For the best experience, open
https://m.suddione.com
on your mobile browser.
Advertisement

ಸವಾಲುಗಳನ್ನು ಎದುರಿಸಿ ಯಶಸ್ವಿಯಾದವರನ್ನು ಸನ್ಮಾನಿಸಿದರೆ ಇತರರಿಗೆ ಪ್ರೇರಣೆ : ಡಾ.ನವೀನ್ ಬಿ.ಸಜ್ಜನ್

07:32 PM Jul 15, 2024 IST | suddionenews
ಸವಾಲುಗಳನ್ನು ಎದುರಿಸಿ ಯಶಸ್ವಿಯಾದವರನ್ನು ಸನ್ಮಾನಿಸಿದರೆ ಇತರರಿಗೆ ಪ್ರೇರಣೆ   ಡಾ ನವೀನ್ ಬಿ ಸಜ್ಜನ್
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 15 : ಕೌಟುಂಬಿಕ, ಸಾಮಾಜಿಕ, ಭಾವನಾತ್ಮಕವಾಗಿ ಯಾರು ಬಲಿಷ್ಠರಾಗಿರುತ್ತಾರೋ ಅಂತಹವರು ಮಾತ್ರ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಬಲ್ಲರು ಎಂದು ಡಾ.ನವೀನ್ ಬಿ.ಸಜ್ಜನ್ ಹೇಳಿದರು.

ರೋಟರಿ ಕ್ಲಬ್ ಮತ್ತು ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವೈದ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

Advertisement

ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಆಸೆ ಇರುತ್ತದೆ. ಆತ್ಮವಿಶ್ವಾಸದೊಂದಿಗೆ ಎಂತಹ ಸನ್ನಿವೇಶ, ಸವಾಲುಗಳನ್ನು ಎದುರಿಸುವಷ್ಟು ಸಾಮರ್ಥ್ಯ ವಿಶ್ವಾಸವುಳ್ಳವರು ಯಶಸ್ವಿಯಾಗುತ್ತಾರೆ. ಅಂತಹವರನ್ನು ಗುರುತಿಸಿ ಸನ್ಮಾನಿಸಿದರೆ ಇತರೆಯವರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ.ಮಹೇಶ್ ನಮ್ಮ ಸುತ್ತಮುತ್ತಲು ಅನೇಕ ಸಾಧಕರುಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸಮಾಜದಲ್ಲಿ ಸಾಧನೆ ಮಾಡಿರುವ ನಿವೃತ್ತರು ಯೋಧರು, ವೈದ್ಯರು, ಶುಶ್ರೂಷಕರು, ವೃತ್ತಿ ನಿರತರು, ಕವಿಗಳನ್ನು ಗುರುತಿಸಿ ಗೌರವಿಸಿ ಸಮಾಜಕ್ಕೆ ಸಾಧಕರ ಯಶೋಗಾಥೆಯನ್ನು ಪರಿಚಯಿಸುತ್ತಿರುವ ಪ್ರಥಮ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವೆಂದರು.

ಡಾ.ಬಿ.ಟಿ.ಲೋಲಾಕ್ಷಮ್ಮ ಮಾತನಾಡುತ್ತ ಯಶಸ್ಸು ಸಾಧಕರ ಸ್ವತ್ತೆ ಹೊರತು  ಸೋಮಾರಿಯ ಸ್ವತ್ತಲ್ಲ. ರೋಗಿಗಳ ಪ್ರಾಣ ಉಳಿಸುವಲ್ಲಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುವ ವೈದ್ಯರು, ನರ್ಸ್‍ಗಳ ಪಾತ್ರ ಸಮಾಜದಲ್ಲಿ ಅಮೂಲ್ಯವಾದುದು. ಅಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಸುತ್ತ್ಯಾರ್ಹ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷರಾದ ರೊ.ಮಂಜುನಾಥ್ ಭಾಗವತ್ ಮಾತನಾಡಿ ರೋಟರಿ ಸಂಸ್ಥೆ ಮೊದಲಿನಿಂದಲೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಪ್ರತಿಭೆಗಳನ್ನು ಹೆಕ್ಕಿ ಹೊರತೆಗೆಯುವಲ್ಲಿ ಮುಂಚೂಣಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಮಹಾನ್ ಸಾಧಕರನ್ನು ಸಮಾಜಕ್ಕೆ ಪರಿಚಯಿಸುತ್ತಿದೆ ಎಂದು ಹೇಳಿದರು.

ನಿವೃತ್ತ ಸೈನಿಕ ಜಯಣ್ಣ ಮಾತನಾಡುತ್ತ ನಿಸ್ವಾರ್ಥವಾಗಿ ಸಮಾಜಕ್ಕೆ ದುಡಿಯುವವರನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಬೆಳವಣಿಗೆ ಇಂತಹ ಸಂಸ್ಥೆಗಳಿಗೆ ಬೇರೆಯವರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಡಾ.ಮನೋಜ್, ಡಾ.ಸಿದ್ದಲಿಂಗಪ್ಪ, ಡಾ.ಅಫ್ರಿದಿ, ಡಾ.ರಶ್ಮಿ ಇವರುಗಳಿಗೆ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೈದ್ಯಕೀಯ ಕ್ಷೇತ್ರದ 30 ಮಂದಿ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಉಪಾಧ್ಯಕ್ಷ ಗುರುಮೂರ್ತಿ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ನಂಜುಂಡೇಶ್ವರ, ಖಜಾಂಚಿ ಸುಮ, ಬೆಸ್ಕಾಂ ಗುತ್ತಿಗೆದಾರ ಪ್ರಸನ್ನ, ಕೊಪ್ಪಳದ ಶಶಿಧರ್ ಹಾಗೂ ಸಂಸ್ಥೆಯ ಪದಾಧಿಕಾರಿಗಳಾದ ಚಂದ್ರಿಕ, ಅನಿತ, ದೀಪಿಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Tags :
Advertisement