Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗಿಡಗಳನ್ನು ನೆಟ್ಟು ಸುಮ್ಮನಾದರೆ ಸಾಲದು ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು : ಕವಿ ಕೊರ್ಲಕುಟೆ ಜೆ.ತಿಪ್ಪೇಸ್ವಾಮಿ

06:29 PM Oct 06, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 06 : ಗಿಡಗಳನ್ನು ಹಾಕಿ ಸುಮ್ಮನಾದರೆ ಸಾಲದು ಅವುಗಳ ರಕ್ಷಣೆಯ ಸಹ ಜವಾಬ್ದಾರಿ ಹೊರಬೇಕು ಎಂದು ಕವಿ ಕೊರ್ಲಕುಟೆ ಜೆ.ತಿಪ್ಪೇಸ್ವಾಮಿ ಹೇಳಿದರು.

Advertisement

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ಕೋಡಿ ಭಾಗದಲ್ಲಿರುವ ಕೋಡಿ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಸಮೀಪ ಒಂದು ಎಕರೆ ಭಾಗದಲ್ಲಿ ದೇವಸ್ಥಾನದ ಉದ್ಯಾನದಲ್ಲಿ ಗಿಡ ನಡುವ ಕಾರ್ಯಕ್ರದಲ್ಲಿ ಗಿಡ ನೆಟ್ಟು ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಸಾಕಷ್ಟು ಗಿಡಗಳನ್ನು ನೀಡಲಾಗುತ್ತಿದೆ. ಇಂತಹ ಅನುಕೂಲಗಳನ್ನು ಪಡೆದು ಪ್ರತಿಯೊಬ್ಬರು ಗಿಡ ಹಾಕಿ ಮರಗಳನ್ನು ಬೆಳೆಸುವುದರ ಮೂಲಕ ಪರಿಸರದ ಸಮತೋಲನ ತಪ್ಪಿಸಬಹುದು. ಬರಿ ಗಿಡ ಹಾಕಿದರೆ ಸಾಲದು ಗಿಡಗಳಿಗೆ ನೀರು ಹಾಕಿ ಅವುಗಳ ರಕ್ಷಣೆ ಮಾಡಿದಾಗ ಮರವಾಗಿ ಬೆಳೆದು ಪ್ರತಿಯೊಬ್ಬರಿಗೂ ನೆರಳಾಗಿ ಫಲವಾಗಿ ಸಹಕಾರಿಯಾಗುತ್ತದೆ. ಈ ಉದ್ಯಾನವನದಲ್ಲಿ ಹಲವಾರು ಗಿಡಗಳನ್ನು ಬೆಳೆಸಿದ್ದು ಈ ಗಿಡಗಳು ಇಲ್ಲಿನ ದೇವಸ್ಥಾನಕ್ಕೆ ಮೆರಗು ತಂದಿದೆ ಎಂದರು.

ಗ್ರಾಮಪಂಚಾಯಿತಿ ಹಾಗೂ ತಾ.ಪಂ ನಾಮನಿರ್ದೇಶಿತ ಸದಸ್ಯ ಎಂ. ರಮೇಶ ಮಾತನಾಡಿ, ಕೋಡಿ ಮಲ್ಲೇಶ್ವರ ದೇವಸ್ಥಾ ಪೂರ್ವಜರ ಕಾಲದಿಂದಲೂ ಹಳೆ ದೇವಸ್ಥಾನವಾಗಿದ್ದ ಕೋಡಿ ಮಲ್ಲೇಶ್ವರ ದೇವಸ್ಥಾನ ನವೀಕರಣಕ್ಕೆ ಶಾಸಕರು ನೀಡಿರುವ ೧೦ ಲಕ್ಷ ಅನುದಾನ ಬಳಕೆ ಮಾಡಿಕೊಂಡು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ನಿರ್ಮಾಣ ಹಂತದಲ್ಲಿದೆ. ಇಲ್ಲಿಗೆ ಬರುವ ಭಕ್ತರ ವಿಶ್ರಾಂತಿಗೆ ಅನುಕೂಲವಾಗುವ ರೀತಿ ಸಮೀಪದ ೧ ಎಕರೆ ಭೂಮಿಯಲ್ಲಿ ಬಾದಾಮಿ, ಗೋಡಂಬಿ, ಅರಳಿ, ಹಲಸು, ನೇರಳೆ, ಬೇವು, ಹೊಂಗೆ, ಬನ್ನಿ, ಬಿಲ್‌ಪತ್ರೆ ಗಿಡಗಳನ್ನು ಎರಡು ವರ್ಷದಿಂದ ಪೋಷಣೆ ಮಾಡಲಾಗಿದೆ. ಈಗ ಗಿಡಗಳು ಮರಗಳಾಗಿ ಬೆಳೆಯುತ್ತಿದ್ದು ಇಲ್ಲಿ ಹಣ್ಣಿನ ಗಿಡ ಹಾಕಿರುವುದರಿಂದ ಇವಳಿಗೆ ಪಲಕೊಟ್ಟರೆ ಮನುಷ್ಯನಿಗೆ ನೆರಳು ಕೊಡುತ್ತದೆ ಉತ್ತಮ ಆರೋಗ್ಯಕ್ಕೆ ಹಸಿರೀಕರಣ ಇರಬೇಕು ಎಂದರು. ಎಂ. ದ್ಯಾಮಣ್ಣ, ರಾಜಪ್ಪ, ಮಂಜುನಾಥ ಇದ್ದರು.

Advertisement
Tags :
bengaluruchitradurgaPoet Korlakute J. Thippeswamysuddionesuddione newsಕವಿ ಕೊರ್ಲಕುಟೆ ಜೆ.ತಿಪ್ಪೇಸ್ವಾಮಿಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article