Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಉದ್ಯೋಗ ವಾರ್ತೆ | ಜೂನ್ 29 ರಂದು ನೇರ ನೇಮಕಾತಿ ಸಂದರ್ಶನ

05:55 PM Jun 25, 2024 IST | suddionenews
Advertisement

ಚಿತ್ರದುರ್ಗ. ಜೂನ್.25:  ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಜೂನ್ 29ರಂದು ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಶನದಲ್ಲಿ ವಿವಿಧ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಪುರುಷ, ಮಹಿಳೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿವೆ.

Advertisement

ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜೂನ್ 29ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೊಮಾ, ಐಟಿಐ ಅಥವಾ ಯಾವುದೇ ಪದವಿ ಹೊಂದಿರುವ 18 ರಿಂದ 30 ವರ್ಷದೊಳಗಿನವರು ಪಾಲ್ಗೊಳ್ಳಬಹುದು.

ಸಂದರ್ಶನಕ್ಕೆ ಆಗಮಿಸುವವರು 5 ಪ್ರತಿ ಬಯೋಡಾಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು ಹಾಗೂ ಇತ್ತೀಚಿನ ಪೋಟೋಗಳನ್ನು ತಮ್ಮಮೊಂದಿಗೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ದೂರವಾಣಿ ಸಂಖ್ಯೆ 7022459064, 8310785143, 8105619020 ಹಾಗೂ 9945587060 ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Advertisement

Advertisement
Tags :
bengaluruchitradurgaDirect recruitment interviewJob newssuddionesuddione newsಉದ್ಯೋಗ ವಾರ್ತೆಚಿತ್ರದುರ್ಗನೇರ ನೇಮಕಾತಿ ಸಂದರ್ಶನಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article