For the best experience, open
https://m.suddione.com
on your mobile browser.
Advertisement

ಅಕಾಲಿಕ ಸಾವಿನಿಂದ ಅಪಾರ ನೋವು : ಸಮಾಜಮುಖಿ ಕಾರ್ಯ ಮಾಡಿ ನೋವನ್ನು ಮರೆಯಬೇಕಿದೆ : ರಂಭಾಪುರಿ‌ ಶ್ರೀಗಳು

06:45 PM Sep 24, 2024 IST | suddionenews
ಅಕಾಲಿಕ ಸಾವಿನಿಂದ ಅಪಾರ ನೋವು   ಸಮಾಜಮುಖಿ ಕಾರ್ಯ ಮಾಡಿ ನೋವನ್ನು ಮರೆಯಬೇಕಿದೆ   ರಂಭಾಪುರಿ‌ ಶ್ರೀಗಳು
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 24 : ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಇವುಗಳ ಮಧ್ಯದಲ್ಲಿ ಉತ್ತಮವಾದ ಬದುಕನ್ನು ನಡೆಸಬೇಕಿದೆ, ಇಲ್ಲಿ ಸಾವು ಸಮಯ ಮೀರಿ ಬಂದರೆ ಯಾವುದೇ ನೋವಿಲ್ಲ ಆದರೆ ಸಾವು ಮಧ್ಯದಲ್ಲಿ ಬಂದರೆ ಮಾತ್ರ ಎಲ್ಲರನ್ನು ದುಃಖಕ್ಕೆ ತಳ್ಳುತ್ತದೆ ಈ ನೋವನ್ನು ಮರೆತು ಸಮಾಜ ಮುಖಿಯಾದ ಕಾರ್ಯವನ್ನು ಮಾಡುವುದರ ಮೂಲಕ ಅದನ್ನು ಮರೆಯಬೇಕಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ತಿಳಿಸಿದರು.

Advertisement

ನಗರದ ಧವಳಗಿರಿ ಬಡಾವಣೆಯಲ್ಲಿನ ಪಟೇಲ್ ಶಿವಕುಮಾರ್‍ರವರ ನಿವಾಸದಲ್ಲಿ ಅವರ ಪುತ್ರ ಅಭೀಷೇಕ ಎಸ್ ಪಟೇಲ್‍ರವರ ಶಿವಗಣಾರಾಧನೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ರುದ್ರಪ್ಪರವರ ಮನೆತನ ಆದರ್ಶ ಹಾಗೂ ಸಂಸ್ಕಾರವಂತ ಮನೆತನವಾಗಿದೆ. ತಂದೆ ಮಾರ್ಗದರ್ಶನದಲ್ಲಿ ಬೆಳೆದವರು ಯಾವಾಗಲೂ ಉತ್ತಮರಾಗುತ್ತಾರೆ ಎನ್ನುವುದಕ್ಕೆ ಶಿವಕುಮಾರ್ ಸಾಕ್ಷಿಯಾಗಿದ್ದಾರೆ. ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಯ ಇದರ ಮಧ್ಯೆದಲ್ಲಿ ಬದುಕಿದಾಗ ಉತ್ತಮವಾದ ಕೆಲಸವನ್ನು ಮಾಡಬೇಕಿದೆ. ಇದರ ಮಧ್ಯೆ ಸಾವು ಯಾವಾಗ ಬರುತ್ತದೆ ಎಂದು ಯಾರಿಗೂ ಸಹಾ ಗೊತ್ತಿಲ್ಲ, ಸಾವು ಬದುಕಿನ ಕೊನೆಯಲ್ಲಿ ಬಂದಾಗ ಯಾರಿಗೂ ಬೇಸರವಾಗುವುದಿಲ್ಲ ಆದರೆ ಸಾವು ಮಧ್ಯದಲ್ಲಿ ಬಂದಾಗ ಮಾತ್ರ ಬೇಸರವಾಗುತ್ತದೆ. ಇದನ್ನು ಆರಗಿಸಿಕೊಂಡು ಸಮಾಜದಲ್ಲಿ ಮುನ್ನಡೆಯಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.

Advertisement

ಅಭೀಷೇಕ ಕನಸು ಕಾಣುವ ಸಮಯದಲ್ಲಿ ಭಗವಂತ ಅವನನ್ನು ಕರೆದುಕೊಡಿದ್ದಾನೆ. ಆತನ ಇನ್ನೂ ಬದುಕಿದ್ದರೆ ಉತ್ತಮವಾದ ಜೀವನವನ್ನು ನಡೆಸುವುದರ ಮೂಲಕ ಬೇರೆಯವರಿಗೆ ಮಾರ್ಗದರ್ಶನವಾಗುತ್ತಿತು. ಸಾವು ಎಲ್ಲರಿಗೂ ಬರುತ್ತದೆ ಅದಕ್ಕೆ ಅಂಜದೇ ಧೈರ್ಯದಿಂದ ಬದುಕನ್ನು ನಡೆಸಬೇಕಿದೆ. ವೀರಶೈವ ಸಮುದಾಯದಲ್ಲಿ ಸಾವಿನಲ್ಲಿಯೂ ಸಹಾ ಸಾರ್ಥಕತೆಯನ್ನು ಮರೆದಿದ್ದಾರೆ. ಮರಣದಲ್ಲಿ ಮಹಾನವಮಿಯನ್ನು ಕಂಡುಕೊಂಡಿದ್ದಾರೆ. ಅಭೀಷೇಕರವರು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಲ್ಲೂ ಸಹಾ ಆತ್ಮೀಯತೆಯನ್ನು ಕಂಡುಕೊಂಡಿದ್ದಾರೆ. ಮಾತಿನಲ್ಲಿ, ಕೃತಿಯಲ್ಲಿ ಹೊಂದಾಣಿಕೆಯನ್ನು ಪಡೆದಿದ್ದರು. ಇವರನ್ನು ನೋಡಿಕೊಂಡವರಿಗೆ ಸ್ಮರಣೆ ಮಾಡುವುದು ಅಗತ್ಯವಾಗಿದೆ. ಇದನ್ನು ಶಿವಕುಮಾರ್‍ರವರು ಮಾಡಿದ್ದಾರೆ. ಎಂದು ಶ್ರೀಗಳು ಸ್ಮರಣೆ ಮಾಡಿದರು.

ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ಅಭೀಷೇಕರವರ ನಿಧನದಿಂದ ಅವರ ಕುಟುಂಬ ಹಾಗೂ ಬಂಧುಗಳಿಗೆ ನೋವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರನ್ನು ಬಿಟ್ಟು ಆಗಲಿದ್ದಾರೆ. ತಂದೆ-ತಾಯಿಗಳಿಗೆ ಇವರ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ, ಏನೇ ಆದರೂ ಸಹಾ ಮಗನ ಸಾವನ್ನು ಮರೆಯಲು ಸಾಧ್ಯವಿಲ್ಲ, ಸಮಾಜದಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಅವರ ನೆನಪನ್ನು ಮರೆಯಬೇಕಿದೆ. ಇದರಿಂದ ಅವರಿಗೆ ನಿಜವಾದ ಶ್ರದ್ದಾಂಜಲಿಯಾಗಿದೆ ಎಂದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಹುಟ್ಟಿದ ಮೇಲೆ ತುಂಬು ಜೀವನ ನಡೆಸಿ ಸಾಯುವುದು ಸಾಮಾನ್ಯ ಆದರೆ ಚಕ್ಕ ವಯಸ್ಸಿನಲ್ಲಿಯೇ ಸಾವಾಗುವುದು ದುಃಖದ ವಿಷಯವಾಗಿದೆ. ಅದರಲ್ಲೂ ತಂದೆ-ತಾಯಿಗಳ ಮುಂದೆ ಮಗ ಸಾಯುವುದು ಇನ್ನು ನೋಡಲಾದ ಪರಿಸ್ಥಿತಿಯಾಗಿದೆ. ಅಭೀಷೇಕ ಹೆಸರಿನಲ್ಲಿ ಪ್ರತಿ ವರ್ಷ ಸಹಾಯ ಮಾಡುವುದು ಉತ್ತಮವಾದ ಕಾರ್ಯವಾಗಿದೆ ಎಂದು ತಿಳಿಸಿದರು.

ಶಾಸಕರಾದ ಕೆ.ಸಿ.ವಿರೇಂದ್ರ ಮಾತನಾಡಿ, ಅಭೀಷೇಕ್ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರನ್ನು ಆಗಲಿದ್ದಾರೆ ಅವರು ಮತ್ತೋಮ್ಮೆ ಹುಟ್ಟಿ ಬರಲಿ, ಇವರ ತಂದೆ-ತಾಯಿಗಳಿಗೆ ಇವರ ಸಾವನ್ನು ನೆನೆದು ಇರುವುದಕ್ಕಿಂತ ಸಮಾಜ ಮುಖಿಯಾದ ಕೆಲಸಗಳನ್ನು ಮಾಡುವುದರ ಮೂಲಕ ಅದನ್ನು ಮರೆಯಬೇಕಿದೆ. ಇವರು ಸಾವಿನಲ್ಲಿಯೂ ಸಹಾ ಸಾರ್ಥಕತೆಯನ್ನು ಮರೆದಿದ್ದಾರೆ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಬೇರೆಯವರಿಗೆ ದಾರಿ ದೀಪವಾಗಿದ್ದಾರೆ. ಅಭೀಷೇಕ ಹೆಸರಿನಲ್ಲಿ ಅವರ ತಂದೆ 1 ಕೋಟಿ ಹಣವನ್ನು ಠೇವಣಿಯಾಗಿ ಇರಿಸಿ ಅದರಿಂದ ಬರುವ ಬಡ್ಡಿಯಿಂದ ಸಮಾಜಮುಖಿ ಕೆಲಸವನ್ನು ಮಾಡುವಂತೆ ತಿಳಿಸಿರುವುದು ಉತ್ತಮವಾದ ಕೆಲಸವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಅಭೀಷೇಕ ವಿಶೇಷ ಚೇತನ ವ್ಯಕ್ತಿಯಾಗಿದ್ದು, ಎಲ್ಲರಲ್ಲೂ ಸಹಾ ಹೊಂದಿಕೊಂಡು ಹೋಗುವಂತೆ ವ್ಯಕ್ತಿಯಾಗಿದ್ದರು, ಕಲವೇ ಕಾಲ ಬದುಕಿದ್ದರು ಸಹಾ ಎಲ್ಲರ ಮನದಲ್ಲಿ ನೆಲೆಯಾಗಿ ನಿಂತಿದ್ದಾರೆ. ಅವರು ನೆನಪುಗಳು ಮುಂದಿನ ದಿನದಲ್ಲಿ ಕಾಡುವುದು ಸಾಮಾನ್ಯ ಇದರಲ್ಲಿಯೇ ಬದುಕನ್ನು ಸಾಗಿಸಬೇಕಿದೆ ಎಂದರು.

ಮಾಜಿ ಸಚಿವರಾದ ಎಚ್.ಏಂಕಾತಯ್ಯ, ಶಾಸಕರಾದ ಎಸ್.ಕೆ.ಬಸವರಾಜನ್, ಭಾಜಪ ಮುಖಂಡರಾದ ಲಿಂಗಮೂರ್ತಿ, ಡಾ.ಸಿದ್ದಾರ್ಥ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟೇಲ್ ರುದ್ರಪ್ಪ, ಮಹೇಶ್ವರಪ್ಪ, ಪ್ರಸನ್ನ ಕುಮಾರ್, ಲಕ್ಷ್ಮೀಕಾಂತರೆಡ್ಡಿ, ಸೇರಿದಂತೆ ಇತರರು ಭಾಗವಹಿಸಿದ್ದರು.

ರಂಭಾಪುರಿ ಗುರುಕುಲದ ಸಾಧಕರಿಂದ ವೇದ ಘೋಷವಾದರೆ ಶ್ರೀಮತಿ ಶೋಭಾ, ವಿಜಯಲಕ್ಷ್ಮೀ ಪ್ರಾರ್ಥಿಸಿದರು ಪಟೇಲ್ ಶಿವಕುಮಾರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ನಿವೃತ್ತ ಉಪನ್ಯಾಸಕಿ ಶ್ರೀಮತಿ ಶೈಲಾ ಕಾರ್ಯಕ್ರಮ ನಿರೂಪಿಸಿದರು.

Tags :
Advertisement