Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

78 ವರ್ಷದ ನನಗೆ 28 ಕ್ಷೇತ್ರ ಗೆಲ್ಲಬೇಕೆಂಬ ಕನಸು : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

04:41 PM Apr 13, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 13 : ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಹೆಸರು ಹೇಳಿ ನೋಡೋಣಾ. ಪ್ರಧಾನಿ ನರೇಂದ್ರ ಮೋದಿ ಮುಂದೆ ಯಾರೂ ಕೂಡಾ ಇಲ್ಲ. ದೇಶದ ಪ್ರಧಾನಿಯಾಗಿ ಮೂರನೇ ಬಾರಿ ಆಯ್ಕೆ ಸೂರ್ಯ ಚಂದ್ರನಷ್ಠೆ ಸತ್ಯ ಎಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

Advertisement

ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಭೆಯ ಜನಸ್ತೋಮ ನೋಡಿದ್ರೆ ಕಾಂಗ್ರೆಸ್ ನವರಿಗೆ ನಡುಕ ಉಂಟಾಗಿದೆ. ಮಾಜಿ ಪಿಎಂ ದೇವೆಗೌಡರು, ಪ್ರಧಾನಿ ಮೋದಿ ಒಟ್ಟಿಗೆ ಹೋಗುತ್ತಿದ್ದಾರೆ. ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ 10 ಸಾವಿರ ಕೊಡುತ್ತಿದ್ದೆ. ಆದರೆ ರಾಜ್ಯ ನಾಲ್ಕು ಸಾವಿರ ಹಣ ನಿಲ್ಲಿಸಿದ್ದಾರೆ, ಇದು ಸರ್ಕಾರಕ್ಕೆ ಶೋಭೆ ತರಲ್ಲ.ಗೋವಿಂದ ಕಾರಜೋಳ ಪರ ಶ್ರಮವಹಿಸಿ ಕೆಲಸ ಮಾಡಬೇಕಿದೆ. ಹಣ, ಹೆಂಡ, ಜಾತಿ, ತೋಳ್ಬಲದ ಕಾಲ ಮರೆಯಾಗಿದೆ. ಜನ ಇಂದು ಜಾಗೃತರಾಗಿ ಮತ ಹಾಕುತ್ತಿದ್ದಾರೆ. ಇದನ್ನ ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ಇದೇ ರೀತಿಯ ವಾತಾವರಣ ಇದೆ. 78 ವರ್ಷ ನನಗೆ 28 ಕ್ಷೇತ್ರ ಗೆಲ್ಲಬೇಕು ಎಂಬ ಕನಸು. ಪ್ರಧಾನಿ ನೋಡಲು 28 ಜನರ ಜೊತೆ ನಾನು ಹೋಗಬೇಕು. ಕಾರಜೋಳ ಅನುಭವಿ ರಾಜಕಾರಣಿ, ಅನೇಕ ಇಲಾಖೆ ಸಚಿವರಾಗಿದ್ದಾರೆ. ಕಾರಜೋಳ ಪರ ಎಲ್ಲರೂ ಆಶಿರ್ವಾದ ಮಾಡಬೇಕಿದೆ ಎಂದರು.

ರಾಂಪುರ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಚಿತ್ರದುರ್ಗ ಕ್ಷೇತ್ರಕ್ಕೆ ಸುಸಂಸ್ಕೃತ ಅಭ್ಯರ್ಥಿಯನ್ನ ನೀಡಿದ್ದಾರೆ. ದೇಶ ರಕ್ಷಣೆ ಮಾಡುವ ಮೋದಿ ಅವರಿಗೆ ಮತ ಹಾಕಬೇಕಿದೆ. ಅಭಿವೃದ್ಧಿ ಪರ ಚಿಂತನೆ ಮಾಡುವ ನಾಯಕ ಕಾರಜೋಳ. ಕ್ಷೇತ್ರದ ಜನರ ಬವಣೆ ಅರಿತು ಶ್ರಮಿಸುವ ಕೆಲಸ ಮಾಡುತ್ತಾರೆ. ಪ್ರಧಾನಿ ಮೋದಿ ವ್ಯಾಕ್ಸಿನ್ ದೇಶದ ಪ್ರತಿ ಪ್ರಜೆಗೆ ನೀಡಿದ್ದಾರೆ. ಲಸಿಕೆ ಇಲ್ಲದೆ ಹೋಗಿದ್ರೆ ನಾವು ಬದುಕುತ್ತಾ ಇದ್ವೋ ಇಲ್ವೋ ಗೊತ್ತಿಲ್ಲ. ಒಂದು ಮತ ನೀಡಿ ಪ್ರಧಾನಿ ಮೋದಿ ಋಣ ತಿರಿಸಬೇಕಿದೆ ಎಂದರು.

ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಮಾತನಾಡಿ, ದೇಶದಲ್ಲಿ ಇಂಡಿಯಾ ಒಕ್ಕೂಟ ನೂರು ಸ್ಥಾನ ದಾಟಲ್ಲ. ಇಂಡಿಯಾ ಒಕ್ಕೂಟಕ್ಕೆ ಮತ ಹಾಕುವುದು ಡಸ್ಟ್ ಬಿನ್‍ಗೆ ಹಾಕಿದಂತೆ. ಕುಟುಂಬ ತ್ಯಾಗ ಮಾಡಿ ದೇಶ ಕಾಯುವ ಯೋಧರ ಜತೆ ಮೋದಿ ದೀಪಾವಳಿ ಆಚರಿಸುತ್ತಾರೆ. ಮೋದಿ ಬಗ್ಗೆ ಕೀಳಾಗಿ ಮಾತಾಡಿದ ಸಚಿವ ತಂಗಡಗಿಗೆ ಸಿಎಂ ಏನೂ ಹೇಳಲಿಲ್ಲ. ನಾವು ತಂಗಡಗಿ ಕಪಾಳಕ್ಕೆ ಬಾರಿಸುವುದು ಒಂದು ನಿಮಷ ಅಷ್ಟೇ. ನಾವು ಹಾಗೇ ತಂಗಡಗಿ ಕಪಾಳಕ್ಕೆ ಬಾರಿಸುವುದು ಬೇಡ. ಬಿಜೆಪಿಗೆ ಮತ ಹಾಕುವ ಮೂಲಕ ತಂಗಡಗಿ ಕಪಾಳಕ್ಕೆ ಬಾರಿಸೋಣ ಎಂದ ಅವರು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಜನಾರ್ಧನರೆಡ್ಡಿ ಮತಯಾಚನೆ ಮಾಡಿದರು.

ರಾಂಪುರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ  ನಮಗೆ ದೇಶ ಮುಖ್ಯ, ರಕ್ಷಣೆ ಮಾಡುವವರು ನಮ್ಗೆ ಬೇಕು ಚೀನಾ ಮತ್ತು ಪಾಕಿಸ್ತಾನ್ ಹೊಂಚು ಹಾಕುತ್ತಿವೆ, ಪ್ರಧಾನಿ ಮೋದಿ ನಮ್ಗೆ ಬೇಕು.  ದುಡ್ಡಿನಿಂದ ಗ್ಯಾರಂಟಿ ಹಣ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅಳಿವಿನ ಅಂಚಿನಲ್ಲಿದೆ, ನಾಚಿಕೆ ಆಗ್ಬೇಕು. ನೀರಾವರಿ ಹಣ ಕೂಡಾ ಗ್ಯಾರಂಟಿ ಗೆ ಬಳಸಿದ್ದಾರೆ. ನಾಲ್ಕೈದು ಬಾರಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಏನು ಮಾಡಿದ್ದಾರೆ. ಕೂಡ್ಲಿಗಿಯಲ್ಲಿ ಸಾಕಷ್ಟು ಬಿಜೆಪಿ ಅನುದಾನ ಕೊಟ್ಟ ಬಳಿಕ ಅಭಿವೃದ್ಧಿ ಮಾಡಿದ್ರು. ನಿಮ್ಮ ಮನೆಯ ಮಗನಾಗಿ ನಾನು ಕೆಲಸ ಮಾಡುತ್ತಿದ್ದೆ ಕೈ ಬಿಟ್ಟಿದ್ದೇ ನೀವು. ಶಾಸಕ ಎನ್.ವೈ ಜಿ ಮನೆಯಲ್ಲಿ ಒಂದೇ ಒಂದು ಖುರ್ಚಿ ಅಂತೆ. ಉಳಿದವರು ನಿಲ್ಲಬೇಕಂತೆ ನಾಚಿಕೆ ಆಗ್ಬೇಕಲ್ವ? ಬನ್ನಿ ನಮ್ಮ ಮನೆಗೆ ಯಾರೇ ಬಂದ್ರು ಸ್ವಾಗತ ಮಾಡುತ್ತೇವೆ. ಅವತ್ತೂ ಪ್ರಧಾನಿ ಮೋದಿ ವ್ಯಾಕ್ಸಿನ್ ಕೊಟ್ಟು ಜೀವ ಉಳಿಸದೇ ಹೋಗಿದ್ರೆ. ಪುಕ್ಸಟ್ಟೆ ಬಸ್ಸು ಎಲ್ಲಿ, 2 ದುಡ್ಡು ಎಲ್ಲಿ ಬರ್ತಿತ್ತು. ಪ್ರಾಣ ಉಳಿಸಿದ್ದ ಪ್ರಧಾನಿ ಮೋದಿ, ಅವರಿಗೆ ನಾವು ಮತ ಹಾಕಬೇಕು. ಜಲ ಜೀವನ್ ಮಿಷನ್ ನೀರು ಹಳ್ಳಿ ಹಳ್ಳಿಗೆ ನೀರು ನೀಡಿದ್ದಾರೆ. ದುಡ್ಡು ಕೊಟ್ಟಿದ್ದೇನೆ ಮತ ಹಾಕಿದ್ದಾರೆ ಎಂದು ಶಾಸಕರು ಹೇಳ್ತಿದ್ದಾರೆ. ಬೂತ್ ಮಟ್ಟದಲ್ಲಿ ಹೆಚ್ಚಿನ ಮತ ಕೊಟ್ಟವರೇ ಲೀಡರ್.ಕಾರಜೋಳ ಅವರನ್ನ ಗೆಲ್ಲಿಸುವುದು ನಮ್ಮ ಗುರಿ ಎಂದರು.

 

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ.  ಇದು ದೇಶಕ್ಕಾಗಿ ಐತಿಹಾಸಿಕ ಚುನಾವಣೆ. ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಆಗಬೇಕು ಎಂದು ನಡೆಯುವ ಚುನಾವಣೆ. 140 ಕೋಟಿ ಜನ ಹಂಬಲಿಸುತ್ತಿದ್ದಾರೆ. 23 ವರ್ಷಗಳಿಂದ ಭ್ರಷ್ಟಾಚಾರ ಆರೋಪ ಇಲ್ಲದ ರಾಜಕಾರಣಿ ಪ್ರಧಾನಿ ಮೋದಿ. ಕಳೆದ 10 ವರ್ಷದಿಂದ ದೇಶದ ಅಭಿವೃದ್ಧಿ ಮಾಡಿದ್ದಾರೆ. ದೇಶದ ಕೀರ್ತಿ ಗೌರವ ಪ್ರಪಂಚದಲ್ಲಿ ಹೆಚ್ಚಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಯಾವುದೇ ಒಬ್ಬ ವ್ಯಕ್ತಿ ಕೂಡಾ ಇಲ್ಲ ರಸ್ತೆಯ ಮೇಲೆ ಹೋಗುವ ಹುಚ್ಚ ಕೂಡಾ ರಾಹುಲ್ ಪ್ರಧಾನಿ ಆಗಲಿ ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ವ್ಯಕ್ತಿ ದೇಶ ಮುನ್ನಡೆಸುವ ವ್ಯಕ್ತಿ ಇಲ್ಲ. ದೇಶದಲ್ಲಿ ನೂರಾರು ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದುರ್ಗ ಮಧ್ಯ ಕರ್ನಾಟಕ ಹಿಂದುಳಿದ ಜಿಲ್ಲೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ. ನನಗೆ ಮತ ಹಾಕಿದ್ರೆ, ಮೋದಿ ಲೈನ್ ನಲ್ಲಿ ನಾನು ಇರುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ರೆ ವಿ.ಪಕ್ಷದ ಗುಂಪಿನಲ್ಲಿ ಇರ್ತಾರೆ. ಬಸವಣ್ಣನ ನೆಲದಲ್ಲಿ ನಾನು ಹುಟ್ಟಿ ಬೆಳೆದವನು. ಬಸವ ತತ್ವ ಮೈಗೂಡಿಸಿಕೊಂಡ ವ್ಯಕ್ತಿ ನಾನು. ಶಿವ ಶರಣ ಮಾದಾರ ಚೆನ್ನಯ್ಯ ಅವರ ವಂಶಸ್ಥ ನಾನು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿ.ಪಂ. ಮಾಜಿ ಸದಸ್ಯ ಜಯಪಾಲಯ್ಯ, ಜಿಲ್ಲಾಧ್ಯಕ್ಷ ಎ.ಮುರಳಿ, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ವೆಂಕಟೇಶ್ ಯಾದವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚಳ್ಳಕೆರೆಯಲ್ಲಿ ಮಾಜಿ ಸಚಿವರಾದ ತಿಪ್ಪೇಸ್ವಾಮಿಯವರ ಪುತ್ರ ಕುಮಾರಸ್ವಾಮಿ ಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

Advertisement
Tags :
28 ಕ್ಷೇತ್ರ ಗೆಲ್ಲಬೇಕು78 years old win 28 constituenciesbengaluruBS YeddyurappachitradurgaFormer Chief Minister Yeddyurappasuddionesuddione newsಕನಸುಚಿತ್ರದುರ್ಗಬೆಂಗಳೂರುಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article