Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮನೆ ಮನಸ್ಸುಗಳಲ್ಲಿ ವಚನಗಳನ್ನು ಅನುಸಂಧಾನ ಮಾಡಿಕೊಂಡರೆ ಜಗತ್ತನ್ನೇ ಅರಿತಂತೆ : ಡಾ. ಜೆ. ಕರಿಯಪ್ಪ ಮಾಳಿಗೆ

05:02 PM Jul 03, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ.03 :  ಭಾರತದ ಮೊದಲ ಮಹಿಳಾ ವಿಮೋಚನಾ ಚಳುವಳಿ ಹಾಗೂ ಗಟ್ಟಿಯಾಗಿ ಮಾತನಾಡುವ ಶಕ್ತಿ ನೀಡಿದ್ದು ವಚನ ಸಾಹಿತ್ಯ. ಮನೆ ಮನಸ್ಸುಗಳಲ್ಲಿ ವಚನಗಳನ್ನು ಅನುಸಂಧಾನ ಮಾಡಿಕೊಂಡರೆ ಜಗತ್ತನ್ನೇ ಅರಿತಂತೆ ಎಂದು ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ. ಜೆ. ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.

Advertisement

 

ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ವತಿಯಿಂದ ಐಕ್ಯೂಎಸಿ ಅಡಿಯಲ್ಲಿ “ವಚನ ಸಾಹಿತ್ಯ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 144ನೇ ಜಯಂತಿ” ಯ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ 3ನೇ ದಿನವಾದ ಇಂದು ವಿಶೇಷ ಉಪನ್ಯಾಸ ನೀಡಿದ ಅವರು ವಚನಗಳು ವೈಜ್ಞಾನಿಕ ಮನೋಭಾವ ಮತ್ತು ಅರಿವನ್ನು ಮೂಡಿಸುತ್ತವೆ.
ನಮ್ಮನ್ನು ನಾವು ಅರ್ಥೈಸಿಕೊಳ್ಳಲು ಸಹಕಾರಿ ಎಂದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಇವರು ವಚನ ಸಾಹಿತ್ಯದ ಪ್ರಸ್ತುತತೆಯನ್ನು ತಿಳಿಸಿದರು. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಸಿ. ಸುಧಾರಾಣಿ, ಇವರು ಕಂದಾಚಾರ, ಮೌಢ್ಯಗಳ ವಿರುದ್ಧ ನಡೆದ ಸಾಮಾಜಿಕ ಚಳುವಳಿ ವಚನ ಸಾಹಿತ್ಯ ಎಂದರು.
ಐಕ್ಯೂಎಸಿ & ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಪ್ರೊ. ಎಂ.ಎಸ್. ಪರಮೇಶ್ವರ, ಇವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಟಿ. ಜಯಣ್ಣ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು, ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಚಂದ್ರವಳ್ಳಿ ಈ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕು. ಚಂದನ. ಹಾಗೂ ಕು. ಪವಿತ್ರ ಪ್ರಾರ್ಥಿಸಿದರು. ಶ್ರೀ ನವೀನ್ ಮಸ್ಕಲ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Advertisement
Tags :
bengaluruchitradurgaDr. J. Kariappa Maligestudy the scriptures in your heartsuddionesuddione newsಚಿತ್ರದುರ್ಗಡಾ. ಜೆ ಕರಿಯಪ್ಪ ಮಾಳಿಗೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article