Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಒಳ ಮೀಸಲಾತಿ : ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲ : ಎಎಪಿ ಜಗದೀಶ್

11:18 AM Sep 04, 2024 IST | suddionenews
Advertisement

ಸುದ್ದಿಒನ್, ಸೆಪ್ಟೆಂಬರ್. 04 : 30 ವರ್ಷಗಳ ಕಾಲ ನಿರಂತರ ಹೋರಾಟದಿಂದ ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ ಅಂದಿನಿಂದ ಇಂದಿನವರೆಗೂ ಕೂಡ ರಾಜ್ಯ ಸರ್ಕಾರ ಅನುಮೋದನೆ ಮಾಡುವುದರಲ್ಲಿ ವಿಫಲವಾಗಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕಡು ಬಡತನದಲ್ಲಿ ಜನಿಸಿದ ಅದೆಷ್ಟೋ ಜನಾಂಗದವರು ಇಂದಿಗೂ ಕೂಡ ಬಡತನ ರೇಖೆಗಿಂತ ಕೆಳ ವರ್ಗದಲ್ಲೇ ಇದ್ದಾರೆ. ಇಂಥವರಿಗೆ ಒಳ ಮೀಸಲಾತಿ ಜಾರಿ ಆಗುವುದರಿಂದ ಅವರ ಆರ್ಥಿಕ ಅಭಿವೃದ್ಧಿಯು ಸಹ ವೃದ್ಧಿಸಲಿದೆ. ಅಷ್ಟೇ ಅಲ್ಲದೆ ಒಳ ಮೀಸಲಾತಿ ಜಾರಿ ಆಗುವುದರಿಂದ ಅದೆಷ್ಟು ಕುಟುಂಬಗಳು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತವೆ ಎಂದರು.

ಬಹುತೇಕ ರಾಜಕಾರಣಿಗಳು ಮೀಸಲಾತಿಯ ಅವಕಾಶವನ್ನು ಪಡೆದುಕೊಂಡು ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ. ಅಂತಹ ರಾಜಕಾರಣಿ ವ್ಯಕ್ತಿಗಳೇ ಇಂದು ಒಳ ಮೀಸಲಾತಿಯ ಕೆನ ಪದರು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಮುದಾಯಕ್ಕೆ ಮಾಡಿದ ಮೋಸವೆಂದರೆ ತಪ್ಪಾಗಲಾರದು.

Advertisement

ಮಾದಿಗ ಸಮುದಾಯದವರು ನಿರಂತರ ಹೋರಾಟದಿಂದ ಒಳ ಮೀಸಲಾತಿಗೆ ಧ್ವನಿಯೆತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುನಿಂದ ಅವರ ಬದುಕು ಬದಲಾಗುತ್ತದೆ ಎನ್ನುವ ಕಲ್ಪನ ಎಲ್ಲರ ಮನೆ ಮಾತಾಗಿತ್ತು.  ಆದರೆ ಸರ್ಕಾರ ಮಾತ್ರ ಅದಕ್ಕೆ ಅನುಮೋದನೆ ನೀಡಲು ಹಿಂದೇಟು ಹಾಕುತ್ತಿದೆ.

ಒಳ ಮೀಸಲಾತಿ ಅಂಗೀಕಾರ ಮಾಡುವ ಕುರಿತಾಗಿ ಈಗಲೂ ಸಹ ನಿರಂತರ ದಲಿತ ಸಮುದಾಯಗಳ ಹೋರಾಟ ಮಾಡುತ್ತಲೇ ಇದ್ದಾರೆ. ಸಂಬಂಧಪಟ್ಟ ಸ್ವಾಮೀಜಿಗಳು ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸುತ್ತಲೇ ಇದ್ದಾರೆ ಆದರೂ ಸಹ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಂತಿದೆ. ಒಳ ಮೀಸಲಾತಿಯನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕೆನ್ನುವ ಸಮುದಾಯಗಳು ಮತ್ತೆ ಸಂಕಷ್ಟಕ್ಕೆ ಸಿಗುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

 

Advertisement
Tags :
AAP JagadishbengaluruchitradurgafailedImplementinternal reservationstate governmentsuddionesuddione newsಅನುಷ್ಠಾನಎಎಪಿ ಜಗದೀಶ್ಒಳ ಮೀಸಲಾತಿಚಿತ್ರದುರ್ಗಬೆಂಗಳೂರುರಾಜ್ಯ ಸರ್ಕಾರವಿಫಲಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article