For the best experience, open
https://m.suddione.com
on your mobile browser.
Advertisement

ಜಯದೇವ ಶ್ರೀಗಳ ಕಾಲದ ಸೇವೆಯು ಬಣ್ಣನೆಗೆ ನಿಲುಕದ್ದು : ಡಾ. ಬಸವಕುಮಾರ ಸ್ವಾಮೀಜಿ

06:44 PM Aug 27, 2024 IST | suddionenews
ಜಯದೇವ ಶ್ರೀಗಳ ಕಾಲದ ಸೇವೆಯು ಬಣ್ಣನೆಗೆ ನಿಲುಕದ್ದು   ಡಾ  ಬಸವಕುಮಾರ ಸ್ವಾಮೀಜಿ
Advertisement

ಸುದ್ದಿಒನ್, ಚಿತ್ರದುರ್ಗ, ಆ. 27 : ಶೂನ್ಯ ಪೀಠದ ಮುರುಘಾ ಪರಂಪರೆಯ ಜಯದೇವ ಶ್ರೀಗಳ ಕಾಲದ ಸೇವೆಯು ಬಣ್ಣನೆಗೆ ನಿಲುಕದ್ದು ಅವರ ಅನುಪಮ ಸೇವೆ ಮಾದರಿ ಎನ್ನುವಷ್ಟರ ಮಟ್ಟಿಗೆ ನಡೆದು ಹೋಗಿದೆ. ಅಂತಹವರ ತ್ಯಾಗವನ್ನು ನಾವು ಸ್ಮರಿಸದೆ ಹೋದರೆ, ಸೇವೆಯ ಮಹತ್ವ ಮುಂದಿನ ಪೀಳಿಗೆಗೆ ಅರಿವಾಗುವುದಿಲ್ಲ. ಪ್ರಸಾದ ನಿಲಯಗಳ ನಿರ್ಮಾತೃಗಳು ಮುರುಘಾ ಪರಂಪರೆಯ ಗುರುಗಳು. ಇದು ಬಡ ವಿದ್ಯಾರ್ಥಿಗಳ ಪಾಲಿಗೆ ಭರವಸೆ ಹುಟ್ಟಿಸುವ ಕಾರ್ಯ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಸ್ಮರಿಸಿದರು.

Advertisement

ಅವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ 24ನೆಯ ಪೀಠಾಧ್ಯಕ್ಷರಾದ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತಿ ಮಹೋತ್ಸವವನ್ನು ಶ್ರೀ ಮುರಘಾಮಠದ ಮುರುಗಿ ಶಾಂತವೀರ ಮಹಾಸ್ವಾಮಿಗಳವರ ಕರ್ತೃ ಸನ್ನಿಧಿಯಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡುವುದರ ಮೂಲಕ ಮಹಾತ್ಮರನ್ನು ನೆನೆವುದೇ ಘನಮುಕ್ತಿ ಪದ ಶಿವಾಧವ ಎಂದು ಮೈಲಾರ ಬಸವಲಿಂಗ ಶರಣರು ಸೇವೆಯ ಸಾಧಕರನ್ನ ನೆನೆಯುವುದು ಮುಕ್ತಿಗೆ ಸಮ ಎಂದಿರುವಾಗ, ಸಮಾಜದಲ್ಲಿ ಸತ್ಕಾರ್ಯ ಉಳಿಯುತ್ತದೆ. ಅವರು ಸಮಾಜಕ್ಕೆ ಮಾಡಿರುವ ಸೇವೆಯು ಸದಾ ನಮ್ಮೊಂದಿಗೆ ಆ ಮೂಲಕ ಇದ್ದೇ ಇರುತ್ತದೆ ಎಂದು ನೆನೆದರು.

ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳವರು ಜಯದೇವ ಗುರುಗಳೇ ಈ ನಾಡಿಗೆ ಒಂದು ಕೊಡುಗೆ. ಶ್ರೀಮಠವನ್ನ ಬಾನೆತ್ತರಕ್ಕೆ ನಾಡಿನ ದಶ ದಿಕ್ಕುಗಳಲ್ಲಿ ಮಠ -ಪೀಠ ಸ್ಥಾಪನೆ, ಆರೋಗ್ಯ, ಶಿಕ್ಷಣ ,ಅನ್ನ ದಾಸೋಹದ ಮೂಲಕ ಅನನ್ಯ ಸೇವೆ ಮಾಡಿದ್ದಾರೆ. ಅವರ ಹುಟ್ಟೂರು ಬಿನ್ನಾಳ ಗ್ರಾಮದಲ್ಲಿ ಜನ್ಮದಿನವನ್ನು ಆ ಭಾಗದ ಜನತೆ ತುಂಬಾ ಶ್ರದ್ಧಾಪೂರ್ವಕವಾಗಿ ಜಾತ್ರೆಯ ಸ್ವರೂಪದಲ್ಲಿ ನೆರವೇರಿಸಿದರು. ಅದರಂತೆ ಇಂದು ಚಿತ್ರದುರ್ಗ ಸೇರಿದಂತೆ ನಾನಾ ಕಡೆ ಅವರ ಘನ ವ್ಯಕ್ತಿತ್ವದ ಸ್ಮರಣೆ ನಡೆಯಲಿದೆ. ಅವರ ಲಿಂಗೈಕ್ಯ ಲೀಲಾ ವಿಶ್ರಾಂತಿ ಸ್ಥಾನ ದಾವಣಗೆರೆಯಲ್ಲೂ ಇಂದು ನಡೆಯಲಿದೆ ಎಂದು ನುಡಿದರು.

Advertisement

ಈ ಸಂದರ್ಭದಲ್ಲಿ ಮುರುಗೇಂದ್ರ ಸ್ವಾಮೀಜಿ, ಅಭಿಮಾನಿ ಭಕ್ತರು, ಎಸ್ ಜೆ ಎಂ ವಿದ್ಯಾಪೀಠದ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags :
Advertisement