For the best experience, open
https://m.suddione.com
on your mobile browser.
Advertisement

ಪ್ರಕೃತಿ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕøತಿ, ಸಂಸ್ಕಾರ, ನಾಗರೀಕತೆ ಕಲಿಸುತ್ತಿರುವುದು ಸಂತೋಷದ ಸಂಗತಿ :  ಮಾದಾರ ಚನ್ನಯ್ಯ ಸ್ವಾಮೀಜಿ

05:06 PM Jan 12, 2024 IST | suddionenews
ಪ್ರಕೃತಿ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕøತಿ  ಸಂಸ್ಕಾರ  ನಾಗರೀಕತೆ ಕಲಿಸುತ್ತಿರುವುದು ಸಂತೋಷದ ಸಂಗತಿ    ಮಾದಾರ ಚನ್ನಯ್ಯ ಸ್ವಾಮೀಜಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ.ಜನವರಿ.12 : ಇಂದಿನ ಶಿಕ್ಷಣ ಸಂಸ್ಥೆ ವ್ಯಾಪಾರೀಕರಣವಾಗಿರುವ ಕಾಲದಲ್ಲಿ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಂಸ್ಕøತಿ, ಸಂಸ್ಕಾರ, ನಾಗರೀಕತೆ ಕಲಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ ಶ್ಲಾಘಿಸಿದರು.

Advertisement
Advertisement

ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ಶಾಲಾ ವಾರ್ಷಿಕೋತ್ಸವ ಉದ್ಗಾಟಿಸಿ ಮಾತನಾಡಿದರು.
ಶಿಕ್ಷಣ ಎನ್ನುವುದು ನಾಲ್ಕು ಗೋಡೆಗಳ ನಡುವೆ ಶಿಕ್ಷಕರು ಮತ್ತು ಮಕ್ಕಳ ನಡುವಿನ ಸಂಬಂಧಕ್ಕಷ್ಟೆ ಸೀಮಿತವಾಗಿರಬಾರದೆನ್ನುವ ಉದ್ದೇಶದಿಂದ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ವೈವಿದ್ಯಮಯ ಚಟುವಟಿಕೆ ಮೂಲಕ ಮಕ್ಕಳಿಗೆ ಸಾಂಸ್ಕøತಿಕ ಹಾಗೂ ಮನೋರಂಜನೆಯನ್ನು ನೀಡುತ್ತ ಬರುತ್ತಿದೆ. ಇಲ್ಲಿ ಶಿಕ್ಷಣ ಕಲಿಯುವ ಮಕ್ಕಳು ಮುಂದೆ ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.
ವಿಜ್ಞಾನ ಶಿಕ್ಷಕ ಹೆಚ್.ಎಸ್.ಟಿ.ಸ್ವಾಮಿ ಖಗೋಳ ಮತ್ತು ಮೂಢನಂಬಿಕೆಗಳ ವಿಷಯ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

ಪರಿವರ್ತನಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರೊ.ಎಂ.ಕೆ.ರವೀಂದ್ರ, ಕಾರ್ಯದರ್ಶಿ ಎಂ.ಕಾರ್ತಿಕ್, ಕೋಟ್ಲ ಎಜುಕೇಶನ್ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಕೆ.ಸುಮ, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು, ನಟ ಬುಲೆಟ್ ವಿನು, ರೊ.ಉಮೇಶ್ ವಿ.ತುಪ್ಪದ್, ರೊ.ಮಾರುತಿ ಮೋಹನ್, ಶ್ರೀಮತಿ ಎಸ್.ಶ್ವೇತ ಕಾರ್ತಿಕ್, ಶ್ರೀಮತಿ ವೇದ ರವೀಂದ್ರ, ಸಿ.ಹರೀಶ, ರೊ.ಡಾ.ಪಿ.ಮಧುಸೂದನರೆಡ್ಡಿ, ಎಸ್.ಜಿ.ರಂಗನಾಥ್, ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲ ಎಂ.ಎಸ್. ಹಾಗೂ ಶಿಕ್ಷಕ ವೃಂದದವರು ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.
ಮಕ್ಕಳಿಂದ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Advertisement
Tags :
Advertisement