Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನರೇಂದ್ರಮೋದಿಯವರನ್ನು ಗೆಲ್ಲಿಸಿಕೊಳ್ಳದಿದ್ದರೆ ನಮ್ಮಂತಹ ಮೂರ್ಖರು ಯಾರೂ ಇಲ್ಲ : ಎಂ.ಸಿ.ರಘುಚಂದನ್

04:14 PM Feb 07, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.07  : ಎಲ್ಲರೂ ಒಂದಾಗಿ ದುಡಿಯೋಣ. ಬಿಜೆಪಿಯನ್ನು ಬಲಪಡಿಸಿ ಮತ್ತೆ ನರೇಂದ್ರಮೋದಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡೋಣ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂ.ಸಿ.ರಘುಚಂದನ್ ಮುಖಂಡರು ಹಾಗೂ ಕಾರ್ಯಕರ್ತರುಗಳಲ್ಲಿ ಮನವಿ ಮಾಡಿದರು.

Advertisement

ಚಳ್ಳಕೆರೆ ಪಟ್ಟಣದಲ್ಲಿ ಬುಧವಾರ ನಡೆದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಿದೆ. ಹೊಳಲ್ಕೆರೆಯಲ್ಲಿ ಎಂ.ಚಂದ್ರಪ್ಪ ಒಬ್ಬರೆ ಗೆದ್ದು ಶಾಸಕರಾಗಿದ್ದಾರೆ. ಪಾರ್ಲಿಮೆಂಟ್ ಕ್ಷೇತ್ರದ ಎಂಟು ತಾಲ್ಲೂಕುಗಳಲ್ಲಿ ಒಬ್ಬರೆ ಶಾಸಕರಿರುವುದರಿಂದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದೆ. 2019 ರಲ್ಲಿಯೇ ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ಕೇಳಿದ್ದೆ. ಪಕ್ಷದ ವರಿಷ್ಠರು ಮುಂದಿನ ಸಾರಿ ಅವಕಾಶ ನೀಡುವುದಾಗಿ ಹೇಳಿದ್ದರಿಂದ ಸುಮ್ಮನಾದೆ. ಈಗಲೂ ನಾನು ಆಕಾಂಕ್ಷಿಯೇ. ಆದರೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿ ಮನಃಪೂರ್ವಕವಾಗಿ ಗೆಲುವಿಗೆ ದುಡಿಯುತ್ತೇನೆಂದು ಭರವಸೆ ನೀಡಿದರು.

ಟಿಕೆಟ್, ಓಟಿನ ರಾಜಕಾರಣ ಮಾಡುವವನಲ್ಲ. ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಪಕ್ಷ ಗಟ್ಟಿಗೊಳಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನಾವು ಒಂದು ಸಮುದಾಯದ ವಿರುದ್ದ ಹೊರಟಿದ್ದೇವೆಂದು ಕೆಲವರು ಬಿಂಬಿಸಿದ್ದರು. ಯಾರ ಮೇಲೂ ನನಗಾಗಲಿ ನನ್ನ ತಂದೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನವರಿಗಾಗಲಿ ಶತ್ರುತ್ವವಿಲ್ಲ.  ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತೇವೆ. ಯಾರು ವಿರೋಧಿಗಳಲ್ಲ. ಒಂದು ಕುಟುಂಬಕ್ಕೆ ಸೇರಿದವರು ಎನ್ನುವ ಭಾವನೆಯಿಂದ ಪಕ್ಷ ಬಲವರ್ಧನೆಗೆ ಶ್ರಮಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪಕ್ಷ ಟಿಕೇಟ್ ಯಾರಿಗೆ ಕೊಡಲಿ ಬದ್ದತೆಯಿಟ್ಟುಕೊಂಡು ಕೆಲಸ ಮಾಡುತ್ತೇವೆ. ನರೇಂದ್ರಮೋದಿಯಂತಹ ಪುಣ್ಯಾತ್ಮನನ್ನು ಗೆಲ್ಲಿಸಿಕೊಳ್ಳದಿದ್ದರೆ ನಮ್ಮಂತಹ ಮೂರ್ಖರು ಯಾರೂ ಇಲ್ಲ. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿಯೋಣ ಎಂದು ಹೇಳಿದರು.

ಚಳ್ಳಕೆರೆ ಮಾಜಿ ಶಾಸಕ ಬಸವರಾಜ್ ಮಂಡಿಮಠ್, ಮಾಜಿ ಅಧ್ಯಕ್ಷ ಡಿ.ಸೋಮಶೇಖರ್ ಮಂಡಿಮಠ್, ಹಿರಿಯ ಮುಖಂಡರುಗಳಾದ ಜಯಪಾಲಯ್ಯ, ಭದ್ರಣ್ಣ, ಶಿವಪುತ್ರಪ್ಪ, ಪ್ರಸಾದ್, ವೀರಣ್ಣ, ಶ್ರೀಮತಿ ಪಾಲಮ್ಮ, ಶ್ರೀಮತಿ ರತ್ನಮ್ಮ, ಶ್ರೀಮತಿ ಸಾಕಮ್ಮ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಜಾಜೂರು, ನನ್ನಿವಾಳ, ಪರಶುರಾಂಪುರ, ತಳಕಿನಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಹುರಿದುಂಬಿಸಿದರು.

Advertisement
Tags :
challakerechitradurgaMC RaguchandanNarendra modiPrime Minister Narendra Modisuddionesuddione newsಚಳ್ಳಕೆರೆಚಿತ್ರದುರ್ಗಪ್ರಧಾನಿ ನರೇಂದ್ರ ಮೋದಿ‌ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article