For the best experience, open
https://m.suddione.com
on your mobile browser.
Advertisement

ಕ್ರೀಡೆಯನ್ನು ಪ್ರೋತ್ಸಾಹಿಸುವವರ ಸಂಖ್ಯೆ ಕಡಿಮೆಯಾಗಿರುವುದು ನೋವಿನ ಸಂಗತಿ : ಹಿರಿಯ ನ್ಯಾಯವಾದಿ ಫಾತ್ಯರಾಜನ್

04:34 PM Jan 15, 2024 IST | suddionenews
ಕ್ರೀಡೆಯನ್ನು ಪ್ರೋತ್ಸಾಹಿಸುವವರ ಸಂಖ್ಯೆ ಕಡಿಮೆಯಾಗಿರುವುದು ನೋವಿನ ಸಂಗತಿ   ಹಿರಿಯ ನ್ಯಾಯವಾದಿ ಫಾತ್ಯರಾಜನ್
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.15 : ಪ್ರಪಂಚದಲ್ಲಿಯೇ ಬೆಸ್ಟ್ ಗೇಮ್ ಎನಿಸಿಕೊಂಡಿರುವ ಫುಟ್‍ಬಾಲನ್ನು ಕಿಂಗ್ ಆಫ್ ದ ಗೇಮ್ ಎಂದು ಕರೆಯಲಾಗುತ್ತದೆ. ಗೋಲ್ ಹೊಡೆಯಬೇಕಾದರೆ ನಿರ್ಧಿಷ್ಟ ಕರಾರುವಕ್ಕಾಗಿರಬೇಕೆಂದು ಹಿರಿಯ ನ್ಯಾಯವಾದಿ ಫಾತ್ಯರಾಜನ್ ಹೇಳಿದರು.

ಚಿತ್ರದುರ್ಗ ಫುಟ್‍ಬಾಲ್ ಕ್ಲಬ್ ವತಿಯಿಂದ ಸ್ಟೇಡಿಯಂನಲ್ಲಿ ನಡೆದ ಫಾತ್ಯರಾಜನ್ ಯೂತ್ ಕಪ್ ಪಂದ್ಯದಲ್ಲಿ ವಿಜೇತರಿಗೆ ಕಪ್ ವಿತರಿಸಿ ಮಾತನಾಡಿದರು.

ಚಿತ್ರದುರ್ಗದಲ್ಲಿ ಅನೇಕ ಕ್ರೀಡೆಗಳು ನಡೆಯುತ್ತವೆ. ಆದರೆ ಪ್ರೋತ್ಸಾಹಿಸುವವರು ಕಮ್ಮಿಯಿರುವುದು ನೋವಿನ ಸಂಗತಿ. ಜೀವನದಲ್ಲಿ ಮುಂದೆ ಒಳ್ಳೆಯ ಕ್ರೀಡಾಪಟುಗಳಾಗಿ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಫುಟ್‍ಬಾಲ್ ಆಟಗಾರರಿಗೆ ಹಾರೈಸಿದರು.

ಡಾ.ರಾಜೇಶ್ ಮಾತನಾಡಿ ಫುಟ್‍ಬಾಲ್ ಒಳ್ಳೆಯ ಆಟ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬಹುದು. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಅವಕಾಶವಿದೆ. ಆವೇಷವನ್ನು ಕ್ರೀಡೆಯಲ್ಲಿ ಪ್ರದರ್ಶಿಸಿ ಅಂಗಗಳಿಗೆ ಊನ ಮಾಡಕೊಳ್ಳಬೇಡಿ ಎಂದು ಎಚ್ಚರಿಸಿದರು.

ಅಕ್ರಮ್‍ನಾಗ್ತೆ ಮಾತನಾಡುತ್ತ ಇದು ಮೂರನೆ ವರ್ಷದ ಪಂದ್ಯವಾಗಿದ್ದು, ನಾವುಗಳು ಚಿಕ್ಕವರಿದ್ದಾಗ ಫಾತ್ಯರಾಜನ್‍ರವರು ಫುಟ್‍ಬಾಲ್‍ಗೆ ಉತ್ತೇಜನ ನೀಡಿ ಹಣದ ಸಹಾಯವನ್ನು ಮಾಡಿದ್ದಾರೆ. ಅದಕ್ಕಾಗಿ ಅವರ ಹೆಸರಿನಲ್ಲಿಯೇ ಯೂತ್ ಕಪ್ ನಡೆಸಲು ತೀರ್ಮಾನಿಸಿ ಪ್ರತಿ ವರ್ಷವೂ ಆಯೋಜಿಸಲಾಗುವುದು ಎಂದು ಹೇಳಿದರು.
ಅಂತರಾಷ್ಟ್ರೀಯ ವೈಟ್ ಲಿಫ್ಟರ್ ಎನ್.ಡಿ.ಕುಮಾರ್, ಎಂ.ಡಿ.ನವಾಜ್, ಸಿದ್ದಿಕ್, ವಸಂತ್ ಈ ಸಂದರ್ಭದಲ್ಲಿದ್ದರು.

Advertisement
Tags :
Advertisement