Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಉದ್ಯೋಗ ವಾರ್ತೆ | ಆಗಸ್ಟ್ 31 ರಂದು ನೇರ ನೇಮಕಾತಿ ಸಂದರ್ಶನ

09:29 PM Aug 28, 2024 IST | suddionenews
Advertisement

 

Advertisement

 

ಚಿತ್ರದುರ್ಗ. ಆ.28: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇದೇ ಆಗಸ್ಟ್ 31ರಂದು ಬೆಳಿಗ್ಗೆ 10 ರಿಂದ 2 ರವರೆಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ನಡೆಯಲಿದೆ.

Advertisement

ಸಂದರ್ಶನದಲ್ಲಿ ವಿವಿಧ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ಹೊಂದಿರುವ 18 ರಿಂದ 30 ವರ್ಷದೊಳಗಿನ ಪುರುಷ ಅಥವಾ ಮಹಿಳೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದು, ಅಭ್ಯರ್ಥಿಗಳು ಅಗತ್ಯ ದಾಖಲೆಗಳಾದ 3 ಬಯೋಡಾಟಾ ಪ್ರತಿಗಳು, ವಿದ್ಯಾರ್ಹತೆಯ ಜೆರಾಕ್ಸ್ ಪ್ರತಿಗಳು ಹಾಗೂ ಆಧಾರ್ ನಂಬರ್‌ನೊAದಿಗೆ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಗರದ ಹಳೇ ವೈಶಾಲಿ ಗೇಟ್ ಹತ್ತಿರ, ಸ್ಟೇಡಿಯಂ ತಿರುವು, ಉದ್ಯೋಗ ವಿನಿಮಯ ಕೇಂದ್ರ ಕಚೇರಿ, ಚಿತ್ರದುರ್ಗ ದೂರವಾಣಿ ಸಂಖ್ಯೆ 7022459064, 9945587060, 8105619020 ಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Advertisement
Tags :
bengaluruchitradurgaDirect RecruitmentInterviewJob newssuddionesuddione newsಆಗಸ್ಟ್ಉದ್ಯೋಗ ವಾರ್ತೆಚಿತ್ರದುರ್ಗನೇರ ನೇಮಕಾತಿಬೆಂಗಳೂರುಸಂದರ್ಶನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article