ಸಿಪಿ ಯೋಗೀಶ್ವರ್ ಕುರಿತು ಡಿಕೆ ಶಿವಕುಮಾರ್ ಹೇಳಿದ್ದೇನು ?
ಚಳ್ಳಕೆರೆ, ಅಕ್ಟೋಬರ್.21 : ಚನ್ನಪಟ್ಟಣದ ಬೈಎಲೆಕ್ಷನ್ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸಿಪಿ ಯೋಗೀಶ್ವರ್ ಸ್ಪರ್ಧೆ ಮಾಡ್ತಾರೆ ಎನ್ನುತ್ತಿದ್ದಾಗಲೇ ತಮ್ಮ ಎಂಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಇದರ ನಡುವೆ ಡಿಕೆಶಿ ಅವರ ಸಂಪರ್ಕದಲ್ಲಿದ್ದಾರೆ ಎಂಬ ಆರೋಪವನ್ನು ಡಿಕೆ ಶಿವಕುಮಾರ್ ಅವರು ತಳ್ಳಿ ಹಾಕಿದ್ದಾರೆ.
ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಏನೇನೋ ಮಾಹಿತಿ ಬರ್ತಾ ಇರಬಹುದು. ಯೋಗೇಶ್ವರ್ ಅವರು ನಮ್ಮ ಸಂಪರ್ಕದಲ್ಲಿ ಇಲ್ಲ, ದಳ ಹಾಗೂ ಬೇರೆ ಬೇರೆಯವರ ಸಂಪರ್ಕದಲ್ಲಿ ಇರಬಹುದು. ಅಸೆಂಬ್ಲಿ ಚುನಾವಣೆಗಿಂತ ಬೈ ಎಲೆಕ್ಷನ್ ನಲ್ಲಿ ಕಾನ್ಫಿಡೆಂಟ್ ಆಗಿದೀವಿ ಎಂದು ಟಾಂಗ್ ನೀಡಿದರು.
ಡಿಸಿಎಂ ಕನ್ನಡಕ ಹಾಕೊಂಡು ನೈಟ್ ರೌಂಡ್ಸ್ ಮಾಡಿದ್ದಾರೆ- R ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ ಕನ್ನಡಕ ಹಾಕೊಂಡು ಯಾರಾದ್ರೂ ನೈಟ್ ರೌಂಡ್ಸ ಮಾಡ್ತಾರೇನ್ರಿ,
ಅವ್ರೇನಾದ್ರೂ ಕನ್ನಡ ಹಾಕೊಂಡು ಮಾಡಿರಬೇಕು, ನಾನು ಕನ್ನಡ ಹಾಕೊಳೋದು ಹಗಲು ಹೊತ್ತು, ಓದುವಾಗ, ಅವ್ರು ನೈಟ್ ರೌಂಡ್ಸ್ ನಲ್ಲಿ ಯಾಕೆ ಹಾಕೋತಾರೋ ಗೊತ್ತಿಲ್ಲ ಎಂದು ಅಶೋಕ್ ಗೆ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಮಳೆಯ ಅಬ್ಬರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಮಳೆ ಬರಲಿ, ಭೂಮಿ ನೀರು ಕುಡಿಲಿ, ಕೆರೆ ತುಂಬಲಿ, ಕಾವೇರಿ ನದಿ ನೀರು ತಮಿಳುನಾಡಿಗೆ ಜಾಸ್ತಿ ಹರಿದು ಹೋಗಲಿ ಎಂದಿದ್ದಾರೆ. ಮೇಕೆದಾಟು ಯೋಜನೆ ಬರಲಿ, ಮಳೆಯಿಂದ ಬೆಂಗಳೂರು ಅವಾಂತರ ಆಗಿದೆ. ಜನ ಅಂಡರ್ ಗ್ರೌಂಡ್ ಲೆವೆಲ್ ನಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಮಳೆ ಕಡಿಮೆಯಾಗುತ್ತಿದ್ದಂತೆ, ಅದಕ್ಕೆ ಪರಿಹಾರ ಹುಡುಕುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.