ಜವಾಹರ್ ನವೋದಯ ವಿದ್ಯಾಲಯ : ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಿತ್ರದುರ್ಗ. ಜುಲೈ.25: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಜವಾಹರ್ ನವೋದಯ ವಿದ್ಯಾಲಯಕ್ಕೆ 2025-26ನೇ ಸಾಲಿನ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಯ 5ನೇ ತರಗತಿ ಮಕ್ಕಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು 2013ರ ಜೂನ್ 1 ರಿಂದ 2015ರ ಜುಲೈ 31ರೊಳಗೆ ಜನಿಸಿರಬೇಕು. 3 ಮತ್ತು 4ನೇ ತರಗತಿ ಉತ್ತೀರ್ಣರಾಗಿರಬೇಕು. 2024-25 ರಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಶೈಕ್ಷಣಿಕ ವರ್ಷವನ್ನು ಸಂಪೂರ್ಣವಾಗಿ ಪೂರೈಸಿರಬೇಕು. ಶಾಲೆಯ ಕನಿಷ್ಠ ಶೇ.75ರಷ್ಟು ಸೀಟುಗಳನ್ನು ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಹಾಗೂ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತವೆ. ಕನಿಷ್ಟ 1/3 ರಷ್ಟು ಸೀಟುಗಳನ್ನು ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ.
ಮೀಸಲಾತಿ ಕೋಟಾದಲ್ಲಿ ಆಯ್ಕೆಯಾದ ಎಸ್.ಸಿ, ಎಸ್.ಟಿ, ಒಬಿಸಿ, ಇಡಬ್ಲೂಎಂಎಸ್ ಮತ್ತು ಸಾಮಾನ್ಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ತೃತೀಯ ಲಿಂಗಿಗಳು, ನಗರ, ಗ್ರಾಮೀಣ ಪ್ರದೇಶದ ಮೀಸಲಾತಿ ಬಯಸುವವರು ಕೇಂದ್ರ ಸರ್ಕಾರ ನಿಗದಿ ಪಡಿಸಿದ ಪ್ರಮಾಣ ಪತ್ರಗಳನ್ನು ದಾಖಲಾತಿ ಪರಿಶೀಲನೆ ಸಂದರ್ಭದಲಿ ಸಲ್ಲಿಸಬೇಕು.
ಆಸಕ್ತ ಅಭ್ಯರ್ಥಿಗಳು https://cbseitms.rcll.gov.in/nvs.index.registration ತಂತ್ರಾAಶದ ಮೂಲಕ ಸೆಪ್ಟೆಂಬರ್ 9ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಾಚಾರ್ಯ ಆರ್.ಡ್ಯಾನಿಯಲ್ ರತನ್ ಕುಮಾರ್ ತಿಳಿಸಿದ್ದಾರೆ.