Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೃಷಿಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ

09:37 PM Jan 25, 2024 IST | suddionenews
Advertisement

 

Advertisement

ಸುದ್ದಿಒನ್,  ಚಿತ್ರದುರ್ಗ. ಜ.25: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಎಲ್‍ಡಿ) ಬ್ಯಾಂಕುಗಳಲ್ಲಿ ರೈತರು ಪಡೆದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲದ ಅಸಲು ಪಾವತಿಸಿದರೆ, ಸಂಪೂರ್ಣ ಬಡ್ಡಿ ಮನ್ನಾ ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದಿನಾಂಕ 31-12-2023 ರವರೆಗಿನ ಸುಸ್ತಿಯಾದ ಕಂತು ಸಾಲಗಳನ್ನು ದಿನಾಂಕ 20-02-2024ರ ಒಳಗಾಗಿ ಪಾವತಿಸಿದರೆ, ಅಂತಹ ರೈತರ ಅಸಲಿನ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗುವುದು. ಈ ಕುರಿತು ಹತ್ತಿರದ ಪಿ.ಎಲ್.ಡಿ ಬ್ಯಾಂಕುಗಳ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಯೋಜನೆಯ ಸದುಪಯೋಗ ಪಡೆದುಕೊಂಡು ಸಾಲದಿಂದ ಋಣಮುಕ್ತವಾಗುವಂತೆ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚಿತ್ರದುರ್ಗ ಶಾಖಾ ಕಚೇರಿಯ ಜಿಲ್ಲಾ ನಿರ್ದೇಶಕಿ ಬಿ.ಎನ್.ಶೋಭಾ ಉಮೇಶ್ ಕುಮಾರ್ ರೈತರ ಭಾಂದವರಲ್ಲಿ ಕೋರಿದ್ದಾರೆ.

Advertisement

Advertisement
Tags :
agricultural loanchitradurgainterestprincipalrepaymentsuddionesuddione newswaivedಅಸಲುಕೃಷಿಸಾಲಚಿತ್ರದುರ್ಗಪಾವತಿಬಡ್ಡಿಮನ್ನಾಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article