For the best experience, open
https://m.suddione.com
on your mobile browser.
Advertisement

ಲಿಂಗಾಯಿತ ಧರ್ಮ ಸಂಸ್ಕೃತಿ ಯಂತೆ ನಡೆದರೆ ಮೀಸಲಾತಿ ಹೋರಾಟಗಳ ಪ್ರಶ್ನೆಯೆ ಬರುವುದಿಲ್ಲ : ಶರಣೆ ಮುಕ್ತಾ ಕಾಗಿ

05:28 PM Dec 15, 2023 IST | suddionenews
ಲಿಂಗಾಯಿತ ಧರ್ಮ ಸಂಸ್ಕೃತಿ ಯಂತೆ ನಡೆದರೆ ಮೀಸಲಾತಿ ಹೋರಾಟಗಳ ಪ್ರಶ್ನೆಯೆ ಬರುವುದಿಲ್ಲ   ಶರಣೆ ಮುಕ್ತಾ ಕಾಗಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್.15 : ಮಹಿಳಾ ಸಮಾನತೆಯ ಜೊತೆ ಜೊತೆಗೆ ಸಮ ಸಮಾಜ ಕಟ್ಟುವ ಕನಸು ಬಸವಾದಿ ಶರಣರದ್ದಾಗಿತ್ತು ಎಂದು ಜಾಗತಿಕ ಲಿಂಗಾಯಿತ ಮಹಾಸಭಾದ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಶರಣೆ ಮುಕ್ತಾ ಕಾಗಿ ಹೇಳಿದರು.

Advertisement

ನೀಲಕಂಠೇಶ್ವರ ಸಭಾಂಗಣದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು.

ಬಸವಾದಿ ಶರಣರ ತಾತ್ವಿಕ ಚಿಂತನೆಗಳು ಇಂದಿನ ಸಂವಿಧಾನದ ಬೆಳಕು ವೈದಿಕ ಅಸಮಾನತೆಯ ವೈಭವೀಕರಣದಿಂದ ದೂರ ಸರಿದು ಸರ್ವರನ್ನು ಒಳಗೊಳ್ಳುವ ಲಿಂಗಾಯಿತ ಧರ್ಮವನ್ನು ಪರಿಕಲ್ಪಿಸಿ ಅನುಷ್ಠಾನಗೊಳಿಸಿದ್ದು, ಇವತ್ತಿನ ಎಲ್ಲಾ ಸಮಸ್ಯೆಗಳಿಗೆ ಬಸವಾದಿ ಶರಣರ ಪರಿಹಾರವಾಗಬಲ್ಲ ಈ ಧರ್ಮ ಇತರೆ ಧರ್ಮಗಳಿಗಿಂತ ವಿಭಿನ್ನ ಮತ್ತು ಅನನ್ಯವಾದ್ದರಿಂದ ಬೇರೆ ಧರ್ಮಗಳ ಪ್ರಭಾವದಿಂದ ಬಿಡುಗಡೆಗೊಳಿಸಿ ಸ್ವತಂತ್ರವಾಗಿಸಬೇಕಿದೆ ಎಂದರು.

ಲಿಂಗಾಯಿತ ಧರ್ಮ ಸಂಸ್ಕøತಿಯಂತೆ ಎಲ್ಲರೂ ನಡೆದರೆ ಮೀಸಲಾತಿ ಹೋರಾಟಗಳ ಪ್ರಶ್ನೆಯೆ ಬರುವುದಿಲ್ಲ. ಏಕೆಂದರೆ ಅಸಮಾನತೆಯ ಅನಿಷ್ಠಗಳ ವಿರುದ್ದದ ರಕ್ಷಣೆಯಾಗಿಯೇ ಇಂದಿನ ಮೀಸಲಾತಿ ಅನಿವಾರ್ಯ ಎಂದು ತಿಳಿಸಿದರು.

ಸಾಹಿತಿ ಮತ್ತು ಸಂಸ್ಕøತಿ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ಲಿಂಗಾಯಿತ ಸ್ವತಂತ್ರ ಧಾರ್ಮಿಕವಾಗಿ ಸಾಂವಿಧಾನಾತ್ಮಕವಾಗಿ ಘೋಷಿಸಲ್ಪಟ್ಟರೆ ಅಸಮಾನತೆಯ ಬೇರು ಬಿಳಿಲುಗಳನ್ನು ವಿಸ್ತರಿಸಿಕೊಳ್ಳುತ್ತ ನಡೆದು ಬರುತ್ತಿರುವ ವೈದ್ದಿಕ ಸಂಸ್ಕøತಿಯನ್ನು ಜನಪರ ಮತ್ತು ಜೀವಪರಗೊಳಿಸುವ ಏಕೈಕ ಮಾರ್ಗವೆಂದರೆ ಬಸವಾದಿ ಶರಣರ ವಿಸ್ಮಯದ ನೆಲೆಯಲ್ಲಿ ಲಿಂಗಾಯಿತ ಧರ್ಮವನ್ನು ಅನುಷ್ಠಾನಗೊಳಿಸುವುದಾಗಿದೆ ಎಂದು ಹೇಳಿದರು.

ಕೆಂಚವೀರಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾದ ಕೈಗಾರಿಕೋದ್ಯಮಿಗಳ ಪ್ರತಿನಿಧಿ ವೀಣ ಸುರೇಶ್, ನಿವೃತ್ತ ಉಪನ್ಯಾಸಕಿ ರೋಹಿಣಿ ಬಸವರಾಜ್, ಎ.ಬಿ.ಧನಂಜಯ, ಜಿ.ಎಂ.ಶಿವಾನಂದ್, ವೇದಿಕೆಯಲ್ಲಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಸೋಮಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿತಾ ವೀರೇಶ್ ಪ್ರಾರ್ಥಿಸಿದರು. ಗೀತ ಸ್ವಾಗತಿಸಿದರು. ರಶ್ಮಿ ವಂದಿಸಿದರು.

Tags :
Advertisement