Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಾಮಾಜಿಕ ಭದ್ರತೆ ಇಲ್ಲದೆ ದುಡಿಯುವ ಪತ್ರಕರ್ತರಿಗೆ ಸರ್ಕಾರದ ನೆರವು ಅಗತ್ಯ : ಶಾಸಕ ಟಿ.ರಘುಮೂರ್ತಿ

06:02 PM Dec 17, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.17 :  ಸಮಾಜದ ಅಂಕಡೊಂಕುಗಳನ್ನು ತಿದ್ದುವಲ್ಲಿ  ಪತ್ರಕರ್ತರ ಪಾತ್ರ ಮಹತ್ವವಾದದ್ದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

Advertisement

ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ‌ ಮಾತನಾಡಿದರು.

ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಧಾನಸಭಾ ಕಲಾಪಗಳಲ್ಲಿ ಮಾತನಾಡಲು ಕೆಲ ಪತ್ರಿಕಾ ವರದಿಗಳು ನನಗೆ ಸಹಕಾರಿಯಾಗಿವೆ.
ಸಮಾಜಿಕ ಸೇವಾ ಕಾರ್ಯದಲ್ಲಿ ಪತ್ರಕರ್ತರ ಸೇವೆ ಮಹತ್ವವಾಗಿದೆ. ಆದರೆ, ಸಾಮಾಜಿಕ ಭದ್ರತೆ ಇಲ್ಲದೆ ದುಡಿಯುವ ಪತ್ರಕರ್ತರಿಗೆ ಸರ್ಕಾರದ ನೆರವು ಅಗತ್ಯ ಇದೆ. ಈಗಾಗಲೇ ಬೇಡಿಕೆ ಸಲ್ಲಿಸಿರುವಂತೆ ಪತ್ರಕರ್ತರಿಗೆ ನಿವೇಶನ ಮತ್ತು ಉಚಿತ ಬಸ್‌ಪಾಸ್ ವ್ಯವಸ್ಥೆ ಬಗ್ಗೆ ಸರ್ಕಾರದ ಹಂತದಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರು.

ಹಿರಿಯ ಪತ್ರಕರ್ತ ಎಂ.ಎನ್. ಅಹೋಬಳಪತಿ ಮಾತನಾಡಿ, ಪತ್ರಿಕಾ ದಿನಾಚರಣೆಯಲ್ಲಿ ಡಿ.ವಿ.ಗುಂಡಪ್ಪ ಅವರನ್ನು ಸ್ಮರಿಸುವ ರೀತಿಯಲ್ಲಿ ಅಂಬೇಡ್ಕರ್ ಅವರನ್ನು ಪತ್ರಕರ್ತರು ನೆನೆಯಲೇಬೇಕಿದೆ. ಮೂಕನಾಯಕ ಎನ್ನುವ ಪತ್ರಿಕೆ ಸೇರಿದಂತೆ ಮೂರು ಪತ್ರಿಕೆಗಳ ಸಂಪಾದಕರಾಗಿ ಸಾಮಾಜಿಕ ಪತ್ರಿಕಾ ಸೇವೆ ಆರಂಭ ಮಾಡಿದವರು. ಅಂಬೇಡ್ಕರ್ ಅವರನ್ನು ಕೇವಲ ಮೀಸಲಾತಿ ಸೌಲಭ್ಯ ಕಲ್ಪಿಸಿದ ನೆಲೆಯಲ್ಲಿ ನೋಡುವ ಪರಿಕಲ್ಪನೆ ದೂರವಾಗಬೇಕಿದೆ ಎಂದರು.

ಪೊಲೀಸ್ ಉಪಅಧೀಕ್ಷಕ ಟಿ.ಬಿ. ರಾಜಣ್ಣ ಮಾತನಾಡಿ, ಮೂರು ದಶಕಗಳ ಹಿಂದೆ ಪತ್ರಕರ್ತರ ಸೇವೆ ಬಹಳ ಕಷ್ಟವಾಗಿತ್ತು. ಸುದ್ದಿ ಮತ್ತು ಪೋಟೋ ಸಂಗ್ರಹಕ್ಕೆ ದಿನವಿಡೀ ಶ್ರಮಪಡಬೇಕಾಗಿತ್ತು. ಪ್ರಸ್ತುತ ಮೊಬೈಲ್ ಬಳಕೆ ಕಾರ್ಯದಲ್ಲಿ ಸರಳವಾಗಿ ಸುದ್ದಿಸಂಗ್ರಹಕ್ಕೆ ಅನುಕೂಲವಾಗಿದೆ. ಪೊಲೀಸ್ ಇಲಾಖೆ ಮತ್ತು ಪತ್ರಕರ್ತರ ಸೇವೆ ಸಾಮ್ಯತೆ ಇರುವ ಸಂಬಂಧವಾಗಿದೆ. ಪೊಲೀಸ್ ಇಲಾಖೆ ನೌಕರರಿಗೆ ಸಂಬಳ ಮತ್ತು ಸೌಲಭ್ಯ ಇದೆ. ಆದರೆ, ಪತ್ರಕರ್ತರಿಗೆ ಯಾವುದೇ ರೀತಿಯಲ್ಲೂ ಬದುಕಿನ ಭದ್ರತೆ ಇಲ್ಲ. ಆದರೂ, ಪ್ರಾಮಾಣಿಕವಾಗಿ ಪತ್ರಿಕಾ ಕಾರ್ಯದಲ್ಲಿ ಸಮಾಜಮುಖಿ ಕೆಲಸ ಮಾಡುವುದು ಶ್ಲಾಘನೀಯ ಎಂದು ಹೇಳಿದರು.

ಡಾ.ಚಂದ್ರನಾಯ್ಕ್ ಮಾತನಾಡಿ ಇಂದು ಪತ್ರಕರ್ತರು  ಅತಂತ್ರದ ಪರಿಸ್ಥಿತಿಯಲ್ಲಿ ಬದುಕುತಿದ್ದಾರೆ. ಇಂಥವರನ್ನ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು ಅವರಿಗೆ ಸೌಲತ್ತುಗಳನ್ನು ನೀಡಬೇಕು ಎಂದರು.

ಚಿತ್ತರಗಿ ಮಠದ ಶ್ರೀಮಹಾಂತ ಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಟಿ.ಜೆ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಆನಂದ್‌ಕುಮಾರ್, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಕರವೇ ಅಧ್ಯಕ್ಷ ಟಿ.ಜೆ. ವೆಂಕಟೇಶ್, ಜಿಲ್ಲಾಧ್ಯಕ್ಷ ದಿನೇಶ್‌ಗೌಡಗೆರೆ, ಹಿರಿಯ ಪತ್ರಕರ್ತರಾದ ಹೆಂಜೇರಪ್ಪ, ಕೆ.ಎಸ್.ರಾಘವೇಂದ್ರ, ಡಿ. ಕುಮಾರಸ್ವಾಮಿ, ಕೊರ‍್ಲಕುಂಟೆ ತಿಪ್ಪೇಸ್ವಾಮಿ, ಲಕ್ಷ್ಮಣ್, ಪಾಳೆಗಾರ, ಜೆ. ಮಂಜುನಾಥ, ಬಿ. ಬೊಮ್ಮಲಿಂಗಪ್ಪ, ಬಿ.ವಿ. ಚಿದಾನಂದಮೂರ್ತಿ, ಸಿ.ವೈ. ಗಂಗಾಧರ, ಬೆಳಗೆರೆ ಸುರೇಶ್, ಜೆ. ತಿಮ್ಮಯ್ಯ, ಭಾರತಿಚಿತ್ತಯ್ಯ, ಧನಂಜಯ, ಎಸ್‌ಟಿಡಿ ರಾಜು, ಎಚ್. ಶಿವಮೂರ್ತಿ, ರಾಮಾಂಜಿನೇಯ, ಎಚ್.ಟಿ. ಮಂಜುನಾಥ, ಜಾಲಿಮಂಜು, ಮತ್ತಿತರರು ಇದ್ದರು.

ಸನ್ಮಾನ: ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ, ಡಾ.ಚಂದ್ರನಾಯ್ಕ, ಎಂ.ಎನ್. ಅಹೋಬಲಪತಿ, ಕೆ.ಎಸ್. ರಾಘವೇಂದ್ರ, ಹೆಂಜಾರಪ್ಪ, ಡಿ.ಕುಮಾರಸ್ವಾಮಿ, ಟಿ.ಜೆ. ವೆಂಕಟೇಶ್, ವೀರೇಶ್ ಅಪ್ಪು, ಗೋಪನಹಳ್ಳಿ ಶಿವಣ್ಣ, ನಾವೆಲ್ಲಾ ಮಹೇಶ್, ಜೆ. ಮಂಜುನಾಥ, ಎಚ್.ಟಿ. ಮಂಜುನಾಥ ಅವರನ್ನು ಅಭಿನಂದಿಸಲಾಯಿತು.

Advertisement
Tags :
challakeregovernment assistanceJournalists workingMla t. Raghumurthysocial securityಚಳ್ಳಕೆರೆದುಡಿಯುವ ಪತ್ರಕರ್ತರುಶಾಸಕ ಟಿ.ರಘುಮೂರ್ತಿಸರ್ಕಾರದ ನೆರವು ಅಗತ್ಯಸಾಮಾಜಿಕ ಭದ್ರತೆ
Advertisement
Next Article