ಹೊಸದುರ್ಗ | ಖಜಾನೆ ಎಫ್‌ಡಿಎ ಮತ್ತು ಅಕೌಂಟೆಂಟ್ ಲೋಕಾಯುಕ್ತ ಬಲೆಗೆ
07:12 PM Dec 18, 2024 IST | suddionenews
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ಲೋಕಾಯುಕ್ತ ಅಧಿಕಾರಿಗಳು ಬುಧವಾರ ಹೊಸದುರ್ಗ ಖಜಾನೆ ಇಲಾಖೆ ಮೇಲೆ ದಾಳಿ ನಡೆಸಿ, ಇಬ್ಬರು ಲಂಚ ಸ್ವೀಕರಿಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಹೊಸದುರ್ಗ ಪಟ್ಟಣದ ಖಜಾನೆ ಇಲಾಖೆ ಎಫ್‌ಡಿಎ ವರಲಕ್ಷ್ಮೀ, ಅಕೌಂಟೆಂಟ್ ಗೋವಿಂದರಾಜು ಲೋಕಾಯುಕ್ತರ ಬಲೆಗೆ ಬಿದ್ದವರು.
ನಿವೃತ್ತಿ ವೇತನ ಸೆಟ್ಲಮೆಂಟ್ ವಿಚಾರದಲ್ಲಿ ಲಂಚಕ್ಕೆ ನಿವೃತ್ತ ಶಿಕ್ಷಕಿ ಶಾರದಮ್ಮ ಬಳಿ ಬೇಡಿಕೆಯಿಟ್ಟಿದ್ದು, ಬುಧವಾರ ತಲಾ 2 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವ ವಹಿಸಿದ್ದರು.
Advertisement