For the best experience, open
https://m.suddione.com
on your mobile browser.
Advertisement

ಹೊಸದುರ್ಗ | ದೇವಾಲಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ : ವಿಡಿಯೋ ವೈರಲ್

08:37 AM Aug 27, 2024 IST | suddionenews
ಹೊಸದುರ್ಗ   ದೇವಾಲಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ   ವಿಡಿಯೋ ವೈರಲ್
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 27 : ಪೂಜಾರಿಕೆ ವಿಚಾರವಾಗಿ ಭಾನುವಾರ ದೇವಾಲಯವೊಂದರಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

Advertisement
Advertisement

ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿಯ ಮುದ್ದುಲಿಂಗೇಶ್ವರ ದೇಗುಲದಲ್ಲಿ ಪೂಜಾರಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

Advertisement

ಭಾನುವಾರ ರಾತ್ರಿ ಸೋಮಶೇಖರ್ ಎಂಬುವವರ ಹಲ್ಲೆ ನಡೆದಿರುವ ದೃಶ್ಯ ವೈರಲ್ ಆಗಿದೆ. ಹಲ್ಲೆ ಮಾಡಿದ ಮುದ್ದಣ್ಣ ಮತ್ತು ಇತರರ ವಿರುದ್ಧ ಸೋಮಶೇಖರ್ ದೂರು ದಾಖಲಿಸಿದ್ದಾರೆ.
ಅದೇ ರೀತಿ ಸೋಮಶೇಖರ್ ಮತ್ತು ಇತರರ ವಿರುದ್ಧವೂ ಹೊಸದುರ್ಗ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags :
Advertisement