Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾನು 70 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇನೆ : ಗೋವಿಂದ ಕಾರಜೋಳ

05:56 PM Jun 03, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜೂ. 03 :  ನನ್ನ ರಾಜಕೀಯ ಅನುಭವ ಮತ್ತು ಲೆಕ್ಕಾಚಾರದ ಪ್ರಕಾರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ 24ಕ್ಕಿಂತಲ್ಲೂ ಹೆಚ್ಚು ಸ್ಥಾನವನ್ನು ಎನ್.ಡಿ.ಎ ಗೆದ್ದರೆ ಆಶ್ಚರ್ಯ ಪಡಬೇಕಿಲ್ಲ, ಇನ್ನೂ ಹೆಚ್ಚಳವಾದರೂ ಆಗಬಹುದಾಗಿದೆ ಎಂದು ಎನ್.ಡಿ.ಎ.ಮೈತ್ರಿ ಕೂಟದ ಅಭ್ಯರ್ಥಿ ಗೋವಿಂದ ಕಾರಜೋಳ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Advertisement

ನಗರದಲ್ಲಿ ನಡೆದ ಆಗ್ನೇಯ ಶಿಕ್ಷಕರ ಚುನಾವಣೆ ಸಂದರ್ಭದಲ್ಲ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, 2024ರ ಲೋಕಸಭಾ ಚುನಾವಣೆ ನರೇಂದ್ರ ಮೋದಿಯವರ 10 ವರ್ಷದ ಅನುಭವ ಆಧಾರದ ಮೇಲೆ ದೇಶದ ಅಭಿವೃದ್ದಿ, ದೇಶದ ರಕ್ಷಣೆ, ಮತ್ತು ದೀನ ದಲಿತರ ಕಲ್ಯಾಣಕ್ಕಾಗಿ ಸಾಮಾನ್ಯ ವರ್ಗದವರ ಕಲ್ಯಾಣಕ್ಕಾಗಿ ಹಾಕಿಕೊಂಡ ಕಾರ್ಯಕ್ರಮಗಳು ಮತ್ತು ಅಭೀವೃದ್ದಿ, ಅದರ ವಿರುದ್ದವಾಗಿ ಕಾಂಗ್ರೆಸ್‍ನ 60 ವರ್ಷದ ಆಡಳಿತದಲ್ಲಿ ಆಗಿರುವ ಅಭಿವೃದ್ದಿಯನ್ನು ತುಲಾನ್ಮಾಕವಾಗಿ ಈ ದೇಶದ ಜನ ನೋಡಿದ ನಂತರ ತೀರ್ಮಾನಕ್ಕೆ ಬಂದು ಈ ದೇಶ ಸುರಕ್ಷಿತವಾಗಿ ಇರಬೇಕಾದರೆ ದೇಶದ ಆಭೀವೃದ್ದಿಯಾಗಬೇಕಾದರೆ ಈ ದೇಶ ಪ್ರಪಂಚದ ಇನ್ನೂಳಿದ ರಾಷ್ಟ್ರಗಳ ಜೊತೆ ಅಭಿವೃದ್ದಿಯಲ್ಲಿ ಪೈಪೋಟಿ ಮಾಡಬೇಕಾದರೆ ಮತ್ತೊಮ್ಮೆ ಮೋದಿಜಿಯವರು ಅವಶ್ಯಕ ಎಂದು ತಿಳಿದು ಜನ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿದ್ದಾರೆ.

ಇದೇ ರೀತಿಯಲ್ಲಿ ಬಿಜೆಪಿಯನ್ನು ಮತದಾರರು ಬೆಂಬಲಿಸಿದ್ದಾರೆ  28 ಸ್ಥಾನಗಳಲ್ಲಿ ನನ್ನ ರಾಜಕೀಯ ಅನುಭವ ಮತ್ತು ಲೆಕ್ಕಾಚಾರದ ಪ್ರಕಾರ 24ಕ್ಕಿಂತಲ್ಲೂ ಹೆಚ್ಚು ಸ್ಥಾನವನ್ನು ಎನ್.ಡಿ.ಎ ಗೆದ್ದರೆ ಆಶ್ಚರ್ಯ ಪಡಬೇಕಿಲ್ಲ, ಇನ್ನೂ ಹೆಚ್ಚಳವಾದರೂ ಆಗಬಹುದಾಗಿದೆ.

ಚಿತ್ರದುರ್ಗ ಕ್ಷೇತ್ರದಲ್ಲಿ ಸಹಾ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಮತದಾರರ ಮನೆ ಬಾಗಿಲಿಗೆ ನಾವು ಹೋದಾಗ ನೀವು ಗೆಲ್ಲಿತ್ತಿರಾ ಹೋಗ್ರೀ ಈ ಬಾರಿ ನಾವು ನರೆಂದ್ರ ಮೋದಿಯವರಿಗೆ ಮತವನ್ನು ನೀಡುವುದಾಗಿ ತಿಳಿಸಿದ್ದಾರೆ.

ಚಿತ್ರದುರ್ಗ ಜನನೂ ಗೋವಿಂದ ಕಾರಜೋಳ ಬಂದರೆ ನೀರಾವರಿ ಕುಡಿಯುವ ನೀರಿನ ಬಗ್ಗೆ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಾರೆ ಎಂಬ ಭಾವನೆ ಇಟ್ಟು ಕೊಂಡು ಹಾಗೂ ನನ್ನ 30 ವರ್ಷದ ಅಧಿಕಾರದ ಅವಧಿಯಲ್ಲಿನ ಮಾಡಿದ ಕೆಲಸ ಕಾರ್ಯವನ್ನು ಗಮನದಲ್ಲಿ ಇಟ್ಟುಕೊಂಡು ಮತದಾನ ಮಾಡಿದ್ದಾರೆ.

ನಮ್ಮ ಪಕ್ಷದ ಸಂಪ್ರಾದಾಯಕ ಮತದಾರರು ಶೇ. 75 ರಷ್ಟು ಮತದಾನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಾನು 70 ಸಾವಿರ ಅಧಿಕ ಮತಗಳಿಂದ ನಿಶ್ಚಿತವಾಗಿ ಗೆಲುವನ್ನು ಸಾಧಿಸುತ್ತೇನೆ. ನನ್ನ ಈ ಚುನಾವಣೆಗೆ ಶ್ರಮವನ್ನು ಹಾಕಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಈ ಚುನಾವಣೆಯನ್ನು ಮಾಡಿದ್ದಾರೆ ಏಕೆಂದರೆ ನಾನು ಈ ಜಿಲ್ಲೆಗೆ ಹೊಸಬನಾಗಿದ್ದೇನೆ ಮಂತ್ರಿಯಾಗಿ ಹಲವಾರು ಬಾರಿ ಬಂದಿರಬಹುದು. ಇಲ್ಲಿ ಹಲವಾರು ಕೆಲಸವನ್ನು ಮಾಡಿದ್ದೇನೆ ಇದನ್ನು ಮತದಾರರು ಚುನಾವಣೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ನನಗೆ ಆತ್ಮ ವಿಶ್ವಾಸ ಇದೆ ನಾನು ಗದ್ದು ಬರುತ್ತೇನೆ ಇದ್ದಲ್ಲದೆ ನರೆಂದ್ರ ಮೋದಿಯವರ ಮತ್ತೋಮ್ಮೆ ಈ ದೇಶದ ಪ್ರಧಾನ ಮಂತ್ರಿಗಳಾಗಲಿದ್ದಾರೆ. ಮುಂದಿನ 5 ವರ್ಷದ ಅವಧಿಯಲ್ಲಿ ಭಾರತ ಪ್ರಪಂಚದ ವಿಶ್ವ ಗುರು ಆಗುವ ನಂಬಿಕೆ ಇದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

Advertisement
Tags :
bengaluruchitradurgaGovinda Karajolsuddionesuddione newsಗೋವಿಂದ ಕಾರಜೋಳಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article