For the best experience, open
https://m.suddione.com
on your mobile browser.
Advertisement

ಬುದ್ದ ಧಮ್ಮವನ್ನು ಪ್ರತಿಯೊಬ್ಬರು ಪಾಲಿಸಿದರೆ ಹಿಂಸೆ ತೊಲಗುತ್ತದೆ : ಪ್ರೊ.ಸಿ.ಕೆ.ಮಹೇಶ್

05:17 PM Oct 14, 2024 IST | suddionenews
ಬುದ್ದ ಧಮ್ಮವನ್ನು ಪ್ರತಿಯೊಬ್ಬರು ಪಾಲಿಸಿದರೆ ಹಿಂಸೆ ತೊಲಗುತ್ತದೆ   ಪ್ರೊ ಸಿ ಕೆ ಮಹೇಶ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 14 : ದೇವರು, ಧರ್ಮದ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ಬುದ್ದ ಕಟುವಾಗಿ ವಿರೋಧಿಸಿದ್ದರು ಎಂದು ಪ್ರೊ.ಸಿ.ಕೆ.ಮಹೇಶ್ ಹೇಳಿದರು.
ಅಂಬೇಡ್ಕರ್-ನವಯಾನ ಬುದ್ದ ಧಮ್ಮ ಸಂಘದಿಂದ ಅಂಬೇಡ್ಕರ್ ಪ್ರತಿಮೆ ಹತ್ತಿರ ಸೋಮವಾರ ನಡೆದ ಧಮ್ಮ ದೀಕ್ಷೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

Advertisement
Advertisement

ಶ್ರೀಮಂತ-ಬಡವ ಎನ್ನುವ ವ್ಯತ್ಯಾಸದಿಂದ ಹಿಂಸೆ ಹುಟ್ಟುತ್ತದೆಯೆಂದು ಬುದ್ದ ವಿಶ್ವಕ್ಕೆ ಸಂದೇಶ ಸಾರಿದ. ಬುದ್ದನ ಆಲೋಚನೆಯನ್ನು ಪಲ್ಲವರು, ಅಶೋಕರು ತಿಳಿದುಕೊಂಡು ಹಿಂಸೆಯನ್ನು ವಿರೋಧಿಸುತ್ತಿದ್ದರು. ಅದಕ್ಕಾಗಿ ಬುದ್ದ ಧಮ್ಮವನ್ನು ಪ್ರತಿಯೊಬ್ಬರು ಪಾಲಿಸಿದರೆ ಹಿಂಸೆ ತೊಲಗುತ್ತದೆ. ರಕ್ತದ ಮಡುವಿನಲ್ಲಿ ಒದ್ದಾಡುವ ಸ್ಥಿತಿ ಬಂದಿದೆ. ಜ್ಯೋತಿಷಿ, ಭವಿಷ್ಯವನ್ನು ಹೇಳಿ ಅಮಾಯಕರನ್ನು ವಂಚಿಸುತ್ತಿದ್ದುದವನ್ನು ಬುದ್ದ ಒಪ್ಪುತ್ತಿರಲಿಲ್ಲ ಎಂದು ತಿಳಿಸಿದರು.
ಧರ್ಮ ದೇವರ ನೆಪದಲ್ಲಿ ಕುಣಿದು ಕುಪ್ಪಳಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಕುಡಿತದಿಂದ ಕುಟುಂಬ ಹಾಳಾಗುತ್ತದೆ. ಅದಕ್ಕಾಗಿ ಬುದ್ದನ ವಿಚಾರಗಳನ್ನು ಒಪ್ಪುವವರು ಮೊದಲು ಕುಡಿತ ತ್ಯಜಿಸಬೇಕು. ಹಾಗಾಗಿ ಬುದ್ದ ಎಲ್ಲಾ ಕಾಲಕ್ಕೂ ಪ್ರಸ್ತುತ. ಯಜ್ಞ, ಯಾಗಾದಿ, ಹವನ, ಹೋಮಗಳನ್ನು ಬುದ್ದ ಸದಾ ವಿರೋಧಿಸುತ್ತಿದ್ದರು. ಕುಡಿತ ತಪ್ಪಿಸಿದರೆ ಮನೆ ಕುಟುಂಬ ಉಳಿಯುತ್ತದೆ ಎನ್ನುವುದು ಬುದ್ದನ ಚಿಂತನೆಯಾಗಿತ್ತು ಎಂದರು.

ಸುಳ್ಳು, ಹಿಂಸೆ, ಕುಡಿತ, ವ್ಯಭಿಚಾರದಿಂದ ನೈತಿಕ ಹಾಗೂ ಬೌತಿಕವಾಗಿ ಮನುಷ್ಯ ದಿವಾಳಿಯಾಗುತ್ತಾನೆ. ಬುದ್ದ ಧರ್ಮದ ಬೆಳವಣಿಗೆಯಂದರೆ ಅದು ದೇಶದ ಅಭಿವೃದ್ದಿಯಿದ್ದಂತೆ. ಮನಸ್ಸು ಮತ್ತು ಮನೆಗಳಲ್ಲಿ ಬುದ್ದ ಧಮ್ಮದ ಆಲೋಚನೆಯಿಟ್ಟುಕೊಳ್ಳಬೇಕು. ವಿಶ್ವಾದ್ಯಂತ ಬುದ್ದನ ಮರುಹುಟ್ಟು ಪಡೆದುಕೊಳ್ಳುತ್ತಿದೆ. ಬುದ್ದ ಧಮ್ಮವನ್ನು ಎದೆಗಿಟ್ಟುಕೊಂಡು ಬದುಕುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ನುಡಿದರು.

ನಿವೃತ್ತ ಉಪ ವಿಭಾಗಾಧಿಕಾರಿ ಮಲ್ಲಿಕಾರ್ಜುನ್ ಹಿರೇಹಳ್ಳಿ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಹಿಂದೂ ಧರ್ಮವನ್ನು ತೊರೆದು ಬುದ್ದ ಧರ್ಮಕ್ಕೆ ಹೋದರು. ಅಂತಹ ವಾತಾವರಣ ಸೃಷ್ಟಿಯಾಗಬೇಕಾದರೆ ಪ್ರತಿ ಮನೆ ಮನೆಗೆ ಬುದ್ದನ ವಿಚಾರಗಳು ತಲುಪಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ ರಾಘವೇಂದ್ರ, ಡಿ.ದುರುಗೇಶಪ್ಪ, ಚಿಕ್ಕಣ್ಣ, ರಾಮುಗೋಸಾಯಿ, ದಲಿತ ಮುಖಂಡ ಬಿ.ರಾಜಣ್ಣ, ಪಿ.ವೈ.ದೇವರಾಜ್‍ಪ್ರಸಾದ್, ಟಿ.ರಾಮು
ನಿವೃತ್ತ ಡಿ.ಡಿ.ಪಿ.ಐ. ರುದ್ರಪ್ಪ, ಲೇಖಕ ಹೆಚ್.ಆನಂದ್‍ಕುಮಾರ್, ಸಿದ್ದೇಶಿ ಇನ್ನು ಅನೇಕರು ಧಮ್ಮ ದೀಕ್ಷೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement
Tags :
Advertisement