Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‍ಟಿ ಹಾಗೂ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ : ಏನಿದು ನಿಯಮ...!

03:33 PM Jul 04, 2024 IST | suddionenews
Advertisement

 

Advertisement

ಚಿತ್ರದುರ್ಗ. ಜುಲೈ04 : ಸಾರ್ವಜನಿಕ ಸೇವೆಯ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸರಕು ಸಾಗಾಣಿಕೆ ವಾಹನಗಳಲ್ಲಿ ವಿಎಲ್‍ಟಿ (ವೆಹಿಕಲ್ ಲೊಕೇಷನ್ ಟ್ರಾಕಿಂಗ್) ಹಾಗೂ ಎಮರ್ಜನ್ಸಿ ಪ್ಯಾನಿಕ್ ಬಟನ್‍ನ್ನು ಅಳವಡಿಸುವುದು ಕಡ್ಡಾಯಗೊಳಿಸಿ ಸಾರಿಗೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆದೇಶದಂತೆ 2024 ಸೆಪ್ಟೆಂಬರ್ 10ರ ವರೆಗೆ ಉಪಕರಣಗಳನ್ನು ಅಳವಡಿಸಕೊಳ್ಳಬೇಕಿದೆ. ಇದರೊಂದಿಗೆ ಆಂಬುಲೇನ್ಸ್‍ಗಳಲ್ಲಿ ಜಿಪಿಎಸ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

Advertisement

ಉಚ್ಛನ್ಯಾಯಾಲಯದ ಆದೇಶದಂತೆ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ಗಳಲ್ಲಿ ವಿಶೇಷ ಚೇತನರಿಗೆ ಪ್ರಯಾಣಯಕ್ಕೆ ಅನುಕೂವಾಗುವಂತೆ ಹತ್ತುವ ಮತ್ತು ಇಳಿಯುವ ವಿಶೇಷ ವ್ಯವಸ್ಥೆ ಹಾಗೂ ಅಂಧ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೈಕ್ ಮತ್ತು ಸ್ಪೀಕರ್ ಹೊಂದಿರುವ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಬಸ್ ನಿಲ್ದಾಣಗಳಲ್ಲಿ ಅಳವಡಿಸಬೇಕಿದೆ.

ಮಕ್ಕಳ ಹಿತದೃಷ್ಟಿಯಿಂದ ಬೈಕ್ ಸವಾರಿಯ ವೇಳೆ 9 ತಿಂಗಳ ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಮಕ್ಕಳಿಗೆ ಶಿಶು ಕವಚ ಕಡ್ಡಾಯಗೊಳಿಸಿದೆ. ಇಲ್ಲವಾದರೆ ರೂ.1000 ದಂಡ ವಿಧಿಸಲಾಗುವುದು.  2019 ಏಪ್ರಿಲ್ 01 ರ ಹಿಂದೆ ನೋಂದಣೆಯಾಗಿರುವ ಎಲ್ಲಾ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನೋಂದಣಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ನಿಗದಿ ಪಡಿಸಿದ್ದ ಕಾಲವಕಾಶವನ್ನು 2024 ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ ಎಂದು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
bengaluruchitradurgainstallationmandatorypublic service vehiclesrulesuddionesuddione newsVLT and panic buttonಅಳವಡಿಕೆ ಕಡ್ಡಾಯಚಿತ್ರದುರ್ಗನಿಯಮಬೆಂಗಳೂರುವಾಹನಗಳುವಿಎಲ್‍ಟಿ ಹಾಗೂ ಪ್ಯಾನಿಕ್ ಬಟನ್ಸಾರ್ವಜನಿಕ ಸೇವೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article