ಬೆಳಗಾವಿ ಅಧಿವೇಶನದಲ್ಲಿ ವಕೀಲ ರಕ್ಷಣಾ ಕಾಯ್ದೆ ಜಾರಿಗೆ ತರಲು ಚಳ್ಳಕೆರೆ ತಾಲೂಕು ವಕೀಲರ ಸಂಘದ ಒತ್ತಾಯ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.08 :
ಗುಲ್ಬರ್ಗ ಜಿಲ್ಲೆಯ ಉದ್ದೂರು ತಾಲೂಕಿನ ವಕೀಲರಾದ ಈರಣ್ಣಗೌಡಮಾಳಿ ಪಾಟೀಲ್ ರವರ ಮೇಲೆ ಯಾವುದೇ ಕಾರಣವಿಲ್ಲದೆ ಕಾನೂನುಬಾಹಿರವಾಗಿ ಬರ್ಬರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ತಾಲೂಕಿನ ವಕೀಲರ ಸಂಘ ಪ್ರತಿಭಟನೆ ನಡೆಸಿತು.
ನಗರದಲ್ಲಿ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿ ಮೆರವಣಿಗೆ ಮೂಲಕ ಹೊರಟು ವಾಲ್ಮೀಕಿ ವೃತ್ತ ಅಂಬೇಡ್ಕರ್ ವೃತ್ತ ನೆಹರು ವೃತ್ತಗಳಲ್ಲಿ ಸಂಚರಿಸಿ ತಾಲೂಕು ಕಚೇರಿಗೆ ಬಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆಎಂ ನಾಗರಾಜು ವಕೀಲರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ಹಾಗೂ ಹತ್ಯೆ ನಡೆಸುತ್ತಿರುವುದು ವಕೀಲ ವೃತ್ತಿ ನಿರ್ವಹಿಸುತ್ತಿರುವ ವಕೀಲ ವೃಂದಕ್ಕೆ ಆತಂಕದ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ ಇಂತಹ ಘಟನೆಗಳಿಂದ ವಕೀಲರುಗಳಿಗೆ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಕಾರ್ಯ ಸೂಚಿಗಳನ್ನು ರಚಿಸುವುದರ ಮೂಲಕ ವಕೀಲರುಗಳಿಗೆ ರಕ್ಷಣೆ ನೀಡಬೇಕು ಮತ್ತು ಕೃತ್ಯ ನಡೆಸಿದ ಆರೋಪಿತರನ್ನು ಶೀಘ್ರವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಈಗಾಗಲೇ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಸರ್ಕಾರ ಈ ಅಧಿವೇಶನದಲ್ಲಿ ವಕೀಲ ರಕ್ಷಣಾ ಕಾಯ್ದೆ ಬಿಲ್ ಮಂಡಿಸಿ ಚರ್ಚೆ ನಡೆಸಿ ಮಸೂದೆಯನ್ನು ಜಾರಿಗೊಳಿಸಬೇಕು ಅಲ್ಲದೆ ತಾಲೂಕು ಆಡಳಿತಕ್ಕೆ ವಕೀಲರ ಸಂಘದ ವತಿಯಿಂದ ನೀಡುವ ಮನವಿ ಪತ್ರದ ಮುಂದಿನ ರಾಜ್ಯ ಸರ್ಕಾರದ ಉತ್ತರವನ್ನು ವಕೀಲರ ಸಂಘಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ ಪಾಲಯ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ರಾಮಕೃಷ್ಣ ಈ ರುದ್ರಯ್ಯ ಎನ್ ಬೀರಪ್ಪ ಪಿ ತಿಪ್ಪೇಸ್ವಾಮಿ ಹನುಮಂತರಾಯ ಬೋರಯ್ಯ ದೊರೆ ನಾಗರಾಜು ಸಣ್ಣ ಬೋರನಾಯಕ ಬಿ ಟಿ ಶ್ಯಾಮಲ ಎಸ್ ಡಿ ಹನುಮಂತರಾಯ, ಕುಬೇಂದ್ರಪ್ಪ ಕಿರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.