For the best experience, open
https://m.suddione.com
on your mobile browser.
Advertisement

"ಜೆಇಇ" ಮೈನ್ಸ್‌ ಪರೀಕ್ಷೆ ಫಲಿತಾಂಶ | ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳ ಐತಿಹಾಸಿಕ ದಾಖಲೆ

05:43 PM Feb 13, 2024 IST | suddionenews
 ಜೆಇಇ  ಮೈನ್ಸ್‌ ಪರೀಕ್ಷೆ ಫಲಿತಾಂಶ   ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳ ಐತಿಹಾಸಿಕ ದಾಖಲೆ
Advertisement

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.13 : ನಗರದ ಎಸ್‌. ಆರ್‌. ಎಸ್‌. ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಜನವರಿಯಲ್ಲಿ ನಡೆದ “ಜೆಇಇ ಮೈನ್ಸ್‌” ನ ಮೊದಲ ಸ್ಲಾಟ್‌ ಪರೀಕ್ಷೆಯಲ್ಲಿ  (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅತ್ಯುತ್ತಮ  ಫಲಿತಾಂಶ ದಾಖಲಿಸಿದ್ದಾರೆ.

Advertisement

ಒಟ್ಟು 34 ವಿದ್ಯಾರ್ಥಿಗಳು 90ಕ್ಕಿಂತ ಹೆಚ್ಚಿನ ಪರ್ಸಂಟೈಲ್‌ ಗಳಿಸಿರುವುದು ಹೊಸ ದಾಖಲೆ.  ಕಾಲೇಜಿನ ವಿದ್ಯಾರ್ಥಿ ಮನೋಜ್‌ ಎಸ್‌. ಎಂ. ಶೇಕಡ 98.23 ಪರ್ಸಂಟೈಲ್‌ ಗಳಿಸಿ ಹೊಸ ದಾಖಲೆಯೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಎನ್‌. ಮದನ್‌, 97.93, ಜೀವಿಕ ಇ, 95.37, ಗಳಿಸಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.  ಒಂದೇ ಕಾಲೇಜಿನ 34 ವಿದ್ಯಾರ್ಥಿಗಳು 90ಕ್ಕಿಂತ ಹೆಚ್ಚಿನ ಪರ್ಸಂಟೈಲ್‌ ಗಳಿಸಿರುವುದು SRS ನ ಗುಣಮಟ್ಟದ ತರಬೇತಿಗೆ ಸಾಕ್ಷಿ.  ಒಟ್ಟು 70 ವಿದ್ಯಾರ್ಥಿಗಳು “ಜೆಇಇ ಮೈನ್ಸ್‌” ಮೊದಲ ಸ್ಲಾಟ್‌ನಲ್ಲಿ ಅತ್ಯುತ್ತಮ ಅಂಕಗಳಿಸಿ ʼಜಿಇಇ ಅಡ್ವಾನ್ಸ್ಡ್‌ ಗೆ ಅರ್ಹತೆ ಗಳಿಸಿದ್ದಾರೆ.  SRS ಪಿಯು ಕಾಲೇಜು ಜೆಇಇ ಮೈನ್ಸ್‌ ಮತ್ತು ಅಡ್ವಾನ್ಸ್ಡ್ ವಿದ್ಯಾರ್ಥಿಗಳಿಗೆ ವಿಶೇಷ ಸ್ಟಾರ್‌ ಬ್ಯಾಚ್‌ಗಳನ್ನು ಹೊಂದಿದ್ದು, ಜೆಇಇ ಪರಿಣಿತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಮಯೋಚಿತ ತರಬೇತಿ ನೀಡಲಾಗಿದೆ.

Advertisement

ಉತ್ತರ ಭಾರತ ಹಾಗೂ ಹೈದರಾಬಾದ್‌ನಿಂದ ವಿಷಯ ತಜ್ಞರು ಬರುತ್ತಿದ್ದು, ಈ ವರ್ಷದಿಂದ SRS ನಲ್ಲಿಯೇ ಪೂರ್ಣಪ್ರಮಾಣದಲ್ಲಿ ಲಭ್ಯವಿರುತ್ತಾರೆ.  ಈ ಭಾಗದ ಜೆಇಇ ಅಕಾಂಕ್ಷಿಗಳಿಗೆ ಇದು ಆಶಾದಾಯಕ ಬೆಳವಣಿಗೆಯಾಗಿದ್ದು, SRS ಸರ್ವರೀತಿಯ ತರಬೇತಿಗೆ ತಯಾರಾಗಿರುವುದು ವಿಶೇಷ.

ಇದೇ ಸಂದರ್ಭದಲ್ಲಿ 2022-23ನೇ ಫಲಿತಾಂಶವು ಅತ್ಯುತ್ತಮವಾಗಿದ್ದು SRS ಪಿಯು ಕಾಲೇಜಿನ ಒಟ್ಟು 8 ಜನ ವಿದ್ಯಾರ್ಥಿಗಳು IIT, IIIT, ಮತ್ತು NIT ಗಳಿಗೆ ಹಾಗೂ ಪ್ರತಿಷ್ಟಿತ AIIMS ಗೆ ಇಬ್ಬರೂ JIPMER ಗೆ ಒಬ್ಬ ವಿದ್ಯಾರ್ಥಿ ಮೆಡಿಕಲ್‌ಗೆ ಆಯ್ಕೆಯಾದುದ್ದನ್ನು ಸ್ಮರಿಸಬಹುದು.


ಈ ಬಾರಿಯ ಫಲಿತಾಂಶ ಕಳೆದ ಬಾರಿಯ ಫಲಿತಾಂಶಕ್ಕಿಂತಲು ಉತ್ತುಮವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು IIT ಗಳಿಗೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ.  ವರ್ಷದಿಂದ ವರ್ಷಕ್ಕೆ ಗುಣಮಟ್ಟ ಉತ್ತಮಗೊಳಿಸಿಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.  ಬಯಲು ಸೀಮೆ ಚಿತ್ರದುರ್ಗದಂತಹ ಪ್ರದೇಶದಲ್ಲಿ  ಗುಣಮಟ್ಟದ ಶಿಕ್ಷಣ ನೀಡುತ್ತಿದೆ.

ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್‌, ಪ್ರಾಂಶುಪಾಲರಾದ ಗಂಗಾಧರ್‌ ಈ. ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Tags :
Advertisement