Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

03:35 PM May 03, 2024 IST | suddionenews
Advertisement

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

Advertisement

ಇಷ್ಟೊತ್ತಿಗಾಗಲೇ ಮಳೆಯ ಜೋರು ದರ್ಶನವಾಗಬೇಕಾಗಿತ್ತು. ಆದರೆ ಸರಿಯಾಗಿ ಮಳೆ ಬರುತ್ತಿಲ್ಲ. ಇನ್ನೆರಡು ದಿನದಲ್ಲಿ ಮಳೆ ಬರುತ್ತೆ ಎಂದು ಹವಮಾನ ಇಲಾಖೆ ಸೂಚನೆ ಕೊಟ್ಟಿದ್ದರು. ಆದರೆ ಅದಕ್ಕೂ ಮುನ್ನವೇ ಮಳೆ ಬಂದಿದೆ. ನಿನ್ನೆ ರಾತ್ರಿ ಬೆಂಗಳೂರಿನ ಹಲವೆಡೆ ಕೊಂಚ ಮಳೆರಾಯ ತಂಪೆರೆದು ಹೋಗಿದ್ದಾನೆ. ಹಾಗೇ ಮಳೆ ಮುಂದುವರೆದರೆ ಈ ಧಗೆ ಕಡಿಮೆಯಾಗುವುದು ಗ್ಯಾರಂಟಿ. ಇಲ್ಲವಾದರೆ ಇನ್ನಷ್ಟು ಜಾಸ್ತಿಯಾಗುತ್ತದೆ.

ಹವಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ನೀಡಿರುವ ಮಾಹಿತಿಯ ಪ್ರಕಾರ ಕರಾವಳು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳಲಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹಗುರವಾದಂತ ಮಳೆಯಾಗಲಿದೆ. ಆದರೆ ಬೆಂಗಳೂರಿನಲ್ಲಿ ಗುಡಿಗು ಮಿಂಚಿನ ಜೊತೆಗೆ ಅಲ್ಲಲ್ಲಿ ಚದುರಿದ ಮಳೆಯಾಗಲಿದೆ. ಮುಂದಿನ ನಾಲ್ಕು ದಿನಗಳ ಮಳೆಯಾಗಲಿದೆ.

Advertisement

ಚಿತ್ರದುರ್ಗ, ದಾವಣಗೆರೆ, ಕಿಪ್ಪಳ, ಬಾಗಲಕೋಟೆ, ಬಿಜಾಪುರ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಬಿಸಿಗಾಳಿ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಗಾಳಿಯಿಂದಾಗಿ ಹಲವು ಆರೋಗ್ಯ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ಜಿಲ್ಲೆಯ ಜನ ಎಚ್ಚರದಿಂದ ಇರಬೇಕಾಗುತ್ತದೆ.

Advertisement
Tags :
chitradurgaforecastHot weathersuddionesuddione newsಚಿತ್ರದುರ್ಗಬಿಸಿಗಾಳಿ ಮುನ್ಸೂಚನೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article