Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

10:48 PM Jul 26, 2024 IST | suddionenews
Advertisement

ಸುದ್ದಿಒನ್, ಹೊಳಲ್ಕೆರೆ, ಜುಲೈ. 26 : ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಬದಲಾಗಿ ಅದು ಹಾರುತ್ತಿರುವುದು ಈ ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ವಸಂತ್ ಹೇಳಿದರು.

Advertisement

ತಾಲ್ಲೂಕಿನ ಅರೇಹಳ್ಳಿಯ ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಸೈನಿಕರು ಮತ್ತು ರೈತ ದೇಶದ ಎರಡು ಕಣ್ಣುಗಳು ಇದ್ದಂತೆ. ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ. ಈ ವರ್ಷ 25 ನೇ ರಜತ ಮಹೋತ್ಸವ ಇದಾಗಿದೆ. ದೇಶದಾದ್ಯಂತ ಕಾರ್ಗಿಲ್ ವಿಜಯೋತ್ಸವ ದಿನವನ್ನು ಹೆಮ್ಮೆಯಪಡುವ ದಿನವಾಗಿ ಜುಲೈ 26 ರಂದು ಆಚರಿಸುತ್ತಾ ಬಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧ ಮೇ 3, 1999 ರಂದು ಪ್ರಾರಂಭವಾಗಿ ಜುಲೈ26, 1999 ಮುಗಿದು ಪಾಕಿಸ್ತಾನದ ವಿರುದ್ಧ ಜಯಗಳಿಸಿತು.

ಜುಲೈ ಕೊನೆಯ ವಾರದಲ್ಲಿ ಭಾರತ ಸೇನೆಯ ಅಂತಿಮ ದಾಳಿ ಆರಂಭಿಸಲು ಡ್ರೋನ್ಸ್ ಉಪವಲಯವನ್ನು ಪಾಕಿಸ್ತಾನದ ಪಡೆಗಳ ತೆರವು ಮಾಡಿದ ಕೂಡಲೇ ಜುಲೈ 26 ಹೋರಾಟ ತೆಗೆದುಕೊಂಡಿತು. ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿತು. ಆ ದಿನವನ್ನು ಕಾರ್ಗಿಲ್ ವಿಜಯ ದಿವಸ ಇಂದು ಭಾರತದಲ್ಲಿ ಗುರುತಿಸಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವೇಣುಗೋಪಾಲ್ ಜಿ. ಸಿ, ಶಿಕ್ಷಕರಾದ ಬಿ.ಎಂ. ಜಾನಕಮ್ಮ, ಶ್ರೀನಿವಾಸ್ ಆರ್. ರಾಕೇಶ್ ಕುಮಾರ್ ಡಿ. ಪಿ,  ಅರುಣ್ ಟಿ.ಪಿ.,  ಶಿವಶಂಕರ್ ಎಲ್. ಎಸ್, ಮನಿಷಾ ಎ. ಶೆಟ್ಟಿ ಹಾಗೂ ಶಾಲೆ ಮಕ್ಕಳು ಪೋಷಕರು ಉಪಸಿತರಿದ್ದರು.

Advertisement
Tags :
bengalurucelebrationchitradurgaholalkereKargil Vijaya DivasSneha Public Schoolsuddionesuddione newsಆಚರಣೆಕಾರ್ಗಿಲ್ ವಿಜಯ ದಿವಸ್ಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸ್ನೇಹ ಪಬ್ಲಿಕ್ ಶಾಲೆಹೊಳಲ್ಕೆರೆ
Advertisement
Next Article