For the best experience, open
https://m.suddione.com
on your mobile browser.
Advertisement

ಸ್ನೇಹ ಮತ್ತು ಸೇವಾ ಗುಣ ಹೊಂದಿರುವ ಇನ್ನರ್‍ವೀಲ್ಹ್ ಕ್ಲಬ್ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ : ಪೌರಾಯುಕ್ತೆ ರೇಣುಕ ಎಂ.

05:14 PM Jan 12, 2024 IST | suddionenews
ಸ್ನೇಹ ಮತ್ತು ಸೇವಾ ಗುಣ ಹೊಂದಿರುವ ಇನ್ನರ್‍ವೀಲ್ಹ್ ಕ್ಲಬ್ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ   ಪೌರಾಯುಕ್ತೆ ರೇಣುಕ ಎಂ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ.ಜನವರಿ.12 : ಮಾರ್ಗರೇಟ್‍ರವರು 1924 ರಲ್ಲಿ ಸ್ಥಾಪಿಸಿದ ಇನ್ನರ್‍ವೀಲ್ ಕ್ಲಬ್‍ಗೆ ನೂರು ವರ್ಷಗಳಾಗಿರುವುದರಿಂದ ರೋಟರಿ ಬಾಲ ಭವನದಲ್ಲಿ ಇನ್ನರ್‍ವೀಲ್ಹ್ ಕ್ಲಬ್ ಚಿತ್ರದುರ್ಗ ವತಿಯಿಂದ ನೂರನೆ ವರ್ಷದ ದಿನಾಚರಣೆ ಹಾಗೂ ಮಕರ ಸಂಕ್ರಾಂತಿ ಸಂಭ್ರಮವನ್ನು ಗುರುವಾರ ಆಚರಿಸಲಾಯಿತು.

Advertisement

ನಗರಸಭೆ ಪೌರಾಯುಕ್ತರಾದ ರೇಣುಕ ಎಂ. ಇನ್ನರ್‍ವೀಲ್ಹ್ ಕ್ಲಬ್‍ನ ನೂರನೆ ವರ್ಷದ ದಿನಾಚರಣೆ ಉದ್ಗಾಟಿಸಿ ಮಾತನಾಡುತ್ತ ಸ್ನೇಹ ಮತ್ತು ಸೇವಾ ಗುಣ ಹೊಂದಿರುವ ಇನ್ನರ್‍ವೀಲ್ಹ್ ಕ್ಲಬ್ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಆಧುನಿಕ ಯುಗದಲ್ಲಿ ಏಕಾಂಗಿತನ ಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಇನ್ನರ್‍ವೀಲ್ಹ್ ಕ್ಲಬ್ ಮೂಲಕ ಮಹಿಳೆಯರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಖುಷಿ ನೀಡುತ್ತದೆ ಎಂದು ಹೇಳಿದರು.
ಮಹಿಳೆಯರು ಸಂಘಟಿತರಾಗಬೇಕು. ಒತ್ತಡಗಳ ನಡುವೆ ಇಂತಹ ಕಾರ್ಯಕ್ರಮಗಳ ಮೂಲಕ ಮನಸ್ಸಿಗೆ ಮನೋರಂಜನೆ ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ನಗರಸಭೆಯಿಂದ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.

ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ಶ್ರೀಮತಿ ಮೋಕ್ಷರುದ್ರಸ್ವಾಮಿ ಮಾತನಾಡಿ 1924 ರಲ್ಲಿ ಕೇವಲ ಐವರು ಸದಸ್ಯರುಗಳಿಂದ ಹುಟ್ಟಿಕೊಂಡ ಇನ್ನರ್‍ವೀಲ್ಹ್ ಕ್ಲಬ್‍ನಲ್ಲಿ ಈಗ ಒಂದು ಲಕ್ಷದ 24 ಸಾವಿರ ಮೆಂಬರ್‍ಗಳಿದ್ದು, 108 ದೇಶಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಅನೇಕ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಹ್ಯಾಪಿ ಸ್ಕೂಲ್‍ಗಳನ್ನಾಗಿ ಮಾಡಲಾಗಿದೆ. ಮಕ್ಕಳಿಗೆ ಸಮವಸ್ತ್ರ, ಶುದ್ದ ಕುಡಿಯುವ ನೀರು ಪೂರೈಸಿದ್ದೇವೆ. ಇನ್ನರ್‍ವೀಲ್ಹ್ ಕ್ಲಬ್ ನೂರು ವರ್ಷ ಪೂರೈಸಿರುವುದರಿಂದ ನೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಂಗವಿಕಲರಿಗೆ ಮೂರು ಚಕ್ರದ ಸೈಕಲ್‍ಗಳನ್ನು ನೀಡಲಾಗಿದೆ. ತ್ಯಾಗ ಮತ್ತು ಸೇವಾ ಮನೋಭಾವನೆಯಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು.

ನೂರನೆ ವರ್ಷದ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿವಿಧ ಗೇಮ್ಸ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನರ್‍ವೀಲ್ಹ್ ಕ್ಲಬ್ ಚಿತ್ರದುರ್ಗ ಜಂಟಿ ಕಾರ್ಯದರ್ಶಿ ವೀಣ ಜಯರಾಂ, ಪಿ.ಡಿ.ಸಿ.ಗಳಾದ ಜ್ಯೋತಿ ಲಕ್ಷ್ಮಣ್, ವೀಣಸ್ವಾಮಿ, ಭಾಗ್ಯಕ್ಕ, ನಂದಿನಿ ಸುಹಾಸ್, ಶೈಲಜಾರೆಡ್ಡಿ, ದೀಪದತ್, ಅಮೃತ, ಪಾಸ್ಟ್ ಪ್ರೆಸಿಡೆಂಟ್ ಮತ್ತು ಮೆಂಬರ್ಸ್‍ಗಳು ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags :
Advertisement