಜನತೆಯಿಂದ ಪದೇ ಪದೇ ಕೇಳುತ್ತಿದ್ದೇನೆ ಈಗ ಜನರೇಟರ್ ಸಹ ದುರಸ್ತಿ ಮಾಡಿಸಲಾಗದೆ ಇಡೀ ಆಸ್ಪತ್ರೆಯನ್ನು ಕತ್ತಲಲ್ಲಿರಿಸಿ 'ಚಿಂತಾಜನಕ' ಸ್ಥಿತಿಗೆ ತೆಗೆದುಕೊಂಡು ಹೋದದ್ದೇ ನಿಮ್ಮ ಸರ್ಕಾರದ ಒಂದು ವರ್ಷದ ಸಾಧನೆ ಎನ್ನಬಹುದೇ !? ಎಂದು ಪ್ರಶ್ನಿಸಿದ್ದಾರೆ.