Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ತೋಟಗಾರಿಕೆ  ನರ್ಸರಿ ಸರ್ಟಿಫಿಕೇಟ್ ಕೋರ್ಸ್: ಅರ್ಜಿ ಆಹ್ವಾನ

05:10 PM Sep 24, 2024 IST | suddionenews
Advertisement

ಚಿತ್ರದುರ್ಗ. ಸೆ.24 : ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ನಿರ್ವಹಣೆ ಕುರಿತು ಇದೇ ಸೆಪ್ಟೆಂಬರ್ 30 ರಿಂದ ಡಿಸೆಂಬರ್ 30 ರವರೆಗೆ  ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಅಹ್ವಾನಿಸಲಾಗಿದೆ.

Advertisement

ತರಬೇತಿಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯೋತ್ಪಾದನೆ ವಿಧಗಳಾದ ಕಸಿ, ಗೂಟಿ, ಕಾಂಡದ ತುಂಡುಗಳಿಂದ ಸಸ್ಯೋತ್ಪಾದನೆ ಮಾಡುವುದು ಹಾಗೂ ಇನ್ನಿತರೆ ಸಸ್ಯೋತ್ಪಾದನೆ ವಿಧಾನಗಳು ಮತ್ತು ಸಸ್ಯಾಗಾರದ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು.

ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ತರಬೇತಿ ಶುಲ್ಕ ಒಟ್ಟು ರೂ.9,000/-ಗಳನ್ನು ಪಾವತಿಸಿ ಸೆ. 29 ರೊಳಗೆ ದೂರವಾಣಿ ಮುಖಾಂತರ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸ ಬಹುದಾಗಿದೆ. ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.

Advertisement

ಹೆಚ್ಚಿನ ಮಾಹಿತಿಗಾಗಿ ಡಾ. ಶ್ರೀಧರ ಆರ್ (ಸಹಾಯಕ ಪ್ರಾದ್ಯಾಪಕರು), ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು, ಮೊಬೈಲ್ ಸಂಖ್ಯೆ 9449983747, ಡಾ. ಮಹಾಂತೇಶ ಪಿ.ಎಸ್ (ತೋಟಗಾರಿಕೆ ವಿಜ್ಞಾನಿ), ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು ಫಾರಂ, ಹಿರಿಯೂರು. ಮೊಬೈಲ್ ಸಂಖ್ಯೆ 8088948308 ಹಾಗೂ ಡಾ. ಲತಾ ಎಸ್ (ಸಹಾಯಕ ಪ್ರಾದ್ಯಾಪಕರು), ತೋಟಗಾರಿಕೆ ಮಹಾವಿದ್ಯಾಲಯ, ಮೊಬೈಲ್ ಸಂಖ್ಯೆ 8095836162 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement
Tags :
Application InvitationbengaluruchitradurgaHorticultureNursery Certificate Coursesuddionesuddione newsಅರ್ಜಿ ಆಹ್ವಾನಚಿತ್ರದುರ್ಗತೋಟಗಾರಿಕೆನರ್ಸರಿ ಸರ್ಟಿಫಿಕೇಟ್ ಕೋರ್ಸ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article