For the best experience, open
https://m.suddione.com
on your mobile browser.
Advertisement

ಹೊಸದುರ್ಗ | ಕ್ಲೋರಿನ್ ಗ್ಯಾಸ್ ಸೋರಿಕೆ : 100 ಕ್ಕೂ ಹೆಚ್ಚು ಜನ ಅಸ್ವಸ್ಥ..!

08:59 PM Sep 09, 2024 IST | suddionenews
ಹೊಸದುರ್ಗ   ಕ್ಲೋರಿನ್ ಗ್ಯಾಸ್ ಸೋರಿಕೆ   100 ಕ್ಕೂ ಹೆಚ್ಚು ಜನ ಅಸ್ವಸ್ಥ
Advertisement

ಸುದ್ದಿಒನ್, ಹೊಸದುರ್ಗ, ಸೆಪ್ಟೆಂಬರ್. 09 : ನೀರು ಶುದ್ಧೀಕರಣ ಘಟಕಕ್ಕೆ ಬಳಸುವ ಕ್ಲೋರಿನ್ ಗ್ಯಾಸ್ ಸೋರಿಕೆಯಿಂದಾಗಿ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ನಗರದ ಎಪಿಎಂಸಿ ಬಳಿ ಈ ದುರ್ಘಟನೆ ನಡೆದಿದೆ. ಉಸಿರಾಟದಿಂದ ಬಳಲುತ್ತಿದ್ದವರನ್ನು ಹೊಸದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಅನಿಲ ಸೋರಿಕೆಯಿಂದ ಈ ಘಟನೆ ನಡೆದಿದೆ. ಸಂಜೆ 6 ಗಂಟೆ ಸುಮಾರಿಗೆ ಈ ರೀತಿಯ ಘಟನೆ ನಡೆದಿದೆ.  ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಹೊಗೆ ಆವರಿಸಿಕೊಂಡಿದೆ. ಇದರಿಂದಾಗಿ ಸುತ್ತಮುತ್ತಲ ಬಡಾವಣೆಯ ಜನರು  ಅಸ್ವಸ್ಥಗೊಂಡಿದ್ದಾರೆ. ಮನೆಯಲ್ಲಿಯೇ ಇದ್ದ ಜನರು ತಕ್ಷಣ ಹೊರಗಡೆ ಬಂದಿದ್ದಾರೆ.

Advertisement

Advertisement

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಹೊಗೆ ನಿಯಂತ್ರಿಸುವುದಕ್ಕೆ ಹರಸಾಹಸ ಪಟ್ಟರು. ಸ್ವಲ್ಪ ಕಾಲ ಅವರೊಗೂ ಈ ಕ್ಲೋರಿನ್ ಅನಿಲದಿಂದ ಉಸಿರಾಟದ ಸಮಸ್ಯೆ ಎದುರಾಯಿತು. ಆದರೂ ಸೋರಿಕೆಯಾಗುತ್ತಿದ್ದ ಸಿಲಿಂಡರ್ ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

Advertisement

ಘಟನಾ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ತಿರುಪತಿ ಪಾಟೀಲ್, ಪೊಲೀಸ್ ಪಿ ಐ ತಿಮಣ್ಣ ಪರಿಸ್ಥಿತಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಂಡರು.

Tags :
Advertisement