Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಂಘಟನೆ ಮತ್ತು ಬದ್ಧತೆ ಇದ್ದಲ್ಲಿ ಗೆಲುವು ನಿಶ್ಚಿತ :  ರಘುಚಂದನ್

07:04 PM Feb 12, 2024 IST | suddionenews
Advertisement

ಸುದ್ದಿಒನ್, ಹೊಸದುರ್ಗ, ಫೆಬ್ರವರಿ.12 : ಸಂಘಟನೆ ಮತ್ತು ಬದ್ಧತೆ ಎಲ್ಲಿ ಬಲಗೊಂಡಿರುತ್ತದೆಯೋ, ಅಲ್ಲಿ ವಿಜಯ ನಿಶ್ಚಿತವಾಗಿರುತ್ತದೆ ಎಂದು ಬಿಜೆಪಿ ಯುವ ಮುಖಂಡ, ಚಿತ್ರದುರ್ಗ ಲೋಕಸಭಾ ಚುನಾವಣಾ ಸ್ಪರ್ಧಾಕಾಂಕ್ಷಿ  ರಘು ಚಂದನ್ ಹೇಳಿದರು.

Advertisement

ನಗರದಲ್ಲಿ ಸೋಮವಾರ 3 ನೇ ಬಾರಿಗೆ ಮತ್ತೊಮ್ಮೆ ಮೋದಿ ಎಂಬ ಸಂಘಟನಾತ್ಮಕ ಅಭಿಯಾನದ ನೇತೃತ್ವವಹಿಸಿ ಮಾತನಾಡಿದ ಅವರು, ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಪುನರಾಯ್ಕೆ ಬಯಸಿ ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಘಟನೆ ಬಲಗೊಳಿಸುತ್ತಿದ್ದು, ಈ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದು ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದರು.

ಭಾರತ ದೇಶ, ಪ್ರಧಾನಿ ನರೇಂದ್ರ ಮೋದಿಯ ಅಧಿಕಾರ ಅವಧಿಯಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಅರ್ಥ ವ್ಯವಸ್ಥೆಯಲ್ಲಿ ಪ್ರಪಂಚದ 5 ನೇ ರಾಷ್ಟ್ರವಾಗಿದ್ದು, ವಿವಿಧ ರಂಗದಲ್ಲಿ ಮೋದಿಯವರು ದೇಶವನ್ನ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಬಿಜೆಪಿಯು ಪ್ರಪಂಚದಲ್ಲಿಯೇ ಇಂದು ಅತ್ಯಂತ ಹೆಚ್ಚು ಕಾರ್ಯಕರ್ತರನ್ನ ಹೊಂದಿರುವ ಪಕ್ಷವಾಗಿದ್ದು, ನಮ್ಮ ಪ್ರಧಾನಿ ಮೋದಿಯವರು ನೀಡಿರುವ ರೈತಪರ ಮತ್ತು ಜನಪರ ಯೋಜನೆಗಳನ್ನ ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ನಮ್ಮ ಕಾರ್ಯಕರ್ತರ ಪಡೆ ಕೆಲಸ ಮಾಡಬೇಕು ಎಂದು ತಿಳಿಸಿದರು.

Advertisement

ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವುದೇ ನಮ್ಮ ಗುರಿ. ನಮ್ಮ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರರವರು ಅಧಿಕಾರವಹಿಸಿಕೊಂಡ ತರುವಾಯ ಕೇವಲ 70 ದಿನದಲ್ಲಿ  10,000 ಕಿ.ಮೀ ಪ್ರಯಾಣಿಸಿ, ನಮ್ಮ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದಾರೆ. ಅವರ ನೇತೃತ್ವದಲ್ಲಿ ಈ ಬಾರಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದರ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಯವರನ್ನ ಪ್ರಧಾನಿಯಾಗಿಸಲು ನಮ್ಮ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿಜಿಯವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೊಸದುರ್ಗ ತಾಲೂಕಿನ ಹೆಬ್ಬಳ್ಳಿ, ಮಲ್ಲಪ್ಪನಹಳ್ಳಿ, ಆನಿವಾಳ ಬಾಗೂರು, ಹೊಸದುರ್ಗ, ಮತ್ತೋಡು, ಕಂಚಿಪುರ ಶ್ರೀರಾಂಪುರ, ಬೆಲಗೂರು, ದೊಡ್ಡಘಟ್ಟ, ಜಾನಕಲ್ ಗ್ರಾಮ ಪಂಚಾಯಿತಿಯ ವಿವಿಧ ಹಳ್ಳಿಗಳ ಕಾರ್ಯಕರ್ತರನ್ನ ಭೇಟಿ ಮಾಡಿ, ಸಂಘಟನೆಯ ಬಲಪಡಿಸಲು ಮನವಿ ಮಾಡಿದರು.

ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್  ರಾಮಯ್ಯ, ಪುರಸಭಾ ಸದಸ್ಯರಾದ ಶ್ರೀನಿವಾಸ್, ನಾಗರಾಜು, ದೊಡ್ಡಯ್ಯ, ಮುಖಂಡರಾದ ದಿಲ್ಸೆ ದಿಲೀಪ್ ಗುರುಸ್ವಾಮಿ, ಪ್ರವೀಣ್, ಶಿವು ಮಠ, ಮಂಜುನಾಥ್, ಹೆಗ್ಗೆರೆ ಶಂಕ್ರಪ್ಪ, ಪಂಪ, ಮಂಜುನಾಥ್ ಕೊಂಡಾಪುರ, ಸುನಿಲ್ ಮಲ್ಲಪ್ಪನಹಳ್ಳಿ,  ಹೇರೂರು ಮಂಜುನಾಥ್,, ಕಲ್ಲೇಶ್ ಮತ್ತು ಸಿದ್ದೇಶ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂಬರುವ ಚಿತ್ರದುರ್ಗ ಲೋಕಸಭಾ ಚುನಾವಣಾ ಕ್ಷೇತ್ರದಿಂದ ನಾನು ಸ್ಪರ್ಧಾಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು ಸ್ಪರ್ಧೆಗೆ ಅವಕಾಶ ಕಲ್ಪಿಸಿದರೆ, ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಒಂದು ವೇಳೆ ಪಕ್ಷ ಯಾರನ್ನಾದರೂ, ಗುರುತಿಸಿ ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಕಳೆದ ಬಾರಿ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಕೊಟ್ಟ ಮಾತಿನಂತೆ ರಾಮಮಂದಿರ ನಿರ್ಮಾಣವಾಗಿದೆ. ಬಿಜೆಪಿ ಎಂದರೆ ಭರವಸೆಯಾಗಿದೆ. ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿದ್ದು, ಕಾರ್ಯಕರ್ತರ ಜೊತೆಗೂಡಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇನೆ.

ಸಿ.ರಘುಚಂದನ್,
ಬಿಜೆಪಿ ಯುವ ಮುಖಂಡ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ.

Advertisement
Tags :
certainchitradurgaCommitmenthosadurgamc Raghu chandanorganizationRaghuchandansuddionesuddione newsvictoryಎಂ.ಸಿ. ರಘು ಚಂದನ್ಗೆಲುವುಚಿತ್ರದುರ್ಗನಿಶ್ಚಿತಬದ್ಧತೆರಘುಚಂದನ್ಸಂಘಟನೆಸುದ್ದಿಒನ್ಸುದ್ದಿಒನ್ ನ್ಯೂಸ್ಹೊಸದುರ್ಗ
Advertisement
Next Article