Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಗೆ ಯಶಸ್ವಿ ನೇತ್ರ ಶಸ್ತ್ರ ಚಿಕಿತ್ಸೆ

06:47 PM Aug 03, 2024 IST | suddionenews
Advertisement

ಚಿತ್ರದುರ್ಗ.ಆಗಸ್ಟ್.03: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ನಾಯಕನಹಟ್ಟಿ ಗ್ರಾಮದ ತುಂಬು ಗರ್ಭಿಣಿಯೊಬ್ಬರಿಗೆ ಯಶಸ್ವಿಯಾಗಿ ನೇತ್ರ ಶಸ್ತçಚಿಕಿತ್ಸೆ ನಡೆಸಿದ್ದಾರೆ.  

Advertisement

ಎರಡು ಕಣ್ಣುಗಳು ಪೊರೆ ಬಂದು ದೃಷ್ಟಿ ದೋಷದಿಂದ ತೊಂದರೆ ಅನುಭವಿಸಿತ್ತಿದ್ದ ನಾಯಕನಹಟ್ಟಿ ಗ್ರಾಮದ ನಾಗವೇಣಿ ಕೋಂ ಮಹಂತೇಶ್ ಅಂಧ ಗರ್ಭಿಣಿಯನ್ನು ಮನೆ ಭೇಟಿಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಕನ್ಯಾ, ಆರೋಗ್ಯ ನಿರೀಕ್ಷಣಾಧಿಕಾರಿ ಚೈತ್ರಾ ಅವರು ಪತ್ತೆಹಚ್ಚಿ ಜಿಲ್ಲಾ ಆಸ್ಪತ್ರೆ ನೇತ್ರ ತಜ್ಞರಾದ ಡಾ.ಬಿ.ಜಿ. ಪ್ರದೀಪ್ ಅವರ ನೇತೃತ್ವದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ನಾಗವೇಣಿ ಅವರ ದೃಷ್ಟಿ ದೋಷ ನಿವಾರಣೆ ಮಾಡಿದ್ದಾರೆ.

ಚಿಕಿತ್ಸಾ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕ ಡಾ. ರವೀಂದ್ರ , ಜಿಲ್ಲಾ ಆಸ್ಪತ್ರೆ ನೇತ್ರತಜ್ಞೆ ಡಾ.ಶಿಲ್ಪ, ನೇತ್ರಾಧಿಕಾರಿ ರಾಮು ಆಶಾ ಕಾರ್ಯಕರ್ತೆ ದಾಕ್ಷಾಯಣಿ, ಶುಶ್ರೂಷಕರಾದ ರವಿಕುಮಾರ್, ಲಕ್ಷ್ಮೀ ಇತರರು ಉಪಸ್ಥಿತರಿದ್ದರು.

Advertisement

Advertisement
Tags :
bengaluruchitradurgaDistrict hospitalpregnant womanSuccessful eye surgerysuddionesuddione newsಚಿತ್ರದುರ್ಗಜಿಲ್ಲಾ ಆಸ್ಪತ್ರೆತುಂಬು ಗರ್ಭಿಣಿನೇತ್ರ ಶಸ್ತ್ರ ಚಿಕಿತ್ಸೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article