For the best experience, open
https://m.suddione.com
on your mobile browser.
Advertisement

ಹೊಸದುರ್ಗ ಪೊಲೀಸರಿಂದ ಮೂವರು ಅಂತರ್ ಜಿಲ್ಲಾ ಜಾನುವಾರು ಕಳ್ಳರ ಬಂಧನ : ನಗದು ಮತ್ತು ವಾಹನಗಳ ವಶ

04:33 PM Jul 04, 2024 IST | suddionenews
ಹೊಸದುರ್ಗ ಪೊಲೀಸರಿಂದ ಮೂವರು ಅಂತರ್ ಜಿಲ್ಲಾ ಜಾನುವಾರು ಕಳ್ಳರ ಬಂಧನ   ನಗದು ಮತ್ತು ವಾಹನಗಳ ವಶ
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 04 : ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿ ಬೇರೆಡೆ ಮಾರಾಟ ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ತಿಪ್ಪಲಾಪುರ ಗ್ರಾಮದ ತೌಫೀಕ್, ನವಾಜ್ ಪಾಷ ಮತ್ತು ದಾದಪೀರ್ ಎಂದು ಗುರುತಿಸಲಾಗಿದ್ದು ಅವರಿಂದ ರೂ. 1,55,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಮಹೀಂದ್ರಾ ಸ್ಕಾರ್ಪಿಯೋ, ಅಶೋಕ ಲೈಲಾಂಡ್,  ಟಾಟಾ ಅರಿಯಾ, ಮಹೀಂದ್ರ ಝೈಲೋ, ಹಾಗೂ ಮಾರುತಿ ರಿಟ್ಜ್ ಒಟ್ಟು 05 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮದ ದಾದವಲಿ ಎಂಬುವವರು ಜೂನ್ 17 ರಂದು ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿದ್ದ ಸುಮಾರು 25,000 ರೂಪಾಯಿ ಬೆಲೆ ಬಾಳುವ ಒಂದು ಹಸುವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಹೊಸದುರ್ಗ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿತ್ತು.

Advertisement

ಈ ಪ್ರಕರಣದಲ್ಲಿ ಕಳುವಾದ ಹಸು ಮತ್ತು ಆರೋಪಿತರನ್ನು ಪತ್ತೆ ಮಾಡಲು ಮಾನ್ಯ
ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹೊಸದುರ್ಗ ಪಿ.ಐ ತಿಮ್ಮಣ್ಣ.ಎನ್ ಮತ್ತವರ ತಂಡವು ಖಚಿತವಾದ ಮಾಹಿತಿ ಮೇರೆಗೆ ಬಂಧಿತ ಮೂವರನ್ನು ತನಿಖೆಗೊಳಪಡಿಸಿದಾಗ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಇವರ ಮೇಲೆ ಭದ್ರಾವತಿ, ದಾವಣಗೆರೆ ಸೇರಿದಂತೆ ವಿವಿಧೆಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.

ವಿಚಾರಣೆ ವೇಳೆ ಆರೋಪಿತರು ಹಿಂದಿನಿಂದಲೂ ದನದ ವ್ಯಾಪಾರ ಮಾಡುತ್ತಿದ್ದು, ದನಗಳ
ವ್ಯಾಪಾರ ಮಾಡುವ ಸಮಯದಲ್ಲಿ ಹಳ್ಳಿಗಳ ಮೇಲೆ ತಮ್ಮ ಮಾರುತಿ ರಿಟ್ಜ್ ಕಾರಿನಲ್ಲಿ ತಿರುಗಾಡಿ ನಂತರ
ರಾತ್ರಿ ಸಮಯದಲ್ಲಿ ಮೂರು ಜನರು ಸೇರಿಕೊಂಡು ಕಳ್ಳತನದ ಬಗ್ಗೆ ಸಂಚು ರೂಪಿಸಿಕೊಂಡು ಒಂದೇ
ವಾಹನದಲ್ಲಿ ಓಡಾಡಿದರೆ ಪೊಲೀಸರಿಗೆ ಅನುಮಾನ ಬರುತ್ತದೆಂದು ಕಳ್ಳತನಕ್ಕೆ ಬೇರೆ ಬೇರೆ ಕಂಪನಿಗಳ
ಮಹೀಂದ್ರಾ ಸ್ಕಾರ್ಪಿಯೋ, ಅಶೋಕ ಲೈಲಾಂಡ್, ಟಾಟಾ ಅರಿಯಾ ಮತ್ತು ಮಹೀಂದ್ರ ಝೈಲೋ
ವಾಹನಗಳಲ್ಲಿ ದನಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತಿರುವುದಾಗಿ
ತಿಳಿಸಿರುತ್ತಾರೆ.

ಒಟ್ಟು 13 ಹಸುಗಳನ್ನು ಕಳ್ಳತನ ಮಾಡಿ
ಹೊಳೆಹೊನ್ನೂರು, ಭದ್ರಾವತಿ ಸಂತೆಗಳಲ್ಲಿ 3,15,000 ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ
ತಿಳಿಸಿರುತ್ತಾರೆ. ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣವನ್ನು 3 ಜನರು ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿರುತ್ತಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ
ಭಾಗವಹಿಸಿದ ಹೊಸದುರ್ಗ ಪೊಲೀಸ್ ಠಾಣೆಯ ಪಿ.ಐ. ತಿಮ್ಮಣ್ಣ.ಎನ್, ಪಿ.ಎಸ್.ಐ. ಮಹೇಶ್ ಕುಮಾರ್ ಮತ್ತು ಭೀಮನಗೌಡ ಪಾಟೀಲ್
ಹಾಗೂ ಸಿಬ್ಬಂದಿ ಜಯರಾಜ, ಕುಮಾರ್, ರಾಜಣ್ಣ, ತಿಪ್ಪೇಸ್ವಾಮಿ, ಗಂಗಾಧರ ರವರುಗಳ
ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು  ಶ್ಲಾಘಿಸಿರುತ್ತಾರೆ.

Advertisement
Tags :
Advertisement