For the best experience, open
https://m.suddione.com
on your mobile browser.
Advertisement

ಉದ್ಯೋಗ ವಾರ್ತೆ | ಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಅರ್ಜಿ

06:27 PM May 24, 2024 IST | suddionenews
ಉದ್ಯೋಗ ವಾರ್ತೆ   ಅತಿಥಿ ಶಿಕ್ಷಕರ  ಉಪನ್ಯಾಸಕರ ನೇಮಕಕ್ಕೆ ಅರ್ಜಿ
Advertisement

Advertisement
Advertisement

ಚಿತ್ರದುರ್ಗ. ಮೇ.24:  ಚಿತ್ರದುರ್ಗ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜು, ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಂ.ಎ, ಬಿ.ಇಡಿ, ಬಿ.ಎ, ಬಿ.ಇಡಿ, ಎಂ.ಎಸ್ಸಿ ಬಿ.ಇಡಿ, ಬಿ.ಎಸ್ಸಿ, ಬಿಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ 2 ರೊಳಗಾಗಿ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸ್ಟೇಡಿಯಂ ರಸ್ತೆ, ಆಂಜನೇಯ ದೇವಸ್ಥಾನ ಎದುರು, ಶ್ರೀರಾಮ ಕಾಂಪ್ಲೆಕ್ಸ್, ಮೊದಲನೇ ಮಹಡಿ, ಚಿತ್ರದುರ್ಗ ಇಲ್ಲಿಗೆ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Advertisement
Advertisement
Tags :
Advertisement