Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮದಕರಿಪುರದಲ್ಲಿ ಕೊಲ್ಲಾಪುರದಮ್ಮ ಜಾತ್ರೆ | ಕೋಣ ಗುದ್ದಿ ಓರ್ವ ಮೃತ

10:48 AM May 01, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಮೇ. 01 : ಜಾತ್ರೆಯಲ್ಲಿ ದೇವಿಗೆ ಕೋಣ ಬಲಿ ಕೊಡುವ ವೇಳೆ ಕೊಣ ಗುದ್ದಿ ಕೊಲ್ಲಪ್ಪ (53 ವರ್ಷ) ಎಂಬಾತ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮದಕರಿ ಪುರ ಗ್ರಾಮದಲ್ಲಿ ಇಂದು (ಬುಧವಾರ) ಬೆಳಿಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ.

ಮದಕರಿಪುರದಲ್ಲಿ ಪ್ರತಿವರ್ಷವೂ ವಿಜೃಂಭಣೆಯಿಂದ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಅದರಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯುತ್ತಿತ್ತು. ಇಂದು ದೇವಿಗೆ ಕೋಣ ಬಲಿ ಕೊಡುವ ವೇಳೆ ದೇವಾಲಯ ಸಮಿತಿಯ ಸದಸ್ಯರೂ ಆಗಿದ್ದ ಕೊಲ್ಲಪ್ಪ ಅವರಿಗೆ ಆಕಸ್ಮಿಕವಾಗಿ ಕೋಣ ಗುದ್ದಿದ್ದು‌ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ‌.

Advertisement

ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Tags :
bengaluruchitradurgadiedjatremadakaripuraonesuddionesuddione newsಓರ್ವಕೊಲ್ಲಾಪುರದಮ್ಮ ಜಾತ್ರೆಕೋಣಚಿತ್ರದುರ್ಗಬೆಂಗಳೂರುಮದಕರಿಪುರಮೃತಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article