ಹಿಟ್ ಅಂಡ್ ರನ್ ಕಾಯ್ದೆ | ಚಿತ್ರದುರ್ಗದಲ್ಲಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜ. 17 : ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು (2) ಕಾಯ್ದೆ ಅನ್ವಯ 10 ವರ್ಷ ಜೈಲು.7 ಲಕ್ಷ ದಂಡದ ಕಾನೂನನ್ನು ಹಿಂಪಡೆಯುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಮಿನಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರವರುಗೆ ಮನವಿ ಸಲ್ಲಿಸಿತು.
ದೇಶದ ಗೃಹಸಚಿವರಾದ ಅಮಿತ್ ಶಾ ರವರು ಇತ್ತೀಚೆಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು (2) ಕಾಯ್ದೆ ಅನ್ವಯ, 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಕಾನೂನು ಎಲ್ಲಾ ಮಾಲೀಕರು ಮತ್ತು ಚಾಲಕರಿಗೆ ಅಸಮಾಧಾನಕರವಾಗಿರುತ್ತದೆ. ಈ ಹಿಂದೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106(1) ಹಿಟ್ ಅಂಡ್ ರನ್ ಕೇಸ್ ಗೆ 2 ವರ್ಷ ಜೈಲು ಶಿಕ್ಷೆಯನ್ನು ಇದೀಗ ಹೊಸ ಭಾರತೀಯ ನ್ಯಾಯ ಸಂಹಿತೆ 106(2) ನಲ್ಲಿ ಮುಂದುವರೆಸಿ 10 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ದಂಡವನ್ನು ವಿಧಿಸುತ್ತದೆ ಎಂಬ ಕಾನೂನು ಇದು ಅತ್ಯಂತ ಅಮಾನವೀಯ ಹಾಗೂ ಚಾಲಕರ ಮೇಲೆ ಶೋಷಣೀಯಕರವಾಗಿರುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಮಿನಿ ಲಾರಿ ಮಾಲೀಕರು ಹಾಗೂ ಚಾಲಕರ ಸಂಘ ತಿಳಿಸಿದೆ.
ಮಾಲೀಕರು ಹಾಗೂ ಚಾಲಕರ ಹಿತದೃಷ್ಟಿ ಮತ್ತು ಮಾನವೀಯತೆಯ ಮೇರೆಗೆ ಈ ಪ್ರಸ್ತುತ ಲಾಗೂ ಮಾಡಿರುವ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು (2) ಕಾಯ್ದೆ ಅನ್ವಯ, 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಕಾನೂನನ್ನು ದಯಮಾಡಿ ಹಿಂಪಡೆಯಬೇಕೆಂದು ಚಿತ್ರದುರ್ಗ ಜಿಲ್ಲಾ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಹಾಗೆಯೇ ಈ ಕಾನೂನು ಹಿಂಪಡೆಯುವವರೆಗೆ ನಾವು ಸಮಸ್ತ ಮಾಲೀಕರು ಹಾಗೂ ಚಾಲಕರು ಅನಿರ್ಧಿಷ್ಟಾವಧಿ ಮುಷ್ಕರವನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.
ನಗರದ ಯೂನಿಯನ್ ಪಾರ್ಕ್‍ನಿಂದ ಗಾಂಧಿವೃತ್ತದ ಮೂಲಕ ಮುಖ್ಯ ಬಿ.ಡಿ. ರಸ್ತೆಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರಿಗೆ ಸುಮಾರು 200 ರಿಂದ 300 ಜನ ಪ್ರತಿಭಟನೆಯನ್ನು ನಡೆಸಿ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಚಿತ್ರದುರ್ಗ ಜಿಲ್ಲಾ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಬಿ.ಪ್ರಭು ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜು ವಹಿಸಿದ್ದರು.