For the best experience, open
https://m.suddione.com
on your mobile browser.
Advertisement

ಭಾರತ ಸೇವಾದಳದ ದ್ಯೇಯೋದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಶಿಕ್ಷಕರ ಜವಾಬ್ದಾರಿ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್

05:05 PM Dec 19, 2023 IST | suddionenews
ಭಾರತ ಸೇವಾದಳದ ದ್ಯೇಯೋದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಶಿಕ್ಷಕರ ಜವಾಬ್ದಾರಿ  ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್ .19 :ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಾಡ್ಯರನ್ನಾಗಿಸಲು ಅವರಲ್ಲಿ ಶಿಸ್ತು, ದೇಶಭಕ್ತಿ, ಸೇವಾ ಮನೋಭಾವನೆಯನ್ನು ಮತ್ತು ಯೋಗ, ಕ್ರೀಡೆಯಂತಹ ವಿಶೇಷ ಚಟುವಟಿಕೆಗಳನ್ನು ನಡೆಸಲು ಶಿಕ್ಷಕರಿಗೆ ಪುನಶ್ಚೇತನ ತರಬೇತಿಯ ಅಗತ್ಯತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಅಭಿಪ್ರಾಯಪಟ್ಟರು.

Advertisement

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸೇವಾ ದಳದ ಶತಮಾನೋತ್ಸವದ ಅಂಗವಾಗಿ ತಾಲೂಕು ಮಟ್ಟದ ಸೇವಾದಳ ತರಬೇತಿ ಪಡೆದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.  ಶಾಲೆಗಳಲ್ಲಿ ಕಡ್ಡಾಯವಾಗಿ ಸೇವಾದಳ ಘಟಕಗಳನ್ನು ಆರಂಭಿಸಬೇಕು, ದೈಹಿಕ ಶಿಕ್ಷಕರು ನಿರುತ್ಸಾಹಿಗಳಾಗದೆ ಭಾರತ ಸೇವಾದಳ ಸ್ಕೌಟ್ಸ್ ,ಗೈಡ್ಸ್ ಸಂಸ್ಥೆಗಳ ದೇಯೋದ್ಧೇಶಗಳನ್ನು ಅರ್ಥ ಮಾಡಿಕೊಂಡು.ಮಕ್ಕಳಿಗೆ ಸೇವಾದಳ ಶಿಕ್ಷಣವನ್ನು ನೀಡಬೇಕು, ಗಾಂಧೀಜಿಯವರ ಶಾಂತಿ ಸೌಹಾರ್ದತೆ ಹಾಗೂ ಅಹಿಂಸ ತತ್ವಗಳು ಸಮಾಜದಲ್ಲಿ ಬೇರೂರುವಂತೆ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಭಾರತೀಯ ಸೇವಾದಳದ ವಲಯ ಸಂಘಟಕ ಅಣ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತ ಸೇವಾದಳವನ್ನು ಉಳಿಸಿ ಬೆಳೆಸಲು ಶಿಕ್ಷಕರು ಮುಂದಾಗಬೇಕು ದೇಶದಲ್ಲಿ ಅತ್ಯಂತ ಅತ್ಯುತ್ತಮ ಸಂಸ್ಥೆಯಾದ ಭಾರತ ಸೇವಾದಳ ಸ್ವಾರ್ಥಕ್ಕಾಗಿ ಹುಟ್ಟಿದ್ದಲ್ಲ ಸ್ವಾತಂತ್ರ್ಯಕ್ಕಾಗಿ ದೇಶಭಕ್ತರನ್ನು ಹೋರಾಟಗಾರರನ್ನು ರಾಷ್ಟ್ರ ಪ್ರೇಮಿಗಳನ್ನು ತಯಾರು ಮಾಡಲು ಹುಟ್ಟಿದ ಸಂಸ್ಥೆ, ಲಕ್ಷಾಂತರ ದೇಶಭಕ್ತರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಕೊಟ್ಟ ಭಾರತ ಸೇವಾದಳ ಇತ್ತೀಚಿನ ವರ್ಷಗಳಲ್ಲಿ ಸೊರಗುತ್ತಿದ್ದು ಅದನ್ನು ಉಳಿಸಿ ಬೆಳೆಸುವ ಹೊಣೆ ಸೇವಾದಳ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು‌.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುನಿಲ್ ನಾಯಕ್ ಉಪಾಧ್ಯಕ್ಷ ಪಾಲಯ್ಯ ಸಿದ್ದೇಶ್ ರಾಮ ನಾಯಕ್ ರಾಜಣ್ಣ ತಿಪ್ಪೇಸ್ವಾಮಿ ಅಬ್ದುಲ್ ರಜಾಕ್ ವೇಲೂರು ಪ್ರಾಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags :
Advertisement