For the best experience, open
https://m.suddione.com
on your mobile browser.
Advertisement

ಭ್ರಷ್ಟ ರಾಜಕಾರಣಿ ನಾನಲ್ಲ, ಭ್ರಷ್ಟಚಾರದ ಕುರ್ಚಿಯ ಪಕ್ಕದಲ್ಲೂ ನಾನು ಕೂರುವುದಿಲ್ಲ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

07:14 PM Dec 22, 2023 IST | suddionenews
ಭ್ರಷ್ಟ ರಾಜಕಾರಣಿ ನಾನಲ್ಲ  ಭ್ರಷ್ಟಚಾರದ ಕುರ್ಚಿಯ ಪಕ್ಕದಲ್ಲೂ ನಾನು ಕೂರುವುದಿಲ್ಲ   ಕೇಂದ್ರ ಸಚಿವ ಎ ನಾರಾಯಣಸ್ವಾಮಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿಸೆಂಬರ್. 22 : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಚಿತ್ರದುರ್ಗದಲ್ಲಿ ಗೆಲ್ಲುತ್ತದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಿಸಿ ದಾಖಲೆ ಮಾಡಲು ಬಿಜೆಪಿ ಕಾರ್ಯಕರ್ತ ಸಿದ್ಧನಾಗಿದ್ದಾನೆ ಎಂದು ಕೇಂದ್ರ ಸಚಿವ ಹಾಗೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ರಾಜಕಾರಣದಿಂದ ನಾನು ದೂರ ಉಳಿಯ ಬೇಕೆಂದಿದ್ದೇನೆ. ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಮುಂದುವರೆಯುವ ರಾಜಕಾರಣಿ ನಾನಲ್ಲ ಭ್ರಷ್ಟಚಾರದ ಕುರ್ಚಿಯ ಪಕ್ಕದಲ್ಲೂ ನಾನು ಕೂರುವುದಿಲ್ಲ. ಆದರೂ ಕುಳಿತಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿ ಯಾವುದೇ ಚುನಾವಣೆ ಪ್ರಶ್ನೆ ಇಲ್ಲ. ಭವಿಷ್ಯದ ಚುನಾವಣೆಗಳಲ್ಲೂ ಇದೇ ನನ್ನ ನಿರ್ಧಾರ ಎಂದರು.

ಮುಂದಿನ ಚುನಾವಣೆಗೆ ನೀವು ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವಾಗಲೇ ನಾನು ಟಿಕೇಟ್ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ನಿರ್ಧರಿಸುವುದು ನನ್ನ ಪಕ್ಷ. ನಾನು ಪಕ್ಷದ ಸೇನಾನಿ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುವವನು. ನಾನು ಯಾವುದೇ ನಿರೀಕ್ಷೆ ಹೊಂದಿದವನಲ್ಲ ಎಂದು ಹೇಳಿದರು.

ದೇಶ ಸಮೃದ್ಧವಾಗಿರಬೇಕು ಎನ್ನುವುದು ಒಂದೇ ನನ್ನ ಕನಸು. ನಾನೇ ಟಿಕೇಟ್ ತೆಗೆದುಕೊಳ್ಳಬೇಕು, ನಾನೇ ಎಂಪಿ ಆಗಬೇಕು, ನನ್ನ ಮಕ್ಕಳೇ ಆಗಬೇಕು ಎನ್ನುವುದು ನಾರಾಯಣಸ್ವಾಮಿ ಅಲ್ಲ, ಆ ಹುಚ್ಚುತನಕ್ಕೆ ಅಂಟಿಕೊಂಡಿಲ್ಲ. ಆ ಹುಚ್ಚುತನಕ್ಕೆ ಈ ಜಿಲ್ಲೆಗೆ ಬರಲಿಲ್ಲ. ನನ್ನ ಪಕ್ಷ ಇಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳಿತ್ತು. ಮಾಡಿದ್ದೆ. ಇಲ್ಲಿನ ಜನ ಪ್ರೀತಿಯಿಂದ ಮತ ಕೊಟ್ಟು ಗೆಲ್ಲಿಸಿದ್ದಾರೆ. ಪಕ್ಷ ಕೂಡಾ ಅಷ್ಟೇ ಪ್ರೀತಿಯಿಂದ ಮಂತ್ರಿ ಮಾಡಿದೆ ಎಂದರು.

ಅಷ್ಟು ದೂರದಿಂದ ಬಂದು ಇಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ ಎನ್ನುವ ಕೊರಗಿದೆ. ಒಬ್ಬ ಚುನಾಯಿತ ಸದಸ್ಯ ಮತದಾರರಿಗೆ ಸಿಗಬೇಕು. ಆದರೆ, ಬೀದಿ ಬೀದಿಗೆ ಹೋಗಿ ಸುಳ್ಳು ಹೇಳಿಕೊಂಡು ಬರಲು ಆಗುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯರಿಗೆ ಟಿಕೇಟ್ ಕೊಟ್ಟರೆ ನಾನೂ ಹೂವಿನ ಹಾರ ಹಾಕುತ್ತೇನೆ. ನಮ್ಮ ಪಕ್ಷ ಸರ್ವೇ ಮಾಡುತ್ತದೆ. ಆ ಸಮೀಕ್ಷೆಯಲ್ಲಿ ಸ್ಥಳೀಯರೇ ಗೆಲ್ಲುತ್ತಾರೆ ಎನ್ನುವ ವರದಿ ಬಂದರೆ ಖಂಡಿತ ಕಾರ್ಯಕರ್ತರಿಗೆ ಟಿಕೇಟ್ ಕೊಡುತ್ತದೆ. ಆಗ ನಾನು ಕೂಡಾ ಒಬ್ಬ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಇದೇ ನಮ್ಮ ಪಕ್ಷದ ಸಿದ್ಧಾಂತ ಎಂದು ಹೊರಗಿನವರು-ಸ್ಥಳೀಯರು ಎನ್ನುವ ವಿಷಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಂಸದರ ಅಮಾನತು, ಪ್ರಜಾಪ್ರಭುತ್ವದ ಕಗ್ಗೊಲೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿ ಆಯಾ ಸದನಗಳಲ್ಲಿ ತನ್ನದೇ ಸಂಪ್ರದಾಯಗಳು ಇರ್ತವೆ. ಆ ಸಂಪ್ರದಾಯಗಳನ್ನು ಯಾರು ಮುರಿಯಬಾರದು, ಆಯಾ ಸದನಗಳಲ್ಲಿ ಸ್ಪೀಕರ್ ಪ್ರಮುಖರಾಗಿರ್ತಾರೆಆಯಾ ಸದನಗಳಲ್ಲಿ ಪ್ರಾವಿತ್ಯ ಇರುತ್ತದೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಹೇಳಿಕೆ ನೀಡುವ ಮೂಲಕ ಸಂಸದರ ಅಮಾನುತು ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ವ್ಯಾಖ್ಯಾನ ಮಾಡುತ್ತಾರೆ. ಯಾವ ಪಕ್ಷ, ಎಷ್ಟು ಶಾಸಕರು, ಸಂಸದರು ಗೆದ್ದಿದ್ದಾರೆ ಎನ್ನುವ ಆಧಾರದಲ್ಲಿ ಸದನಗಳಲ್ಲಿ ಮಾತನಾಡು ಅವಕಾಶ, ಸಮಯ ಸಿಗಲಿದೆ. ಶಾಸಕರು, ಸಿಎಂ ಯಾವಾಗ ಮಾತನಾಡಬೇಕೆಂದು ಸಮಯ ಇರುತ್ತದೆ, ಸಂಸತ್ತಿನಲ್ಲಿಯೂ ಪ್ರಮುಖರಾಗಿ ಸ್ಪೀಕರ್ ಇರ್ತಾರೆ, ಸ್ಪೀಕರ್ ವ್ಯಾಪ್ತಿಯಲ್ಲಿ ಘಟನೆಯಾದಾಗ ಅವರೇ ಉತ್ತರಿಸಬೇಕಾಗುತ್ತೆ. ಕೆಲವು ಸಂಪ್ರದಾಯಗಳಂತೆ ಕಾನೂನು ಪರಿಪಾಲನೆ ವೇಳೆ ಸ್ಪೀಕರ್ ಉತ್ತರಿಸಬೇಕಾಗುತ್ತೆ. ಸ್ಪೀಕರ್ ಗೆ ಪರಮಾಧಿಕಾರ ಇರುತ್ತದೆ.60 ವರ್ಷದ ಆಳ್ವಿಕೆ ನಡೆಸಿದ ಕಾಂಗ್ರೆಸ್ ಶಿಷ್ಟಾಚಾರ ಪಾಲನೆ ಮಾಡಿದ್ದರೆ ಸಂಸದರ ಅಮಾನತು ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ಸ್ಪೀಕರ್ ಧಿಕ್ಕರಿಸಿ ಪ್ರಧಾನಮಂತ್ರಿಗಳು ಸೇರಿದಂತೆ ಯಾವುದೇ ಇಲಾಖೆಯ  ಸಚಿವರಿಗೆ ಉತ್ತರಿಸುವ ಹಕ್ಕು ಇರುವುದಿಲ್ಲ. ಒಂದು ವೇಳೆ ಉತ್ತರಿಸಿದರೆ ಶಿಷ್ಟಾಚಾರ ಉಲ್ಲಂಘನೆ ಆಗಲಿದೆ. ದೇಶದ ಭವಿಷ್ಯದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಿದೆ. ಶಿಷ್ಟಾಚಾರ ಪಾಲನೆ ಮಾಡದವರ ವಿರುದ್ದ ಸ್ಪೀಕರ್ ತಮ್ಮ ನಿರ್ಧಾರ ಕೈಗೊಂಡಿದ್ದಾರೆ. ಶಿಷ್ಟಾಚಾರ ಪಾಲನೆ ವೇಳೆ ಕಾಂಗ್ರೆಸ್ ಸಹಕರಿಸಿದ್ದರೆ ಶಿಸ್ತು ಕ್ರಮ ಆಗುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವ ಪ್ರಜಾಪ್ರಭುತ್ವ ಕಗ್ಗೊಲೆ ಎನ್ನುವ ಪ್ರಶ್ನೆಯೇ ಬರುತ್ತಿರಲಿಲ್ಲ. ಮುಖ್ಯಮಂತ್ರಿಗಳು ಐಷಾರಾಮಿ ಜೆಟ್‍ನಲ್ಲಿ ಪ್ರಯಾಣ ವಿಚಾರ ಕುರಿತು ಮಾತನಾಡಿದ ಕೇಂದ್ರ ಸಚಿವರು, ನಾನೇನು ಜೆಡ್ ಸೆಕ್ಯೂರಿಟಿ ಕೇಳಿಲ್ಲ, ಈ ದೇಶದ ಪ್ರಧಾನಿ ರಕ್ಷಣೆ 148 ಕೋಟಿ ಜನ ಜವಾಬ್ದಾರಿ. ತಾತ್ಸಾರ ಮಾಡಿ ಈಗಾಗಲೇ ಇಬ್ಬರು ಪ್ರಧಾನಿಗಳನ್ನ ನಾವು ಕಳೆದುಕೊಂಡಿದ್ದೀವೆ. ಉಪರಾಷ್ಟ್ರಪತಿ, ಪ್ರಧಾನಿ ಬಗ್ಗೆ ಅನುಭವಿ ರಾಜಕಾರಣಿ ಬಾಯಲ್ಲಿ ತಾತ್ಸಾರ, ತಿರಸ್ಕಾರದ ಮಾತು ಬರಬಾರದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

Tags :
Advertisement